ಹೈದರಾಬಾದ್ : ವಿವಾಹದ ನಂತರ ಮೊದಲ ಸಂಕ್ರಾಂತಿಗೆ ಅಳಿಯನನ್ನು ಗೌರವದಿಂದ ಬರಮಾಡಿಕೊಳ್ಳುವುದು ಅನೇಕ ಕುಟುಂಬಗಳಲ್ಲಿ ಶತಮಾನಗಳಿಂದ ನಡೆದುಕೊಂಡು ಬಂದ ಆಚರಣೆ. ಈ ಸಂದರ್ಭದಲ್ಲಿ ಅಳಿಯನಿಗಾಗಿ ನೂರಾರು ಬಗೆಯ ಸಿಹಿ–ಉಪ್ಪು ಪದಾರ್ಥಗಳನ್ನು ತಯಾರಿಸಿ ಆತಿಥ್ಯ ನೀಡಲಾಗುತ್ತದೆ. ಹೌದು ಇಲ್ಲೊಂದು ಕಡೆ, ಸಾವಿರಕ್ಕಿಂತಲೂ ಅಧಿಕ ತಿನಿಸುಗಳನ್ನು ಅಳಿಯನಿಗಾಗಿ ತಯಾರು ಮಾಡಲಾಗಿತ್ತು.
ವಿಶಾಖಪಟ್ಟಣಂ ಜಿಲ್ಲೆಯ ನರ್ಸೀಪಟ್ನಂ ಪಟ್ಟಣದಲ್ಲಿ, ನಲಂ ರಮೇಶ್ ಕುಮಾರ್ ಮತ್ತು ಕಲಾವತಿ ತಮ್ಮ ಅಳಿಯ ಶ್ರೀಹರ್ಷನ ಮೊದಲ ಸಂಕ್ರಾಂತಿಯನ್ನು ಸ್ಮರಣೀಯಗೊಳಿಸಲು 290 ಬಗೆಯ ಹಿಟ್ಟಿನಿಂದ ತಯಾರಿಸಿದ ಸಾಂಪ್ರದಾಯಿಕ ಪದಾರ್ಥಗಳನ್ನು ತಯಾರಿಸಿದರು. ಈ ಘಟನೆಗಳು ಆಂಧ್ರಪ್ರದೇಶದಲ್ಲಿ ಅಳಿಯನಿಗೆ ನೀಡುವ ಗೌರವ, ಸಂಸ್ಕೃತಿ ಮತ್ತು ಆತಿಥ್ಯದ ಆಳವಾದ ಬೇರುಗಳನ್ನು ತೋರಿಸುತ್ತವೆ. ಸಂಕ್ರಾಂತಿ ಹಬ್ಬವು ಇಲ್ಲಿ ಕೇವಲ ಒಂದು ಬೆಳೆಯ ಹಬ್ಬವಲ್ಲ, ಬದಲಾಗಿ ಅದು ಕುಟುಂಬ ಬಂಧಗಳನ್ನು ಇನ್ನಷ್ಟು ಬಲಪಡಿಸುವ ಕೊಂಡಿಯಾಗಿದೆ.

Andhra Couple Welcomes Son-in-Law with 290-Dish Feast
Narsipatnam
Celebrating their daughter’s first Sankranti after marriage, Nalem Ramesh Kumar and his wife Kalavathi hosted a spectacular “#Godavari-style” lunch for their son-in-law, Sriharsha.
The couple prepared 290… pic.twitter.com/D6yv2INtkw— Yasir Mushtaq (@path2shah) January 15, 2026
ಅಳಿಯನಿಗಾಗಿ 158 ವಿಭಿನ್ನ ಪದಾರ್ಥ ;
ಇನ್ನು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿ ಪಟ್ಟಣದ ಕುಟುಂಬ ಈ ವರ್ಷದ ಸಂಕ್ರಾಂತಿ ಹಬ್ಬವನ್ನು ವಿಭಿನ್ನ ರೀತಿಯಲ್ಲಿ ಆಚರಿಸಿ ಎಲ್ಲರ ಗಮನ ಸೆಳೆದಿದೆ. ಈ ಕುಟುಂಬವೊಂದು, ಅಳಿಯನಿಗಾಗಿ 158 ವಿಭಿನ್ನ ಪದಾರ್ಥಗಳನ್ನು ತಯಾರಿಸುವ ಮೂಲಕ ಸಂಪ್ರದಾಯ, ಆತಿಥ್ಯ ಮತ್ತು ಕುಟುಂಬದ ಪ್ರೀತಿಗೆ ಜೀವಂತ ಉದಾಹರಣೆ ನೀಡಿದೆ.
A heartwarming Andhra tradition !
In Tenali, Guntur district, a family prepared an incredible 158 dishes for their son-in-law Sridatta during his first Sankranti with them after marriage. pic.twitter.com/s97HLkqssD
— Neetu Khandelwal (@T_Investor_) January 15, 2026
ಕಳೆದ ವರ್ಷ ವಿವಾಹವಾದ ದಂಪತಿಗೆ ಇದು ಮೊದಲ ಸಂಕ್ರಾಂತಿ ಆಗಿದ್ದರಿಂದ ಈ ಆಚರಣೆಗೆ ಇಲ್ಲಿ ವಿಶೇಷ ಮಹತ್ವವಿತ್ತು. ಹೌದು… ಆಂಧ್ರದ ಅನೇಕ ಕುಟುಂಬಗಳಲ್ಲಿ ಸಂಕ್ರಾಂತಿ ಕೇವಲ ಹಬ್ಬವಲ್ಲ, ಅದು ಕುಟುಂಬ ಸಂಬಂಧಗಳು, ಕೃತಜ್ಞತೆ ಮತ್ತು ಸಂಪ್ರದಾಯಗಳನ್ನು ಒಟ್ಟುಗೂಡಿಸುವ ಭಾವನಾತ್ಮಕ ಸಂದರ್ಭ. ವಿಶೇಷವಾಗಿ ನವವಿವಾಹಿತ ದಂಪತಿಗೆ ಮೊದಲ ಸಂಕ್ರಾಂತಿ ಅತ್ಯಂತ ಮಹತ್ವ ಪಡೆದಿರುತ್ತದೆ. ಈ ಕಾರಣಕ್ಕಾಗಿ ತೆನಾಲಿಯ ಕುಟುಂಬ ಸಂಪ್ರದಾಯಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಸಂಭ್ರಮ ಆಚರಿಸಿದೆ.
ಇದನ್ನೂ ಓದಿ :Karkala: ಅಪ್ರಾಪ್ತರಿಂದ ಪರಶುರಾಮ ಥೀಮ್ ಪಾರ್ಕಿನಲ್ಲಿ ಫ್ಯಾನ್ ಕಳ್ಳತನ
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

