ಮಂಗಳೂರು : ನ್ಯೂ ಇಂಡಿಯಾ ಸ್ಕೀಂ ಹೆಸರಿನಲ್ಲಿ ಸಾವಿರಾರು ಮಂದಿಗೆ ನೂರಾರು ಕೋಟಿ ವಂಚಿಸಿದ ಪ್ರಕರಣ ಸಂಬಂಧ ಹಣ ಕಳೆಂದುಕೊಂಡ ಸಂತ್ರಸ್ತರು ಇಂದು ಮಂಗಳೂರಿನ ಟವರ್ ಕ್ಲಾಕ್ ಮುಂಭಾಗ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು. ಜನರನ್ನು ವಂಚಿಸಿದ ನ್ಯೂ ಇಂಡಿಯಾ ಲಕ್ಕಿ ಸ್ಕೀಂನ ಎಂಡಿ ಅಶ್ರಫ್ ಮತ್ತು ಮ್ಯಾನೇಜರ್ ಹನೀಫ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ವಂಚನೆಗೊಳಗಾದ ಜನರಿಗೆ ನ್ಯಾಯ ಒದಗಿಸಿಕೊಡಬೇಕು ಹಾಗೂ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ಲೇಡ್ ಕಂಪನಿಗಳಿಂದ ಜನರನ್ನು ರಕ್ಷಿಸುವಂತೆ ಒತ್ತಾಯಿಸಿ ಮಂಗಳೂರು ಲಕ್ಕಿ ಸ್ಕೀಂ ಸಂತ್ರಸ್ತರ ವೇದಿಕೆಯು ಪ್ರತಿಭಟನೆ ನಡೆಸಿತು.
ಪೊಲೀಸರಿಗೆ ದೂರು ಕೊಡುತ್ತೇವೆ ಎಂದರೂ ಮಾಲಕರಿಗೆ ಯಾವುದೇ ಭಯ ಇಲ್ಲ. ಕರೆ ಮಾಡಿದರೆ ಸ್ವೀಕರಿಸುತ್ತಿಲ್ಲ. ಮನೆ, ಚಿನ್ನ, ಕಾರು, ಹಣ, ಬೈಕ್ ಇತ್ಯಾದಿಗಳನ್ನು ಹೊಂದುವ ಕನಸನ್ನು ಕಟ್ಟಿಕೊಂಡಿರುವ ಬಡ ಜನರು ಕೂಡ ಈ ಲಕ್ಕಿ ಸ್ಕೀಂಗೆ ಹಣ ಕಟ್ಟಿದ್ದಾರೆ. ಬಡವರ ಹಣವನ್ನು ಹಿಂದಿರುಗಿಸಿ ನಮಗೆ ನ್ಯಾಯ ಒದಗಿಸಿಕೊಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ : Beltangady : ಬಾಲಕನ ಸಾವಿನ ಸುತ್ತ ಅನುಮಾನದ ಹುತ್ತ; ಕೊಲೆ ಶಂಕೆ

ಏನಿದು ಲಕ್ಕಿ ಸ್ಕೀಂ ?
ಎಂಡಿ ಅಶ್ರಫ್ ಅವರ ನ್ಯೂ ಇಂಡಿಯಾ ಲಕ್ಕಿ ಸ್ಕೀಂ ಹೆಸರಿನಲ್ಲಿ ಮಾಸಿಕ 1000 ರೂ. ಪಾವತಿಯೊಂದಿಗೆ ಲಕ್ಕಿ ಡ್ರಾ ನಡೆಸಲಾಗುತ್ತಿತ್ತು. ತಿಂಗಳ ಡ್ರಾದಲ್ಲಿ ಒಂದು ಮಹಡಿಯ ಮನೆ, ಕಾರು, ಚಿನ್ನಾಭರಣ, ನಗದು, ಬೈಕ್ ಇತ್ಯಾದಿ ಬಂಪರ್ ಬಹುಮಾನಗಳನ್ನು ನೀಡಲಾಗಿದೆ. ಅನೇಕ ಡ್ರಾಗಳು ಕೂಡ ನಡೆದು ಬಹುಮಾನ ವಿತರಣೆಯೂ ನಡೆದಿದೆ. ಆದರೆ ಇತ್ತೀಚೆಗೆ ಹಣ ಪಾವತಿಸಿಕೊಂಡ ನಂತರ ಲಕ್ಕಿ ಡ್ರಾ ನಡೆಸದೆ ಈ ತಿಂಗಳ ಡ್ರಾ ಮುಂದಿನ ತಿಂಗಳಿಗೆ ಮುಂದೂಡಲಾಗಿದೆ ಎಂದು ನಂಬಿಸಲಾಯಿತು. ಬಳಿಕವೂ ಡ್ರಾ ನಡೆಯದೇ ಇದ್ದಾಗ ಎಚ್ಚೆತ್ತ ಏಜೆಂಟರು ಹಾಗೂ ಗ್ರಾಹಕರು ಪ್ರಶ್ನಿಸಲು ಮುಂದಾದರು. ಅನೇಕ ಸಭೆಗಳನ್ನೂ ನಡೆಸಲಾಯಿತು. ಎಂಡಿ ಅಶ್ರಫ್ ಬಂಧನವಾಗಿ ಬಿಡುಗಡೆಯೂ ಆದರು. ಬಳಿಕದ ಸನ್ನಿವೇಶಗಳಲ್ಲಿ ಹಣ ನೀಡುತ್ತೇನೆ ಎಂದು ಸಮಯ ಕೇಳಿದ ಎಂಡಿ ಅಶ್ರಫ್ ಯಾರ ಕೈಗೂ ಸಿಗದೆ ಅಜ್ಞಾತ ಸ್ಥಳದಲ್ಲಿ ತಲೆಮರೆಸಿಕೊಂಡಿದ್ದಾರೆ.
ಇದನ್ನೂ ಓದಿ :Iran : ಸರ್ಕಾರ ವಿರೋಧಿ ಪ್ರತಿಭಟನೆ : ಇರಾನ್ ಅಶಾಂತಿ ನಡುವೆ ಜೈಶಂಕರ್‌ಗೆ ಅರಾಘ್ಚಿ ಕರೆ
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

