Breaking News

T20 Worldcup: ಇಟಲಿ ವಿರುದ್ಧ ಸುಲಭ ಜಯ ಸಾಧಿಸಿದ ಸ್ಕಾಟ್ಲೆಂಡ್

ಕೊಲ್ಕತ್ತಾ: ಟಿ-20 ವಿಶ್ವಕಪ್‌ನ 7 ನೇ ಪಂದ್ಯದಲ್ಲಿ ಇಟಲಿ ತಂಡದ ವಿರುದ್ದ ಸ್ಕಾಟ್ಲೆಂಡ್ ತಂಡ 73 ರನ್‌ಗಳ ಸುಲಭ ಜಯ ಸಾಧಿಸಿದೆ.

ಇಲ್ಲಿನ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಇಟಲಿ ಟಾಸ್‌ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು, ಸ್ಕಾಟ್ಲಂಡ್‌ನ ಆರಂಭಿಕರಾದ ಜಾರ್ಜ್ ಮುನ್ಸೆ ಮತ್ತು ಮೈಕೆಲ್ ಜೋನ್ಸ್ 126 ರನ್‌ಗಳ ಆರಂಭಿಕ ಪಾಲುದಾರಿಕೆಯನ್ನು ಹಂಚಿಕೊಂಡರು. ಮುನ್ಸೆ 54 ಎಸೆತಗಳಲ್ಲಿ, 13 ಬೌಂಡರಿಗಳು ಮತ್ತು 2 ಸಿಕ್ಸರ್‌ಗಳನ್ನು ಬಾರಿಸಿ 84 ರನ್ ಗಳಿಸಿದರು.

Advertisement

ಇದನ್ನೂ ಓದಿ: ಸಲ್ಮಾನ್ ಖಾನ್ ಶ್ರೇಷ್ಠ, ಉತ್ತಮ ವ್ಯಕ್ತಿ ಎಂದು ಕೊಂಡಾಡಿದ RSS ಮುಖ್ಯಸ್ಥ ಮೋಹನ್ ಭಾಗ್ವತ್

ಬ್ರಾಂಡನ್ ಮೆಕ್‌ಮಲ್ಲೆನ್ (18 ಎಸೆತಗಳಲ್ಲಿ 41*) ಮತ್ತು ಮೈಕೆಲ್ ಲೀಸ್ಕ್ (5 ಎಸೆತಗಳಲ್ಲಿ 22*) ಇನ್ನಿಂಗ್ಸ್‌ನ ಕೊನೆಯಲ್ಲಿ ದಾಳಿ ನಡೆಸಿ, ಸ್ಕಾಟ್ಲಂಡ್ ತಂಡವನ್ನು ಟೂರ್ನಿಯ ಇತಿಹಾಸದಲ್ಲಿ ಮೊದಲ ಬಾರಿಗೆ 200 ರನ್‌ಗಳ ಗಡಿ ದಾಟಿಸಿದರು.

ಇಟಲಿಯ ಚೇಸಿಂಗ್ ಆಶಾಧಾಯಕವಾಗಿರಲಿಲ್ಲ, ಜಸ್ಟಿನ್ ಮೊಸ್ಕಾ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದರು.

ನಾಯಕ ವೇಯ್ಸ್ ಮ್ಯಾಡೈನ್ ಮೊದಲ ಇನ್ನಿಂಗ್ಸ್‌ನಲ್ಲಿ ಡೈವಿಂಗ್ ಮಾಡುವಾಗ ಭುಜದ ಗಾಯದಿಂದ ಮೈದಾನದಿಂದ ಹೊರಹೋಗಬೇಕಾಯಿತು, ಅಂತಿಮವಾಗಿ ಅವರು ಬ್ಯಾಟಿಂಗ್‌ ಮಾಡಲು ಸಾಧ್ಯವಾಗಲಿಲ್ಲ.

ಈ ಗೊಂದಲದ ನಡುವೆಯೂ, ಮಾನೆಂಟಿ ಸಹೋದರರು ಭರವಸೆಯ ಆಟ ಆಡಿದರು. ಬೆನ್ ಮಾನೆಂಟಿ ದೇಶದ ಮೊದಲ T20 ವಿಶ್ವಕಪ್ ಅರ್ಧಶತಕವನ್ನು (31 ಎಸೆತಗಳಲ್ಲಿ 52) ಗಳಿಸುವ ಮೂಲಕ ಇಟಾಲಿಯನ್ ಕ್ರಿಕೆಟ್ ಇತಿಹಾಸದಲ್ಲಿ ತಮ್ಮ ಹೆಸರನ್ನು ಬರೆದರು. ಅವರು ಮತ್ತು ಹ್ಯಾರಿ ಮಾನೆಂಟಿ ( 37 ಎಸೆತಗಳಲ್ಲಿ 73 ರನ್‌ಗಳ ಜೊತೆಯಾಟ ನಡೆಸಿದರು.

ಮೈಕಲ್ ಲೀಸ್ಕ್ ದಾಳಿಗೆ ಸಿಲುಕಿ ಇಟಲಿ ತತ್ತರಿಸಿತು. ಇಟಲಿ ಕೊನೇ 7 ವಿಕೆಟ್‌ಗಳನ್ನು 21 ರನ್ ಅಂತರದಲ್ಲಿ ಕಳೆದುಕೊಂಡಿತು.

ಕೊನೆಯಲ್ಲಿ 73 ರನ್ ಅಂತರದಲ್ಲಿ ಸ್ಕಾಟ್ಲೆಂಡ್ ಪಂದ್ಯವನ್ನು ತನ್ನದಾಗಿಸಿಕೊಂಡಿತು.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು