ಹೆಚ್ಚು ಸಮಯ ಮೊಬೈಲ್ ಅಥವಾ ಲ್ಯಾಪ್ಟಾಮ್ ಬಳಕೆ ಹೃದಯ ಸಂಬಂಧಿತ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸಬಹುದು ಎಂಬ ಆತಂಕಕಾರಿ ಮಾಹಿತಿ ಇತ್ತೀಚಿನ ಅಧ್ಯಯನದಿಂದ ಹೊರಬಿದ್ದಿದೆ.
ಕೆಲಸದ ನಿಮಿತ್ತವಾಗಲಿ, ಮನರಂಜನೆ ಅಥವಾ ಸಾಮಾಜಿಕ ಜಾಲತಾಣಗಳ ಬಳಕೆಯಾಗಲಿ, ದೀರ್ಘಕಾಲ ಸ್ಕ್ರೀನ್ ಮುಂದೆ ಕಳೆಯುವವರು ಹೃದಯ ಸಮಸ್ಯೆಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ವಿಶೇಷವಾಗಿ ಸ್ಕ್ರೀನ್ ಬಳಕೆಯಿಂದ ಉಂಟಾಗುವ ಕುಳಿತ ಜೀವನಶೈಲಿ (Sedentary lifestyle) ಹೃದಯ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದ ರಕ್ತ ಸಂಚಲನ ಕಡಿಮೆಯಾಗುವುದು, ರಕ್ತದೊತ್ತಡ ಹೆಚ್ಚುವುದು ಹಾಗೂ ದೇಹದ ಮೆಟಾಬಾಲಿಸಂ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ.
ಇದನ್ನೂ ಓದಿ: ಮೊಡವೆ, ಚರ್ಮ ಸಮಸ್ಯೆಗೆ ದೀರ್ಘಕಾಲ ಔಷಧಿ ಬಳಕೆ ಲಾಭಕ್ಕಿಂತ ಹಾನಿಯೇ ಹೆಚ್ಚು
ಆದ್ದರಿಂದ ಯುವಕರು ಸ್ಕ್ರೀನ್ ಟೈಮ್ ನಿಯಂತ್ರಿಸಿಕೊಳ್ಳುವುದು, ನಿಯಮಿತ ವ್ಯಾಯಾಮ ಮಾಡುವುದು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದು ಅಗತ್ಯ ಎಂದು ತಜ್ಞರು ಸಲಹೆ ನೀಡಿದ್ದಾರೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

