Breaking News

Cricket: ವಿಶಿಷ್ಟ ದಾಖಲೆ ಬರೆದ ಶಮರ್ ಜೋಸೆಫ್

ಕೊಲ್ಕತ್ತಾ: ಕ್ರಿಕೆಟ್ ಮೈದಾನದಲ್ಲಿ ಒಂದಲ್ಲ ಒಂದು ದಾಖಲೆ ಸೃಷ್ಟಿಯಾಗುತ್ತಲೇ ಇರುತ್ತದೆ. ಮತ್ತೊಂದು ದಿನ ಅದನ್ನು ಮುರಿದು ಹೊಸ ದಾಖಲೆಗಳು ಸೃಷ್ಟಿಯಾಗುತ್ತಿರುತ್ತವೆ.

ಟಿ-20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ವೆಸ್ಟ್ ಇಂಡೀಸ್ ತಂಡದ ಶಮರ್ ಜೋಸೆಫ್ ಒಂದು ವಿಶಿಷ್ಟವಾದ ದಾಖಲೆ ಸೃಷ್ಟಿಸಿದ್ದಾರೆ. ಅದೂ ಕೂಡ ಮಹಿಳಾ ಮತ್ತು ಪುರುಷರ ಒಡಿಐ ಮತ್ತು ಟಿ-20 ಯಲ್ಲಿ ಇದುವರೆಗೂ ಯಾರೂ ಮಾಡದ ದಾಖಲೆಯನ್ನು ಸೃಷ್ಟಿಸಿದ್ದಾರೆ.

Advertisement

ಇದನ್ನೂ ಓದಿ: T20 Worldcup: ಗೆಲುವಿನೊಂದಿಗೆ ವಿಶ್ವಕಪ್ ಅಭಿಯಾನ ಮುಗಿಸಿದ ಅಫ್ಘಾನಿಸ್ತಾನ

ಇಲ್ಲಿನ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಇಟಲಿ ವಿರುದ್ಧ ನಡೆದ ಪಂದ್ಯದಲ್ಲಿ ನಾಲ್ಕು ವಿಕೆಟ್ ಪಡೆಯುದರ ಜೊತೆಗೆ ನಾಲ್ಕು ಕ್ಯಾಚ್‌ಗಳನ್ನು ಹಿಡಿದು ಈ ದಾಖಲೆಗೆ ಪಾತ್ರರಾಗಿದ್ದಾರೆ.

ಈ ಹಿಂದೆ 3 ಜನ ನಾಲ್ಕು ವಿಕೆಟ್ ಪಡೆದು ಮೂರು ಕ್ಯಾಚ್ ಪಡೆದ ದಾಖಲೆ ಹೊಂದಿದ್ದರು. ವೆಸ್ಟ್ ಇಂಡೀಸ್‌ನ ಡೇರನ್ ಸಮಿ, ಇಂಗ್ಲೆಂಡ್‌ನ ಜೋಫ್ರ ಆರ್ಚರ್ ಮತ್ತು ಹಂಗೇರಿಯ ಸಾದತ್ ಸೈದ್.

ಇದೀಗ ನಾಲ್ಕು ಕ್ಯಾಚ್ ಪಡೆಯುವ ಮೂಲಕ ಶಮರ್ ಈ ದಾಖಲೆಯನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು