ಜೆಎನ್ ಯು : ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಆವರಣದಲ್ಲಿ, 2020 ರ ರಾಷ್ಟ್ರವಿರೋಧಿ ಘಟನೆಯ ಆರನೇ ವಾರ್ಷಿಕೋತ್ಸವವನ್ನ ಎಡಪಂಥೀಯ ವಿದ್ಯಾರ್ಥಿ ಗುಂಪುಗಳು ಆಯೋಜಿಸಿದ್ದವು. ಈ ವೇಳೆ, ಕೆಲ ವಿದ್ಯಾರ್ಥಿಗಳು, “ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ವಿರುದ್ಧ ಆಕ್ಷೇಪಾರ್ಹ, ಪ್ರಚೋದನಕಾರಿ ಮತ್ತು ಉದ್ರೇಕಕಾರಿ ಘೋಷಣೆಗಳನ್ನು” ಕೂಗುತ್ತಿರುವುದು ಕಂಡುಬಂದಿದ್ದು, ಇದೀಗ ಈ ಘೋಷಣೆ ಸಲುವಾಗಿ ಭಾರೀ ದೊಡ್ಡಮಟ್ಟದಲ್ಲಿ ಕಿಚ್ಚನ್ನು ಹಬ್ಬಿಸುವಂತಿದೆ.
ಜೆಎನ್ ಯುನಲ್ಲಿ ಹುಟ್ಟಿದ ಶರ್ಜೀಲ್ ಇಮಾಮ್ನ ಸಂತತಿಯ ಉದ್ದೇಶಗಳನ್ನು ನುಚ್ಚುನೂರಾಗಿಸಲಾಗುತ್ತದೆ ;

ಈ ವಿವಾದಕ್ಕೆ ಬಿಜೆಪಿ ತೀವ್ರವಾಗಿ ಪ್ರತಿಕ್ರಿಯಿಸಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ‘ಜೆಎನ್ ಯುನಲ್ಲಿ ಹುಟ್ಟಿದ ಶರ್ಜೀಲ್ ಇಮಾಮ್ನ ಸಂತತಿಯ ಉದ್ದೇಶಗಳನ್ನು ನುಚ್ಚುನೂರಾಗಿಸಲಾಗುತ್ತದೆ’ ಎಂದು ಹೇಳಿಕೆ ನೀಡಿದ್ದು, ದ್ರೋಹಿಗಳ ಪರ ನಿಂತಿರುವ ಈ ರೀತಿಯ ಅಪವಿತ್ರ ಉದ್ದೇಶಗಳನ್ನು ನಾವು ಎಂದಿಗೂ ಸಹಿಸುವುದಿಲ್ಲ, ಎಂದು ಅವರು ಹೇಳಿದರು.
ಇದನ್ನೂ ಓದಿ : ಮೋದಿ, ಶಾ ಸಮಾಧಿ ತೋಡುತ್ತೇವೆ : JNU ವಿದ್ಯಾರ್ಥಿಗಳಿಂದ ಆಕ್ಷೇಪಾರ್ಹ ಘೋಷಣೆ
ರಾಷ್ಟ್ರವಿರೋಧಿ ಚಿಂತನೆ ಹಾಗೂ ಬೌದ್ಧಿಕ ಭಯೋತ್ಪಾದನೆ ;
ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಕೂಡ ಘಟನೆಯನ್ನು ಖಂಡಿಸಿ, ಜೆಎನ್ ಯು, ಟುಕ್ಡೆ-ಟುಕ್ಡೆ ಗ್ಯಾಂಗ್ ಮತ್ತು ‘ಪಾಕಿಸ್ತಾನ ಪರ ಅಂಶಗಳ ಕ್ಯಾಂಪ್ ಕಚೇರಿ’ಯಾಗಿ ಮಾರ್ಪಟ್ಟಿದೆ ಎಂದು ಆರೋಪಿಸಿದರು. ಜೊತೆಗೆ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP), ಈ ಘೋಷಣೆಗಳನ್ನು “ವಿವಾದಾತ್ಮಕ” ಎಂದು ಹೇಳಿ, ಇದು ರಾಷ್ಟ್ರವಿರೋಧಿ ಚಿಂತನೆ ಹಾಗೂ ಬೌದ್ಧಿಕ ಭಯೋತ್ಪಾದನೆ ಎಂದು ಆರೋಪಿಸಿದೆ.
ಆದರೆ ಈ ಆರೋಪಗಳನ್ನು ತಳ್ಳಿ ಹಾಕಿದ JNUSU ಅಧ್ಯಕ್ಷೆ ಆದಿತಿ ಮಿಶ್ರಾ, ‘ನಾವು ಕೂಗಿದ ಘೋಷಣೆಗಳು ಸಂಪೂರ್ಣವಾಗಿ ತಾತ್ವಿಕವಾಗಿದ್ದು, ಯಾರ ಮೇಲೂ ವೈಯಕ್ತಿಕ ದಾಳಿ ಮಾಡಿಲ್ಲ,’ ಎಂದು ಆಜ್ ತಕ್ಗೆ ತಿಳಿಸಿದ್ದಾರೆ. ವಿಸ್ತೃತ ಹೇಳಿಕೆಯಲ್ಲಿ JNUSU, ಈ ವಿವಾದವು JNUಯನ್ನು ಅಪಖ್ಯಾತಿಗೆ ತರುವ ಹಾಗೂ ನಿಜವಾದ ಸಮಸ್ಯೆಗಳಿಂದ ಗಮನ ಬೇರೆಡೆ ತಿರುಗಿಸುವ ಉದ್ದೇಶಿತ ಪ್ರಯತ್ನ ಎಂದು ಆರೋಪಿಸಿದೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

