ನವದೆಹಲಿ: ಕ್ರಿಕೆಟ್ ಪಂದ್ಯಾಟ ಮುಗಿದ ಮೇಲೆ ಉಳಿದ ತಂಪು ಪಾನೀಯವನ್ನು ಮತ್ತೆ ಬಾಟಲಿಗೆ ತುಂಬಿಸುತ್ತಿರುವ ಅಂಗಡಿಯಾತನ ವಿಡಿಯೋ ವೈರಲ್ ಆಗಿದೆ.
ಈ ಬಾರಿಯ ಟಿ -20 ವಿಶ್ವಕಪ್‌ಗೆ ರಂಗೇರಿದ್ದು ಈಗಾಗಲೇ ಎಲ್ಲಾ ಗುಂಪಿನ ಪಂದ್ಯಗಳು ಆರಂಭಗೊಂಡಿದೆ. ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ವಿಶ್ವಕಪ್‌ನ ಆಯೋಜಿಸಿದೆ.

ಇದನ್ನೂ ಓದಿ: ಕರ್ನಾಟಕದಾದ್ಯಂತ ಲೋಕಾಯುಕ್ತ ದಾಳಿ: ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀಕ್ಷಕ ಎಂಜಿನಿಯರ್ ಮನೆಯಲ್ಲಿ ಕಂತೆ ಕಂತೆ ಹಣ
ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದರೆ ಆಯೋಜಕರಿಗೆ ಮತ್ತು ಅಲ್ಲಿನ ವ್ಯಾಪಾರಿಗಳಿಗೆ ಲಾಭವೇ.
ಆದರೆ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಪಂದ್ಯಾಟ ಮುಗಿದ ಮೇಲೆ ಅಲ್ಲಿನ ಅಂಗಡಿಯಾತ ಉಳಿದ ತಂಪು ಪಾನೀಯವನ್ನು ಮತ್ತೆ ಬಾಟಲಿಗೆ ಸುರಿಯುತ್ತಿರುವ ದೃಶ್ಯ ಸೆರೆಯಾಗಿದೆ.
🚨 Shocking Visuals from Arun Jaitley Stadium 🏟️ 🚨
Viral video claims leftover drinks were reused at Arun Jaitley Stadium during ICC T20 World Cup. pic.twitter.com/VSiOBnAlkP
— Indian Cricket (@IPL2025Auction) February 12, 2026
ಕ್ರೀಡಾಕೂಟಕ್ಕೆ ಬಂದಿದ್ದ ಪ್ರೇಕ್ಷಕರೋರ್ವರು ವಿಡಿಯೋವನ್ನು ವೈರಲ್ ಮಾಡಿದ್ದು ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.
ಅಂತರರಾಷ್ಟ್ರೀಯ ಪಂದ್ಯಾಟ ನಡೆಯುತ್ತಿರುವ ಸಂದರ್ಭ ಈ ರೀತಿ ಅಶುಚಿತ್ವದ ನಡೆ ದೇಶದ ಮಾನವನ್ನು ಹಾಳು ಮಾಡಿದೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

