ದೇವರಾಜು ಅರಸು ಅಧಿಕಾರಾವಧಿ ದಾಖಲೆ ಮುರಿದ ಸಿದ್ದರಾಮಯ್ಯ; ರಾಜ್ಯದ ದೀರ್ಘಾವಧಿ ಸಿಎಂ

Siddaramaiah break Devaraj arasu record and becomes the state's longest-serving CM

ಬೆಂಗಳೂರು: ತಮ್ಮ ಸ್ಥಾನದ ಮೇಲೆ ಅಭದ್ರತೆ ಕಾಣುತ್ತಿರುವ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಜಿ ಮುಖ್ಯಮಂತ್ರಿ ದಿ. ದೇವರಾಜು ಅರಸು ಅವರ ದಾಖಲೆ ಮುರಿದು ರಾಜ್ಯದ ಅತ್ಯಂತ ದೀರ್ಘಾವಧಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕಳೆದ ಐದು ದಶಕಗಳ ರಾಜ್ಯದ ಇತಿಹಾಸದಲ್ಲಿ ದೇವರಾಜು ಅರಸು ಮತ್ತು ಸಿದ್ದರಾಮಯ್ಯ ಅವರು ಮಾತ್ರ ಐದು ವರ್ಷಗಳ ಸಿಎಂ ಸ್ಥಾನವನ್ನು ಪೂರ್ಣಗೊಳಿಸಿದವರಾಗಿದ್ದಾರೆ. ಮಂಗಳವಾರದಂದು (ಜ.6) ಸಿದ್ದರಾಮಯ್ಯ ಅವರು ರಾಜ್ಯದ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ 2,792 ದಿನಗಳ ದಾಖಲೆಯನ್ನು ಸರಿಗಟ್ಟಿದ್ದರು ಮತ್ತು ಇಂದು (ಜ.7 ರಂದು) ಅವರ ದಾಖಲೆಯನ್ನು ಮುರಿದಿದ್ದಾರೆ.

Advertisement

ಇದನ್ನೂ ಓದಿ: ನವೆಂಬರ್ ಕ್ರಾಂತಿ ನಂತರ ಸಿದ್ದರಾಮಯ್ಯರಿಗೆ ಸಂʼಕ್ರಾಂತಿʼ ಭೀತಿ

2023 ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಬೀಗಿದ್ದ ಕಾಂಗ್ರೆಸ್‌, ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ 50-50 ಹಂಚಿಕೆಯಾಗಿತ್ತು. ಆರಂಭದ ಎರಡೂವರೆ ವರ್ಷ ಸಿದ್ದರಾಮಯ್ಯ ಅವರು ಉಳಿದ ಎರಡೂವರೆ ವರ್ಷಕ್ಕೆ ಡಿಕೆ ಶಿವಕುಮಾರ್‌ ಅವರು ಮುಖ್ಯಮಂತ್ರಿ ಎಂಬ ಒಪ್ಪಂದವನ್ನು ಮಾಡಲಾಗಿತ್ತು. ನವೆಂಬರ್ 20 ರಂದು ಕಾಂಗ್ರೆಸ್ ಸರ್ಕಾರ ತನ್ನ ಐದು ವರ್ಷಗಳ ಅವಧಿಯ ಅರ್ಧವನ್ನು ಪೂರ್ಣಗೊಳಿಸಿದ ನಂತರ, ಮುಖ್ಯಮಂತ್ರಿ ಬದಲಾವಣೆಯ ಊಹಾಪೋಹಗಳು ಕೇಳಿಬರುತ್ತಲೇ ಇದೆ. ಅಲ್ಲದೆ, ನವೆಂಬರ್‌ ಕ್ರಾಂತಿ ಸುದ್ದು ಮಾಡಿ ಇದೀಗ ಸಂಕ್ರಾಂತಿ ಕ್ರಾಂತಿ ಚರ್ಚೆ ನಡೆಯುತ್ತಿದೆ. ಈ ನಡುವೆಯೇ ಸಿದ್ದರಾಮಯ್ಯ ಅವರು ಈ ಹೊಸ ಇತಿಹಾಸ ಬರೆದಿದ್ದಾರೆ.

Advertisement

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು