ಮುಂಬೈ : ಬಾಲಿವುಡ್ನ ಖ್ಯಾತ ಪ್ಲೇಬ್ಯಾಕ್ ಗಾಯಕ ಹಾಗೂ ಎರಡು ಬಾರಿ ರಾಷ್ಟ್ರ ಪ್ರಶಸ್ತಿ ವಿಜೇತರಾದ ಅರ್ಜಿತ್ ಸಿಂಗ್ ಅವರು ಚಿತ್ರರಂಗದ ಪ್ಲೇಬ್ಯಾಕ್ ಗಾಯನದಿಂದ ನಿವೃತ್ತಿಯಾಗುವುದಾಗಿ ಘೋಷಿಸಿದ್ದು, ಅಭಿಮಾನಿಗಳು ಹಾಗೂ ಸಂಗೀತ ವಲಯದಲ್ಲಿ ಇದೀಗ ಅಚ್ಚರಿಗೆ ಕಾರಣವಾಗಿದೆ.
ಮಂಗಳವಾರ ರಾತ್ರಿ ಇನ್ಸ್ಟಾಗ್ರಾಂನಲ್ಲಿ ಹೊಸ ವರ್ಷದ ಶುಭಾಶಯ ಕೋರಿದ ಅವರು, ಇನ್ನೆಂದಿಗೂ ಹೊಸ ಪ್ಲೇಬ್ಯಾಕ್ ಗಾಯನ ಸ್ವೀಕರಿಸುವುದಿಲ್ಲ. ಇದು ಅದ್ಭುತವಾದ ಪ್ರಯಾಣವಾಗಿತ್ತು, ಎಂದು ತಿಳಿಸಿದ್ದಾರೆ. ಈ ಘೋಷಣೆ ಸಲ್ಮಾನ್ ಖಾನ್ ಅಭಿನಯದ Battle of Galwan ಚಿತ್ರದ ‘ಮಾತೃಭೂಮಿ’ ಹಾಡು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಬಂದಿದೆ. ಇದೇ ವೇಳೆ, ಅವರ ಖಾಸಗಿ ಎಕ್ಸ್ (ಹಳೆಯ ಟ್ವಿಟರ್) ಖಾತೆಯಿಂದ ಸಂದೇಶಗಳ ಸ್ಕ್ರೀನ್ಶಾಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಇದನ್ನೂ ಓದಿ : KSRTC : ನಾಳೆ ಸಾರಿಗೆ ನೌಕರರ ಮುಷ್ಕರ: ‘ನೋ ವರ್ಕ್ ನೋ ಪೇ’ ಜಾರಿ
ಆ ಸಂದೇಶದಲ್ಲಿ ಅರ್ಜಿತ್ ಸಿಂಗ್ ತಮ್ಮ ನಿರ್ಧಾರದ ಹಿಂದೆ ಹಲವು ಕಾರಣಗಳಿವೆ ಎಂದು ಹೇಳಿದ್ದಾರೆ. “ನಾನು ಬೇಗ ಬೇಸರಗೊಳ್ಳುವ ಸ್ವಭಾವದವನು. ಅದಕ್ಕಾಗಿಯೇ ಒಂದೇ ಹಾಡನ್ನು ವಿಭಿನ್ನ ರೀತಿಯಲ್ಲಿ ಪ್ರಸ್ತುತಪಡಿಸುತ್ತೇನೆ. ಸತ್ಯ ಹೇಳಬೇಕೆಂದರೆ, ನನಗೆ ಪ್ಲೇಬ್ಯಾಕ್ ಗಾಯನದಲ್ಲಿ ಸ್ವಲ್ಪ ಬೇಸರವಾಗಿದೆ,” ಎಂದು ಅವರು ಬರೆದಿದ್ದಾರೆ.
2005ರಲ್ಲಿ Fame Gurukul ರಿಯಾಲಿಟಿ ಶೋ ಮೂಲಕ ಗುರುತಿಸಿಕೊಂಡ ಅರ್ಜಿತ್, 2010ರಲ್ಲಿ ತೆಲುಗಿನ ಕೇಡಿ ಚಿತ್ರದ ಮೂಲಕ ಪ್ಲೇಬ್ಯಾಕ್ ಪ್ರವೇಶ ಮಾಡಿದರು. 2011ರಲ್ಲಿ ಮರ್ಡರ್ 2 ಚಿತ್ರದ ‘ಫಿರ್ ಮೊಹಬ್ಬತ್’ ಹಾಡು ಮತ್ತು 2013ರ ಆಶಿಕಿ 2 ಚಿತ್ರದ ಹಾಡುಗಳು ಅವರಿಗೆ ಅಪಾರ ಜನಪ್ರಿಯತೆ ತಂದವು. ಆದರೆ ಪ್ಲೇಬ್ಯಾಕ್ ಗಾಯನಕ್ಕೆ ವಿದಾಯ ಹೇಳಿದರೂ, ಸಂಗೀತದಿಂದ ಸಂಪೂರ್ಣ ದೂರ ಉಳಿಯುವುದಿಲ್ಲ ಎಂಬುದನ್ನು ಅವರು ಸೂಚಿಸಿದ್ದಾರೆ. ಸ್ವತಂತ್ರ ಸಂಗೀತ ಹಾಗೂ ಹೊಸ ಪ್ರಯೋಗಗಳಿಗೆ ಹೆಚ್ಚು ಗಮನ ಹರಿಸುವ ಸಾಧ್ಯತೆ ಇದೆ ಎಂದು ಅವರ ಅಭಿಮಾನಿಗಳು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ಅರ್ಜಿತ್ ಸಿಂಗ್ ಅವರ ನಿರ್ಧಾರದಿಂದ ಬಾಲಿವುಡ್ ಸಂಗೀತ ಲೋಕದಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಸಿನೆಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

