ಬಾಮೈದನ ಜತೆಗೆ ತಂಗಿ ಪರಾರಿ: ಕಾರಿನ ಡಿಕ್ಕಿಯಲ್ಲಿ ಶವ ಹೊತ್ತು ಠಾಣೆಗೆ ಬಂದ ಬಾವ!

karkala-auto-driver-arrested-minor-Physical-harassment-case-kannada

ಬೆಂಗಳೂರು: ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಸಮೀಪದ ಬಿಲ್ವಾರದಹಳ್ಳಿಯಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಬಾವನೊಬ್ಬ ತನ್ನ ಸ್ವಂತ ಬಾಮೈದನನ್ನೇ ಅತ್ಯಂತ ಕ್ರೂರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಕೊಲೆಯಾದವ 24 ವರ್ಷದ ರಂಜಿತ್. ರಂಜಿತ್ ಅಕ್ಕ ಪವಿತ್ರಾಳ ಪತಿ ಶ್ರೀನಿವಾಸ್. ಶ್ರೀನಿವಾಸ್‌ನ ತಂಗಿ ಕೋಮಲ್, ಈಗಾಗಲೇ ಮದುವೆಯಾಗಿದ್ದರೂ ತನ್ನ ಪತಿಯನ್ನು ಬಿಟ್ಟು ರಂಜಿತ್ ಜೊತೆಗೆ ಪರಾರಿಯಾಗಿದ್ದಳು. ಈ ವಿಷಯವಾಗಿ ಎರಡು ಕುಟುಂಬಗಳ ನಡುವೆ ತೀವ್ರ ಗಲಾಟೆ ನಡೆದಿತ್ತು. ತನ್ನ ತಂಗಿಯ ಬಾಳನ್ನು ರಂಜಿತ್ ಹಾಳು ಮಾಡಿದ್ದಾನೆ ಎಂಬ ಸೇಡಿನಿಂದ ಶ್ರೀನಿವಾಸ್ ಈ ಕೃತ್ಯ ಎಸಗಿದ್ದಾನೆ.

ಬಿಲ್ವಾರದಹಳ್ಳಿಯ ನಿರ್ಜನ ಪ್ರದೇಶಕ್ಕೆ ರಂಜಿತ್‌ನನ್ನು ಕರೆತಂದ ಶ್ರೀನಿವಾಸ್, ಕಬ್ಬಿಣದ ರಾಡ್‌ನಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದಾನೆ. ಬಳಿಕ ಮೃತದೇಹವನ್ನು ತನ್ನ ಕಾರಿನ ಡಿಕ್ಕಿಯಲ್ಲಿ ಹಾಕಿಕೊಂಡು ನೇರವಾಗಿ ಬನ್ನೇರುಘಟ್ಟ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.

ಇದನ್ನೂ ಓದಿ: ಕಲಬುರಗಿ: ಪತ್ನಿಯ ಕತ್ತು ಸೀಳಿ ಭೀಕರ ಹತ್ಯೆಗೈದ ಪಾಪಿ ಪತಿ! ಮೃತದೇಹದ ಮೇಲೆ ಕಾರು ಹರಿಸಿದ ವಿಕೃತಿ

ಸ್ಥಳಕ್ಕೆ ಡಿವೈಎಸ್‌ಪಿ ಮೋಹನ್ ಕುಮಾರ್ ಮತ್ತು ಇನ್ಸ್‌ಪೆಕ್ಟರ್ ಕೃಷ್ಣಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಬನ್ನೇರುಘಟ್ಟ ಪೊಲೀಸರು ಆರೋಪಿ ಶ್ರೀನಿವಾಸನನ್ನು ವಶಕ್ಕೆ ಪಡೆದಿದ್ದು, ಸಾಕ್ಷ್ಯ ಸಂಗ್ರಹಕ್ಕಾಗಿ ಸೋಕೋ (SOCO) ತಂಡದ ನೆರವು ಪಡೆಯಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು