ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಬಿಡುವಿಲ್ಲದ ಕೆಲಸಗಳ ನಡುವೆಯೂ ಸಾರ್ವಜನಿಕರ ವೈಯಕ್ತಿಕ ಪತ್ರಗಳಿಗೆ ಸ್ಪಂದಿಸುವ ಮೂಲಕ ಮತ್ತೊಮ್ಮೆ ಗಮನ ಸೆಳೆದಿದ್ದಾರೆ. ತಮ್ಮ ತಂದೆ ಅತಿಯಾಗಿ ಸಕ್ಕರೆ ಸೇವಿಸುತ್ತಿದ್ದು, ಅದನ್ನು ಬಿಡಿಸಲು ಮಗನೊಬ್ಬ ಪ್ರಧಾನಿಯವರ ಸಹಾಯ ಕೋರಿದ್ದಕ್ಕೆ ಮೋದಿ ಅವರು ಅತ್ಯಂತ ಪ್ರೀತಿಯಿಂದ ಉತ್ತರ ನೀಡಿದ್ದಾರೆ.
ಯುವಕನೊಬ್ಬ ತನ್ನ ತಂದೆಯ ಆರೋಗ್ಯದ ಬಗ್ಗೆ ಕಾಳಜಿ ವ್ಯಕ್ತಪಡಿಸಿ ಪ್ರಧಾನಿಗೆ ಪತ್ರ ಬರೆದಿದ್ದ. “ನನ್ನ ತಂದೆ ಅತಿಯಾಗಿ ಸಕ್ಕರೆ ತಿನ್ನುತ್ತಾರೆ, ಎಷ್ಟೇ ಹೇಳಿದರೂ ಕೇಳುತ್ತಿಲ್ಲ. ನೀವು ಹೇಳಿದರೆ ಅವರು ಮಾತು ಕೇಳಬಹುದು, ದಯವಿಟ್ಟು ಅವರಿಗೆ ತಿಳಿಹೇಳಿ” ಎಂದು ಆತ ವಿನಂತಿಸಿದ್ದ.

ಇಲ್ಲಿದೆ ನೋಡಿ ವಿಡಿಯೋ;
View this post on Instagram
ಈ ಪತ್ರಕ್ಕೆ ಉತ್ತರಿಸಿದ ಪ್ರಧಾನಿ ಮೋದಿ, “ಆತ್ಮೀಯ ಸ್ನೇಹಿತನೇ, ನಿಮ್ಮ ತಂದೆಯ ಆರೋಗ್ಯದ ಬಗ್ಗೆ ನಿಮಗಿರುವ ಕಾಳಜಿ ಕಂಡು ಸಂತೋಷವಾಯಿತು. ನಾನು ನಿಮ್ಮ ತಂದೆಗೆ ಸಕ್ಕರೆ ಸೇವನೆಯನ್ನು ಕಡಿಮೆ ಮಾಡುವಂತೆ ಖಂಡಿತವಾಗಿ ವಿನಂತಿಸುತ್ತೇನೆ. ಆರೋಗ್ಯವೇ ದೊಡ್ಡ ಭಾಗ್ಯ,” ಎಂದು ಅತ್ಯಂತ ಸರಳವಾಗಿ ಉತ್ತರಿಸಿದ್ದಾರೆ.ಪ್ರಧಾನಿಯವರ ಈ ಹೃದಯಸ್ಪರ್ಶಿ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಮೋದಿಯವರ ಈ ಸರಳತೆಯನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ.
ಇದನ್ನೂ ಓದಿ: ಮೌತ್ ಹೈಜಿನ್ ಕಡೆ ನಿರ್ಲಕ್ಷ್ಯ: ಗಂಸ್ ರೋಗದಿಂದ ಹೃದಯ ಸಮಸ್ಯೆಗಳ ಅಪಾಯ ಹೆಚ್ಚಳ
ಕೇವಲ ಪತ್ರಕ್ಕೆ ಉತ್ತರಿಸುವುದಷ್ಟೇ ಅಲ್ಲದೆ, ಅತಿಯಾದ ಸಕ್ಕರೆ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಪರೋಕ್ಷವಾಗಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನೂ ಪ್ರಧಾನಿ ಮಾಡಿದ್ದಾರೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

