ಅಹಮದಾಬಾದ್: ದಕ್ಷಿಣ ಆಫ್ರಿಕಾ ತಂಡದ ನಾಯಕ ಆಯ್ಡೆನ್ ಮಾಕ್ರಮ್ ಜವಾಬ್ದಾರಿಯುಟ ಆಟದ ನೆರವಿನಿಂದ ‘ಡಿ’ ಗುಂಪಿನ ಪಂದ್ಯಾಟದಲ್ಲಿ ದಕ್ಷಿಣ ಆಫ್ರಿಕಾ ತಂಡ ನ್ಯೂಜಿಲೆಂಡ್ ತಂಡದ ವಿರುದ್ಧ 7 ವಿಕೆಟ್ಗಳ ಜಯ ದಾಖಲಸಿದೆ.
ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯಾಟದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡ 7 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು.

ಇದನ್ನೂ ಓದಿ: ‘ಮದ್ಯದ ಪಾರ್ಟಿ’ ವೇಳೆ ರಕ್ತಪಾತ: ಸ್ನೇಹಿತನನ್ನೇ ವಿವಸ್ತ್ರಗೊಳಿಸಿ, ಕಲ್ಲು ಎತ್ತಿಹಾಕಿ ಕೊಂದ ಹಂತಕರು!
ತಂಡದ ಪರ ಮಾರ್ಕ್ ಚಪ್ಮನ್ 48, ಡೆರೈಲ್ ಮಿಚಲ್ 32, ಫಿನ್ ಅಲೆನ್ 31, ಜೇಮ್ಸ್ ನೀಶಮ್ 23 ರನ್ ಗಳಿಸಿದರು. ದಕ್ಷಿಣ ಆಫ್ರಿಕಾ ಪರ ಮ್ಯಾಕ್ರೊ ಯಾನ್ಸನ್ 4, ಲುಂಗಿ ಎಂಗಿಡಿ, ಕೇಶವ್ ಮಹಾರಾಜ್ ಮತ್ತು ಕಾರ್ಬಿನ್ ಬಾಷ್ ತಲಾ ಒಂದು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ ನಾಯಕ ಆಯ್ಡನ್ ಮಾಕ್ರಮ್ (44 ಎಸೆತಗಳಲ್ಲಿ 86 ರನ್) ಜವಾಬ್ದಾರಿಯುತ ಆಟದಿಂದ 17.1 ಓವರ್ಗಳಲ್ಲಿ ಗುರಿ ತಲುಪಿತು. ಡೇವಿಡ್ ಮಿಲ್ಲರ್ 24, ರಾಯನ್ ರಿಕೆಲ್ಟನ್, ಡಿವಾಲ್ಡ್ ಬ್ರೆವಿಸ್ ತಲಾ 21 ಮತ್ತು ಕ್ವಿಂಟನ್ ಡಿ ಕಾಕ್ 20 ರನ್ ಗಳಿಸಿದರು. ನ್ಯೂಜಿಲೆಂಡ್ ಪರ ಲೋಕಿ ಫರ್ಗುಸನ್, ಜೇಮ್ಸ್ ನೀಶಮ್ ಮತ್ತು ರಚಿನ್ ರವೀಂದ್ರ ತಲಾ ಒಂದು ವಿಕೆಟ್ ಪಡೆದರು.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

