Breaking News

T20 Worldcup: ಗೆಲುವಿನ ಮೂಲಕ ವಿಶ್ವಕಪ್ ಅಭಿಯಾನ ಆರಂಭಿಸಿದ ದಕ್ಷಿಣ ಆಫ್ರಿಕಾ

ಅಹ್ಮದಾಬಾದ್: ಟಿ-20 ವಿಶ್ವಕಪ್‌ನ ಡಿ ಗುಂಪಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಕೆನಡಾ ತಂಡದ ವಿರುದ್ಧ 57 ರನ್‌ಗಳ ಜಯ ಸಾಧಿಸಿತು.

ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕೆನಡಾ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು.

Advertisement

ಇದನ್ನೂ ಓದಿ: Video: ಹೂಡಿಕೆಯಿಂದ ನಷ್ಟವಾಗಿದೆ ಎಂದು ಪತ್ನಿಗೆ ಹಿಗ್ಗಾಮುಗ್ಗಾ ಥಳಿಸಿದ ಪತಿ

ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ನಾಯಕ ಏಡಿಯನ್ ಮಾಕ್ರಮ್ ಅವರ ಅರ್ಧ ಶತಕ (32 ಎಸೆತಗಳಲ್ಲಿ 59), ಡೇವಿಡ್ ಮಿಲ್ಲರ್ ಅಜೇಯ 39, ಟ್ರಿಸ್ಟನ್ ಸ್ಟಬ್ಸ್ ಅಜೇಯ 34, ರಾಯನ್ ರಿಕೆಲ್ಟನ್ 33, ಕ್ವಿಂಟನ್ ಡಿ ಕಾಕ್ 25 ರನ್‌ಗಳ ಸಹಾಯದಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 213 ರನ್ ಗಳಿಸಿತು. ಕೆನಡ ತಂಡದ ಪರವಾಗಿ ಅನ್ಶ್ ಪಟೇಲ್ 3 ಮತ್ತು ದಿಲ್‌ಪ್ರೀತ್ ಬಜ್ವಾ ಒಂದು ವಿಕೆಟ್ ಪಡೆದರು.

ನಂತರ ಬ್ಯಾಟಿಂಗ್ ಮಾಡಿದ ಕೆನಡ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 156 ರನ್ ಗಳಿಸಿ 57 ರನ್‌ಗಳ ಅಂತರದಿಂದ ಸೋಲನ್ನನುಭವಿಸಿತು. ನವನೀತ್ ಧಲಿವಾಲ್ 64, ಹರ್ಷ್ ಠಾಕೇರ್ 33 ರನ್‌ಗಳ ಕಾಣಿಕೆ ನೀಡಿದರು‌. ದಕ್ಷಿಣ ಆಫ್ರಿಕಾ ಪರ ಲುಂಗಿ ಎಂಗಿಡಿ 4, ಮಾಕ್ರೋ ಯಾನ್ಸನ್ 2, ಕಗಿಸೋ ರಬಾಡ ಮತ್ತು ಕಾರ್ಬಿನ್ ಬಾಷ್ ತಲಾ ಒಂದು ವಿಕೆಟ್ ಪಡೆದರು‌.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು