ಪಲ್ಲೆಕೆಲೆ: ಟಿ-20 ವಿಶ್ವಕಪ್ ಪಂದ್ಯಾಟದಲ್ಲಿ ಪತುಂ ನಿಸ್ಸಂಕಾ ಅವರ ಶತಕದ ನೆರವಿನಿಂದ ಬಲಿಷ್ಠ ಆಸ್ಟ್ರೇಲಿಯಾವನ್ನು 8 ವಿಕೆಟ್‌ಗಳಿಂದ ಮಣಿಸಿ ಅತಿಥೇಯ ಶ್ರೀಲಂಕಾ ತಂಡ ಸೂಪರ್-8 ಹಂತಕ್ಕೆ ಅರ್ಹತೆ ಪಡೆಯಿತು.
ಇದನ್ನೂ ಓದಿ: ಇಂದೋರ್ ಎಂಬಿಎ ವಿದ್ಯಾರ್ಥಿನಿ ಕೊಲೆ ಪ್ರಕರಣ: ಮದ್ಯ, ಮಾಟಮಂತ್ರ ಮತ್ತು ವಾಟ್ಸಾಪ್ ಚಾಟ್ ಹಲವು ವಿಚಾರಗಳು ಬಹಿರಂಗ

ಇಲ್ಲಿನ ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡಕ್ಕೆ ಆರಂಭಿಕರಾದ ಮಿಚೆಲ್ ಮಾರ್ಷ್ (54) ಮತ್ತು ಟ್ರಾವಿಸ್ ಹೆಡ್ (56) ಉತ್ತಮ ಆರಂಭ ನೀಡಿದರು. ನಂತರ ಜೋಶ್ ಇಂಗ್ಲಿಷ್ 27 ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ 22 ರನ್ ಗಳಿಸಿದರು. ಕೊನೆಯಲ್ಲಿ 20 ಓವರ್‌ಗಳ ಮುಕ್ತಾಯಕ್ಕೆ ದುಶನ್ ಹೇಮಂತ 3, ದುಶ್ಯಂತ ಚಮೀರ 2, ಮಹೇಶ್ ತೀಕ್ಷಣ, ಧುನಿತ್ ವೆಲ್ಲಲಗೆ ಮತ್ತು ಕಮಿಂಡು ಮೆಂಡಿಸ್ ತಲಾ ಒಂದು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ ಶ್ರೀಲಂಕಾ ತಂಡಕ್ಕೆ ಮಾರ್ಕಸ್ ಸ್ಟ್ಯೊಯ್ನೀಸ್ ಆರಂಭಿಕ ಆಘಾತ ನೀಡಿದರು. ಒಂದು ರನ್ ಗಳಿಸಿದ ಕುಸಾಲ್ ಪೆರೇರ ಅವರ ವಿಕೆಟ್ ಕಬಳಿಸಿ ಮೇಲುಗೈ ಸಾಧಿಸಿದರು. ನಂತರ ಜೊತೆಯಾದ ಪಥುಮ್ ನಿಸನಕ ಮತ್ತು ಕುಸಾಲ್ ಮೆಂಡಿಸ್ ಜವಾಬ್ದಾರಿಯುತ ಆಟವಾಡಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಕುಸಾಲ್ ಮೆಂಡಿಸ್ 51 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಬಂದ ಪವನ್ ರತ್ನನಾಯಕೆ ತಂಡವನ್ನು ಗೆಲುವಿನ ದಡ ಸೇರಿಸಿದರು.
ಪಥುಮ್ ನಿಂಸಕ ಟೂರ್ನಿಯ ಮೊದಲ ಶತಕ ದಾಖಲಿಸಿದರು. 52. ಎಸೆತಗಳನ್ನು ಎದುರಿಸಿದ ಅವರು 5 ಸಿಕ್ಸರ್ ಮತ್ತು 10 ಬೌಂಡರಿಯೊಂದಿಗೆ ಅಜೇಯ 100 ರನ್ ಗಳಿಸಿದರು.
ಇದರೊಂದಿಗೆ ಆಡಿದ 3 ಪಂದ್ಯ ಗೆದ್ದ ಶ್ರೀಲಂಕಾ ಸೂಪರ್-8 ಗೆ ಅರ್ಹತೆ ಪಡೆಯಿತು.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

