Breaking News

Sullia : ಸುಳ್ಯ ತಾಲೂಕಿಗೆ 60 ವರುಷ: ಬೃಹತ್ ಮೆರವಣಿಗೆ, ಸಂಭ್ರಮಾಚರಣೆ

ಸುಳ್ಯ : ಸುಳ್ಯ ತಾಲೂಕು ಆಗುವಲ್ಲಿ ನಮ್ಮ ತಂದೆಯವರು ಮುಂಚೂಣಿಯಲ್ಲಿದ್ದರು ಹಾಗೂ ಇದಕ್ಕಾಗಿ ಶ್ರಮವಹಿಸಿರುತ್ತಾರೆ. ಜತೆಗೆ ಹಲವು ಹಿರಿಯರು ಕೂಡಾ ಶ್ರಮವಹಿಸಿರುವುದು ಕಂಡಿರುತ್ತೇವೆ. ಆ ಎಲ್ಲಾ ವ್ಯಕ್ತಿಗಳನ್ನು ನಾವು ಸ್ಮರಿಸಿಕೊಳ್ಳಬೇಕು ಎಂದು ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ.ಕೆ.ವಿ.ರೇಣುಕಾಪ್ರಸಾದ್ , ಸುಳ್ಯ ತಾಲೂಕು ರಚನೆಗೊಂಡು 60 ವರ್ಷ ತುಂಬಿದ ಹಿನ್ನಲೆಯಲ್ಲಿ ಷಷ್ಟ್ಯಬ್ಧ ಆಚರಣೆ ಮೆರವಣಿಗೆಗೆ ಚೆಂಡೆ ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಇದನ್ನೂ ಓದಿ :  ಮುಂಡೂರು: ಮಿಸೆಸ್ ಇಂಡಿಯಾ ಡಾ.ರಶ್ಮಾ ಅವರಿಗೆ ಸನ್ಮಾನ

Advertisement

ಸುಳ್ಯ ತಾಲೂಕು ರಚನೆಯು ಆಗಿರುವುದರಿಂದ ಸುಳ್ಯವು ಅಭಿವೃದ್ಧಿಯಾಗುತ್ತಾ ಬಂದಿದೆ. ಈ ಸಲುವಾಗಿ ತಾಲೂಕಿಗೆ 60ರ ಸಂಭ್ರಮವಿದೆ. ಈ ಸಮಯದಲ್ಲಿ ದೊಡ್ಡ ಯೋಜನೆಯೊಂದು ಸುಳ್ಯಕ್ಕೆ ಬಂದು ಸಾವಿರ ಮಂದಿಗೆ ನೌಕರಿ ದೊರೆಯುವಂತಾಗಬೇಕು. ಆ ನಿಟ್ಟಿನಲ್ಲಿ ತಾಲೂಕು ಆಡಳಿತ ಪ್ರಯತ್ನ ಪಡಬೇಕು ಎಂದು ಹೇಳಿದರು.

ಇಂದು (ಜ.21) ಸುಳ್ಯ ಜ್ಯೋತಿ ಸರ್ಕಲ್ ಬಳಿಯಿಂದ ವಿವಿಧ ಸಂಘ ಸಂಸ್ಥೆಗಳು ಸೇರಿ ಸಾವಿರಾರು ಮಂದಿಯ ಕೂಡುವಿಕೆಯೊಂದಿಗೆ ಬೃಹತ್ ಮೆರವಣಿಗೆ ಸುಳ್ಯ ನಗರದಲ್ಲಿ ನಡೆಯಿತು.

ಇದನ್ನೂ ಓದಿ : ಪುತ್ತೂರು: ಎಪಿಎಂಸಿ ರಸ್ತೆಯಲ್ಲಿ ಗೋಶನ್‌ ಕಾಂಪ್ಲೆಕ್ಸ್‌ ಲೋಕಾರ್ಪಣೆ

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು