ಸುಳ್ಯ : ತಾಲೂಕಿನ ಕಲ್ಮಡ್ಕ ಗ್ರಾಮದ ಪಡ್ಪಿನಂಗಡಿ ಸಮೀಪ ಚಿರತೆ ಪ್ರತ್ಯಕ್ಷಗೊಂಡ ಘಟನೆ ಜ.19 ರಂದು ವರದಿಯಾಗಿದೆ.
ಪಡ್ಪಿನಂಗಡಿ ಸರಕಾರಿ ಶಾಲೆಯ ಸಮೀಪ ವಾಸುದೇವ ನಡ್ಕ ರವರ ರಬ್ಬರ್ ತೋಟದಲ್ಲಿ ಜ.19 ರಂದು ಮುಂಜಾನೆ ಸುಮಾರು 5.30 ಹೊತ್ತಿಗೆ ರಬ್ಬರ್ ಟ್ಯಾಪಿಂಪ್ ಮಾಡುತ್ತಿದ್ದ ಪುರುಷೋತ್ತಮ ಎಂಬವರಿಗೆ ಚಿರತೆ ಎದುರಾಗಿದೆ. ಬಳಿಕ ಅದು ಪಕ್ಕದ ತೋಟದ ಕಡೆ ಹೋಗಿದೆ. ಗಾಬರಿ ಗೊಂಡ ಅವರು ತಕ್ಷಣ ವಾಸುದೇವ ನಡ್ಕ ರವರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: Aloe Vera : ಆರೋಗ್ಯ ಮತ್ತು ಸೌಂದರ್ಯಕ್ಕೆ ಪ್ರಕೃತಿಯ ವರ : ಆಲೊವೆರಾ
ಸ್ಥಳಕ್ಕೆ ಪಂಜ ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ಪ್ರಕಾಶ್ ಅಗಸಮನಿ ಹಾಗೂ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿ ಮಾಹಿತಿ ಪಡೆದು ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಜಾಗೃತಿ ವಹಿಸುವಂತೆ ಇಲಾಖೆಯವರು ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

