ಕಬಡ: ಸುಳ್ಯ ತಾಲೂಕಿನ ಕೊಲ್ಲಮೊಗ್ರದ ಇಬ್ಬರು ಯುವಕರು ಕಡಬ ತಾಲೂಕಿನ ಸುಬ್ರಹ್ಮಣ್ಯದ ಕುಲ್ಕುಂದ ಬಳಿಯ ಕುಮಾರಧಾರ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಸುಬ್ರಹ್ಮಣ್ಯ ಕಾಲೇಜು ಸಮೀಪ ಅನುಗ್ರಹ ಹಾರ್ಡ್ವೇರ್ಸ್ ಮಾಲಕ ಹರಿಪ್ರಸಾದ್ ಮಲ್ಲಾಜೆ ಮತ್ತು ಇವರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸುಜೀತ್ ಮೃತ ದುರ್ದೈವಿಗಳು. ಸ್ನಾನ ಮಾಡಲೆಂದು ಸುಜಿತ್ ಅವರು ಕುಲ್ಕುಂದ ಬಳಿಯ ಕುಮಾರಧಾರ ನದಿಗೆ ಇಳಿದಿದ್ದಾರೆ. ಈ ವೇಳೆ ನೀರಿನಲ್ಲಿ ಈಜಾಡಲಾಗದೆ ಮುಳುಗುತ್ತಿರುವುದನ್ನು ನೋಡಿ ಹರಿಪ್ರಸಾದ್ ರಕ್ಷಣೆಗಾಗಿ ನೀರಿಗೆ ಹಾರಿದ್ದಾರೆ.

ಇದನ್ನೂ ಓದಿ: ಧರ್ಮಸ್ಥಳದ ವಿರುದ್ಧ ನಿಂದನೆ ಆರೋಪ: ಸೌಜನ್ಯಳ ಮಾವನಿಗೆ ನ್ಯಾಯಾಂಗ ಬಂಧನಕ್ಕೆ ಆದೇಶ
ಆದರೆ, ಸುಜಿತ್ ಮತ್ತು ಹರಿಪ್ರಸಾದ್ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿದ್ದಾರೆ. ಕೂಡಲೇ ಸ್ಥಳೀಯರು ಇಬ್ಬರನ್ನು ಮೇಲಕ್ಕೆತ್ತಿದ್ದರೂ ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು. ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಕಡಬ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದುಬಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

