Breaking News

T20 World Cup: ಪಾಕಿಸ್ತಾನ ಪಂದ್ಯ ಬಹಿಷ್ಕರಿಸಿದರೆ ಭಾರತ ಅನುಸರಿಸುವ ನಡೆ ಹೀಗಿದೆ

T20 World Cup IND vs Pak

ಭಾರತ–ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ 2026 ಪಂದ್ಯಕ್ಕೆ ಸಂಬಂಧಿಸಿದಂತೆ ದೊಡ್ಡ ಬೆಳವಣಿಗೆ ಇದಾಗಿದೆ. ಪಾಕಿಸ್ತಾನ ತಂಡವು ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ, ಭಾರತೀಯ ತಂಡವು ಐಸಿಸಿ ನಿಯಮಾವಳಿಗಳಂತೆ ನಡೆದುಕೊಳ್ಳಲು ಸಿದ್ಧವಾಗಿದೆ ಎಂದು ಬಿಸಿಸಿಐ ಮೂಲಗಳು ಮಾಹಿತಿ ನೀಡಿವೆ.

ಪೂರ್ವನಿಗದಿತ ವೇಳಾಪಟ್ಟಿಯಂತೆ, ಟೀಂ ಇಂಡಿಯಾ ಶ್ರೀಲಂಕಾಗೆ ಪ್ರಯಾಣಿಸಲಿದೆ. ಫೆಬ್ರವರಿ 15ರಂದು ಪಂದ್ಯ ದಿನವನ್ನು ಸಾಮಾನ್ಯ ಪಂದ್ಯ ದಿನದಂತೆಲೇ ಪರಿಗಣಿಸಲಾಗುತ್ತದೆ. ನಿಗದಿತ ತರಬೇತಿ, ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸುವುದು ಹಾಗೂ ಕೊಲಂಬೊ ಕ್ರೀಡಾಂಗಣಕ್ಕೆ ಸಮಯಕ್ಕೆ ಸರಿಯಾಗಿ ಆಗಮಿಸುವುದು ಇದರಲ್ಲಿ ಸೇರಿವೆ. ಪಾಕಿಸ್ತಾನ ತಂಡ ಮೈದಾನಕ್ಕಿಳಿಯದಿದ್ದರೆ, ಪಂದ್ಯವನ್ನು ರದ್ದುಪಡಿಸುವ ಅಂತಿಮ ಘೋಷಣೆಯನ್ನು ಮ್ಯಾಚ್ ರೆಫರಿಯಿಂದ ನಿರೀಕ್ಷಿಸಲಾಗುತ್ತದೆ.

Advertisement

ಈ ಬಗ್ಗೆ ಪಾಕಿಸ್ತಾನ ಸರ್ಕಾರವು ಸಾಮಾಜಿಕ ಮಾಧ್ಯಮಗಳಲ್ಲಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಲು ಅನುಮತಿ ನೀಡಲಾಗಿದೆ. ಆದರೆ ಭಾರತ ವಿರುದ್ಧದ ಪಂದ್ಯವನ್ನು ಆಡಲಾಗುವುದಿಲ್ಲ ಎಂದು ತಿಳಿಸಿದೆ. ಹೇಳಿಕೆಯಲ್ಲಿ ಸ್ಪಷ್ಟ ಕಾರಣವನ್ನು ಉಲ್ಲೇಖಿಸದಿದ್ದರೂ, ಬಾಂಗ್ಲಾದೇಶವನ್ನು ವಿಶ್ವಕಪ್‌ನಿಂದ ಹೊರಗಿಟ್ಟಿರುವುದೇ ಈ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ.

ಇದನ್ನೂ ಓದಿ: ಟಿ20 ವಿಶ್ವಕಪ್: ಭಾರತ ವಿರುದ್ಧದ ಪಂದ್ಯ ಬಹಿಷ್ಕರಿಸಿದ ಪಾಕಿಸ್ತಾನ

ಭಾರತದ ನಿಲುವು ಸ್ಪಷ್ಟ—ಐಸಿಸಿ ಮಾರ್ಗಸೂಚಿಗಳಿಗೆ ಸಂಪೂರ್ಣ ಬದ್ಧತೆ. ಎಲ್ಲ ನಿಯಮಗಳನ್ನು ಪಾಲಿಸಿ ಪಂದ್ಯಕ್ಕೆ ಸಿದ್ಧರಾಗಿ ಹಾಜರಾಗುವ ಮೂಲಕ, ಯಾವುದೇ ಪ್ರಕ್ರಿಯಾತ್ಮಕ ತಪ್ಪು ನಡೆಯದಂತೆ ಭಾರತ ಖಚಿತಪಡಿಸಿಕೊಳ್ಳಲಿದೆ.

ಇನ್ನು ಟೂರ್ನಮೆಂಟ್ ವಿವರಗಳತ್ತ ನೋಡಿದರೆ, ಹಾಲಿ ಚಾಂಪಿಯನ್ ಭಾರತ ಗ್ರೂಪ್ ‘ಎ’ಯಲ್ಲಿ ಪಾಕಿಸ್ತಾನ, ನಾಮಿಬಿಯಾ, ನೆದರ್‌ಲ್ಯಾಂಡ್ಸ್ ಮತ್ತು ಅಮೆರಿಕ ತಂಡಗಳೊಂದಿಗೆ ಸ್ಥಾನ ಪಡೆದಿದೆ. ಫೆಬ್ರವರಿ 7 ರಂದು ಅಮೆರಿಕ ವಿರುದ್ಧ ಭಾರತ ತನ್ನ ಅಭಿಯಾನ ಆರಂಭಿಸಲಿದೆ. ಫೆಬ್ರವರಿ 12ರಂದು ಮತ್ತೊಂದು ಗುಂಪು ಹಂತದ ಪಂದ್ಯ ನಡೆಯಲಿದೆ. ಫೆಬ್ರವರಿ 15ರಂದು ಕೊಲಂಬೊದಲ್ಲಿ ನಡೆಯಬೇಕಿದ್ದ ಭಾರತ–ಪಾಕಿಸ್ತಾನ ಪಂದ್ಯವು ಟೂರ್ನಮೆಂಟ್‌ನ ಹೈ ವೋಲ್ಟೇಜ್ ಪಂದ್ಯವಾಗಲಿದೆ ಎಂದು ನಿರೀಕ್ಷಿಸಲಾಗಿತ್ತು.

ಐಸಿಸಿ ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತವು ಪಾಕಿಸ್ತಾನದ ಮೇಲೆ ಸ್ಪಷ್ಟ ಪ್ರಾಬಲ್ಯ ಸಾಧಿಸಿದೆ. ಎಂಟು ಪಂದ್ಯಗಳಲ್ಲಿ ಭಾರತ 7 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಆದರೆ, ಈ ಬಾರಿ ಮೈದಾನದ ಹೊರಗಿನ ಬೆಳವಣಿಗೆಗಳು ಮೈದಾನದ ಪೈಪೋಟಿಗಿಂತ ಹೆಚ್ಚು ಚರ್ಚೆಗೆ ಗ್ರಾಸವಾಗಿವೆ.

ಪಾಕಿಸ್ತಾನ ತಂಡವು ತನ್ನ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲೇ ಆಡಲಿದೆ. ಫೆಬ್ರವರಿ 7ರಂದು ನೆದರ್‌ಲ್ಯಾಂಡ್ಸ್ ವಿರುದ್ಧ, ಫೆಬ್ರವರಿ 10 ರಂದು ಅಮೆರಿಕ ವಿರುದ್ಧ ಹಾಗೂ ಫೆಬ್ರವರಿ 18ರಂದು ನಾಮಿಬಿಯಾ ವಿರುದ್ಧ ಪಾಕಿಸ್ತಾನದ ಪಂದ್ಯಗಳು ನಿಗದಿಯಾಗಿವೆ.

ಪಾಕಿಸ್ತಾನ ತನ್ನ ನಿರ್ಧಾರವನ್ನು ಬದಲಿಸದಿದ್ದರೆ, ಐಸಿಸಿ ನಿಯಮಾವಳಿಯಂತೆ ಭಾರತಕ್ಕೆ ಅಂಕಗಳು ಲಭಿಸುವ ಸಾಧ್ಯತೆ ಇದೆ. ಆದರೆ, ಅಂತಿಮ ತೀರ್ಮಾನವನ್ನು ಪಂದ್ಯಾಧಿಕಾರಿಗಳು ಮತ್ತು ಐಸಿಸಿ ಕೈಗೊಳ್ಳಲಿದ್ದಾರೆ. ಟಿ20 ವಿಶ್ವಕಪ್ ಇದೀಗ ಇತಿಹಾಸದಲ್ಲೇ ಅಪರೂರ್ವ ಕ್ಷಣಕ್ಕೆ ಸಾಕ್ಷಿಯಾಗುವ ಹಂತಕ್ಕೆ ಬಂದಿದೆ.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು