ಮುಂಬೈ: ಚಿತ್ರರಂಗದಲ್ಲಿ ಅವಕಾಶಕ್ಕಾಗಿ ಕಾಯುತ್ತಿರುವ ಹೊಸ ನಟಿಯರನ್ನು ವ್ಯವಸ್ಥಿತವಾಗಿ ದಾರಿ ತಪ್ಪಿಸಲಾಗುತ್ತಿದೆ ಎಂದು ನಟಿ ತನುಶ್ರೀ ದತ್ತಾ ಗಂಭೀರ ಆರೋಪ ಮಾಡಿದ್ದಾರೆ. ಚಿತ್ರರಂಗದ ಒಳವಲಯದಲ್ಲಿ ನಡೆಯುವ ಲೈಂಗಿಕ ಶೋಷಣೆ ಮತ್ತು ವೇಶ್ಯಾವೃತ್ತಿಯ ಜಾಲದ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಚಿತ್ರರಂಗಕ್ಕೆ ಬರುವ ಹೊಸ ನಟಿಯರನ್ನು ಕೆಲವು ಪ್ರಭಾವಿ ವ್ಯಕ್ತಿಗಳು ಮತ್ತು ಏಜೆಂಟ್‌ಗಳು ಉದ್ದೇಶಪೂರ್ವಕವಾಗಿ ವೇಶ್ಯಾವೃತ್ತಿಯ ಜಾಲಕ್ಕೆ ತಳ್ಳುತ್ತಾರೆ. ಅವಕಾಶ ನೀಡುವ ಆಮಿಷ ತೋರಿಸಿ ಅವರನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಹೊಸಬರನ್ನು ನಿಯಂತ್ರಿಸಲು ಮಾದಕ ದ್ರವ್ಯಗಳನ್ನು (Drugs) ಬಳಸಲಾಗುತ್ತದೆ. ನಟಿಯರು ಒಮ್ಮೆ ಈ ಜಾಲಕ್ಕೆ ಸಿಲುಕಿದರೆ ಅಲ್ಲಿಂದ ಹೊರಬರುವುದು ಅಸಾಧ್ಯವಾಗುತ್ತದೆ. ಅವರ ವೃತ್ತಿಜೀವನವನ್ನೇ ಈ ಮಾಫಿಯಾ ಹಾಳು ಮಾಡುತ್ತದೆ ಎಂದು ತನುಶ್ರೀ ಆಕ್ರೋಶ ಹೊರಹಾಕಿದ್ದಾರೆ. ಚಿತ್ರರಂಗದ ಕೆಲವು ದೊಡ್ಡ ಹೆಸರುಗಳು ಮತ್ತು ನಿರ್ಮಾಣ ಸಂಸ್ಥೆಗಳ ಹಿಂದೆ ಇಂತಹ ಕೃತ್ಯಗಳು ನಡೆಯುತ್ತಿವೆ. ಆದರೆ ಯಾರು ಕೂಡ ಇದರ ವಿರುದ್ಧ ದನಿ ಎತ್ತುವ ಧೈರ್ಯ ಮಾಡುತ್ತಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕುಂಭಮೇಳದಲ್ಲಿ ವೈರಲ್ ಆಗಿದ್ದ ಮೊನಾಲಿಸಾಗೆ ಮುಸ್ಲಿಂ ಯುವಕನೊಂದಿಗೆ ಲವ್: ಪೊಲೀಸರ ಮೊರೆ ಹೋದ ಜೋಡಿ
2018ರಲ್ಲಿ ನಟ ನಾನಾ ಪಾಟೇಕರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡುವ ಮೂಲಕ ತನುಶ್ರೀ ಭಾರತದಲ್ಲಿ ‘ಮೀ ಟೂ’ ಚಳವಳಿ ಆರಂಭವಾಗಲು ಕಾರಣವಾಗಿದ್ದರು. ಅಂದಿನಿಂದ ಅವರು ಚಿತ್ರರಂಗದ ಭ್ರಷ್ಟಾಚಾರ ಮತ್ತು ಮಹಿಳಾ ಶೋಷಣೆಯ ವಿರುದ್ಧ ನಿರಂತರವಾಗಿ ಮಾತನಾಡುತ್ತಾ ಬಂದಿದ್ದಾರೆ.
ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

