ಛತ್ತೀಸ್ ಗಡ : ರಾಯ್‌ಪುರ ವಿಭಾಗದ ಟಿಲ್ಡಾ ಬ್ಲಾಕ್‌ನ ನಕ್ತಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಅರ್ಧವಾರ್ಷಿಕ ಪರೀಕ್ಷೆಯ ವೇಳೆ ಈ ಒಂದು ಘಟನೆಯು ನಡೆದಿರುತ್ತದೆ. ಇಂಗ್ಲಿಷ್ ಪ್ರಶ್ನೆಪತ್ರಿಕೆಯಲ್ಲಿ “ಮೊನಾಳ ನಾಯಿಯ ಹೆಸರೇನು?” ಎಂಬ ಬಹು ಆಯ್ಕೆಯ ಪ್ರಶ್ನೆಗೆ (MCQ) ‘ಬಾಲಾ’, ‘ಶೇರು’, ‘ರಾಮ’ ಮತ್ತು ‘ಯಾರೂ ಇಲ್ಲ’ ಎಂಬ ನಾಲ್ಕು ಆಯ್ಕೆಗಳನ್ನು ನೀಡಲಾಗಿತ್ತು. ಆದರೆ ಇಲ್ಲಿ, ಪವಿತ್ರವಾದ ‘ರಾಮ’ ಹೆಸರನ್ನು ನಾಯಿಗೆ ಹೋಲಿಸಿರುವುದನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ತೀವ್ರ ಪ್ರತಿಭಟನೆ ನಡೆಸಿದ್ದವು.
ಆದರೆ, ಈ ವಿವಾದದ ಬಗ್ಗೆ ಸ್ಪಷ್ಟನೆ ನೀಡಿರುವ ಶಿಕ್ಷಕಿ ಶಿಖಾ ಸೋನಿ, ತಾವು ಉದ್ದೇಶಪೂರ್ವಕವಾಗಿ ಈ ರೀತಿ ಮಾಡಿಲ್ಲ ಎಂದು ಹೇಳಿದ್ದಾರೆ. ‘ರಾಮು’ (Ramu) ಎಂದು ಬರೆಯಲು ಹೋಗಿ ಕೊನೆಯ ಅಕ್ಷರ ‘u’ ಬಿಟ್ಟುಹೋಗಿದ್ದರಿಂದ ‘ರಾಮ’ (Ram) ಎಂದು ಪ್ರಕಟವಾಗಿದೆ. ಇದು ಕೇವಲ ಟೈಪಿಂಗ್ ದೋಷವೇ ಹೊರತು ಯಾವುದೇ ಸಮುದಾಯದ ಅಥವಾ ಧರ್ಮದ ಭಾವನೆಗಳಿಗೆ ನೋವುಂಟು ಮಾಡುವ ಉದ್ದೇಶ ನಮಗಿರಲಿಲ್ಲ ಎಂದು ಅವರು ತನಿಖಾಧಿಕಾರಿಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.

ಇದು ಛತ್ತೀಸ್‌ಗಢದ ರಾಯ್‌ಪುರ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ನಾಲ್ಕನೇ ತರಗತಿಯ ಇಂಗ್ಲಿಷ್ ಪ್ರಶ್ನೆಪತ್ರಿಕೆಯಲ್ಲಿ ‘ರಾಮ’ ಎಂಬ ಹೆಸರನ್ನು ನಾಯಿಯ ಹೆಸರಾಗಿ ಆಯ್ಕೆಯಲ್ಲಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯೋಪಾಧ್ಯಾಯಿನಿಯನ್ನು ಅಮಾನತುಗೊಳಿಸಿದ ಘಟನೆಯಾಗಿದೆ. ಈ ಘಟನೆಯು ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ ಕೇಳಿಬರುತ್ತಿವೆ.
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ಶಾಲಾ ಶಿಕ್ಷಣ ಇಲಾಖೆಯು ಪ್ರಶ್ನೆಪತ್ರಿಕೆ ಸಿದ್ಧಪಡಿಸಿದ ಮುಖ್ಯೋಪಾಧ್ಯಾಯಿನಿ ಶಿಖಾ ಸೋನಿ ಅವರನ್ನು ಅಮಾನತುಗೊಳಿಸಿದ್ದು, ಪತ್ರಿಕೆಯ ಮೇಲ್ವಿಚಾರಣೆ ನಡೆಸಿದ ಗುತ್ತಿಗೆ ಆಧಾರಿತ ಸಹಾಯಕ ಶಿಕ್ಷಕಿ ನಮ್ರತಾ ವರ್ಮಾ ಅವರನ್ನು ಸೇವೆಯಿಂದ ವಜಾಗೊಳಿಸಲು ಶಿಫಾರಸು ಮಾಡಲಾಗಿದೆ. ಈ ಕ್ರಮವನ್ನು ಇಲಾಖೆಯು ಶನಿವಾರದಂದು ಪ್ರಕಟಿಸಿದೆ.
ಇದನ್ನೂ ಓದಿ : Udupi : ಎಳ್ಳಾರೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ರಾಷ್ಟ್ರಮಟ್ಟದ ಪ್ರಶಸ್ತಿಗೆ ಶಿಫಾರಸು
======
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

