ಬೆಂಗಳೂರು: ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೋ ಉಡಾವಣೆ ಮಾಡಿದ PSLV – C62 ರಾಕೆಟ್ ಹಾರಾಟದ ಕೊನೆಯ ಹಂತದಲ್ಲಿ ತಾಂತ್ರಿಕ ದೋಷಗಳು ಕಂಡುಬಂದಿವೆ.
ಈ ಬಗ್ಗೆ ವಿವರವಾದ ವಿಶ್ಲೇಷಣೆಗೆ ಇಸ್ರೋ ಮುಂದಾಗಿದ್ದು. ಆರಂಭಿಕ ಹಂತಗಳಲ್ಲಿ ರಾಕೆಟ್ ಯಶಸ್ವಿ ಹಾರಾಟ ನಡೆಸಿದೆ. ಆದರೆ ಮುಂದಿನ ಹಂತದಲ್ಲಿ ನಿರೀಕ್ಷಿತ ಪಥದಲ್ಲಿ ಹಾರಾಟ ನಡೆದಿಲ್ಲ ಎಂದು ಮಾಹಿತಿ ನೀಡಿದೆ. ಈ ಹಿನ್ನೆಲೆ ಉಡಾವಣೆಯ ನಂತರದ ಟೆಲಿಮೆಟ್ರಿ ಮಾಹಿತಿಯನ್ನು ಪರಿಶೀಲನೆ ನಡೆಸಲಾಗಿರುವು ದಾಗಿ ಹೇಳಿದೆ.

2026ರ ಮೊದಲ ಬಾಹ್ಯಾಕಾಶ ಮಿಷನ್ ಆಗಿದ್ದPSLV-C62, ಇಸ್ರೋನ 101ನೇ ಕಕ್ಷಾ ಉಡಾವಣೆಯ ಗುರಿಯನ್ನೂ ಹೊಂದಿತ್ತು. ಈ ರಾಕೆಟ್ DRDO ಅಭಿವೃದ್ಧಿಪಡಿಸಿದ EOS-N1 ಭೂಪರಿವೀಕ್ಷಣಾ ಉಪಗ್ರಹ ಸೇರಿದಂತೆ 15 ದೇಶಿ ಮತ್ತು ವಿದೇಶಿ ಉಪಗ್ರಹಗಳನ್ನು ಹೊತ್ತೊಯ್ದಿತ್ತು.
ಇದನ್ನೂ ಓದಿ : ಭಾರತಕ್ಕೆ ನುಗ್ಗಲು ಯತ್ನಿಸಿದ ಡ್ರೋನ್ಗಳನ್ನು ಹೊಡೆದುರುಳಿಸಿದ ಭಾರತೀಯ ಸೇನೆ
260 ಟನ್ ತೂಕ ಮತ್ತು 44 ಮೀಟರ್ ಎತ್ತರ ಹೊಂದಿರುವ PSLV-C62, ಸುಮಾರು 505 ಕಿಲೋಮೀಟರ್ ಎತ್ತರದ ಸೂರ್ಯ-ಸಮಸಮಯ ಕ್ಷೇತ್ರದಲ್ಲಿ ಉಪಗ್ರಹಗಳನ್ನು ಸ್ಥಾಪಿಸುವ ಯೋಜನೆ ಹೊಂದಿತ್ತು. ಮಿಷನ್ ಪ್ರಗತಿಯ ಅಂತಿಮ ಸ್ಥಿತಿಯನ್ನು ಇಸ್ರೋ ಶೀಘ್ರದಲ್ಲೇ ಪ್ರಕಟಿಸುವ ಸಾಧ್ಯತೆಯಿದೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

