ಥೈಲ್ಯಾಂಡ್: ಥೈಲ್ಯಾಂಡ್ನಲ್ಲಿ ಬುಧವಾರ ಪ್ರಯಾಣಿಕ ರೈಲಿನ ಮೇಲೆ ಕ್ರೇನ್ ಕುಸಿದು ಬಿದ್ದು ಕನಿಷ್ಠ 22 ಜನರು ಸಾವನ್ನಪ್ಪಿದ್ದು ಮತ್ತು 80 ಜನರು ಗಾಯಗೊಂಡಿದ್ದಾರೆ.
ಬ್ಯಾಂಕಾಕ್ನಿಂದ ಉಬೊನ್ ರಾಟ್ಚಥಾನಿ ಪ್ರಾಂತ್ಯಕ್ಕೆ ಪ್ರಯಾಣಿಸುತ್ತಿದ್ದ ಪ್ರಯಾಣಿಕ ರೈಲು ಬ್ಯಾಂಕಾಕ್ನಿಂದ ಈಶಾನ್ಯಕ್ಕೆ ಸುಮಾರು 230 ಕಿಮೀ (143 ಮೈಲುಗಳು) ದೂರದಲ್ಲಿರುವ ನಖೋನ್ ರಾಟ್ಚಸಿಮಾ ಪ್ರಾಂತ್ಯದ ಸಿಖಿಯೋ ಜಿಲ್ಲೆಯಲ್ಲಿ ಸಾಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ರೈಲಿನಲ್ಲಿ 195 ಪ್ರಯಾಣಿಕರು ಇದ್ದರು ಎನ್ನಲಾಗಿದೆ.

ರೈಲಿನ ಮೇಲೆ ಬಿದ್ದ ಕ್ರೇನ್ ಥೈಲ್ಯಾಂಡ್ನಲ್ಲಿ ಚೀನಾದ ಬೆಂಬಲದೊಂದಿಗೆ $5.4 ಬಿಲಿಯನ್ ಹೈಸ್ಪೀಡ್ ರೈಲು ಯೋಜನೆಯ ಕೆಲಸದಲ್ಲಿ ನಿರತವಾಗಿತ್ತು. ಚೀನಾದ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್ನ ಭಾಗವಾಗಿ, 2028 ರ ವೇಳೆಗೆ ಬ್ಯಾಂಕಾಕ್ ಅನ್ನು ಲಾವೋಸ್ ಮೂಲಕ ಚೀನಾದ ಕುನ್ಮಿಂಗ್ಗೆ ಸಂಪರ್ಕಿಸಲು ಈ ರೈಲು ಹಳಿಯನ್ನು ನಿರ್ಮಿಸಲಾಗುತ್ತಿದೆ.
ಇದನ್ನು ಓದಿ: Svalbard : ಇದು ವಿಶ್ವದ ಅತ್ಯಂತ ಸುರಕ್ಷಿತ ಸ್ಥಳ, ಆದರೆ ಇಲ್ಲಿ ಜನಿಸುವಂತಿಲ್ಲ, ಅಂತ್ಯಸಂಸ್ಕಾರಕ್ಕೂ ನಿಷೇಧ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

