Breaking News

ವಿಚ್ಛೇದನ ವದಂತಿ ನಡುವೆಯೇ ತ್ರಿಷಾ ಜೊತೆ ಮದುವೆಯಲ್ಲಿ ಪ್ರತ್ಯಕ್ಷವಾದ ನಟ ವಿಜಯ್

ಚೆನ್ನೈ: ತಮಿಳು ನಟ ದಳಪತಿ ವಿಜಯ್ ಅವರ ಕುಟುಂಬದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಕಳೆದ ಕೆಲವು ಸಮಯದಿಂದ ಕೇಳಿಬರುತ್ತಿವೆ. ಪತ್ನಿ ಸಂಗೀತ ಅವರಿಂದ ವಿಜಯ್ ವಿಚ್ಛೇದನ ಪಡೆಯಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿರುವ ಬೆನ್ನಲ್ಲೇ, ನಟಿ ತ್ರಿಷಾ ಅವರೊಂದಿಗೆ ವಿಜಯ್ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮತ್ತು ಗೊಂದಲ ಮೂಡಿಸಿದೆ.

ವಿಜಯ್ ಮತ್ತು ಅವರ ಪತ್ನಿ ಸಂಗೀತ ಸುಮಾರು 25 ವರ್ಷಗಳ ದಾಂಪತ್ಯ ಜೀವನದ ನಂತರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ. ಆದರೆ, ಈ ಬಗ್ಗೆ ವಿಜಯ್ ಅವರ ಕಡೆಯಿಂದ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.ವದಂತಿಗಳ ಬೆಂಕಿಗೆ ತುಪ್ಪ ಸುರಿದಂತೆ, ಇತ್ತೀಚೆಗೆ ನಡೆದ ಅದ್ದೂರಿ ಮದುವೆ ಸಮಾರಂಭವೊಂದರಲ್ಲಿ ವಿಜಯ್ ಮತ್ತು ತ್ರಿಷಾ ಜೊತೆಯಾಗಿ ಆಗಮಿಸಿದ್ದಾರೆ. ಇಬ್ಬರೂ ಒಂದೇ ವೇದಿಕೆಯಲ್ಲಿ ನಗುತ್ತಾ ಕಾಣಿಸಿಕೊಂಡಿರುವುದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Advertisement

ಇದನ್ನೂ ಓದಿ: “ಭಾರತ ನನಗೆ ಒಂದು ರೀತಿಯಲ್ಲಿ ದ್ರೋಹ ಮಾಡಿದೆ”: ಇರಾನ್ ಮೂಲದ ನಟಿ ಮಂದಾನ ಕರಿಮಿ

ಇಲ್ಲಿದೆ ನೋಡಿ:

 

View this post on Instagram

 

A post shared by Nikil Murukan (@onlynikil)

‘ಘಿಲ್ಲಿ’ ಮತ್ತು ‘ಲಿಯೋ’ ಸಿನಿಮಾಗಳ ಮೂಲಕ ಈ ಜೋಡಿ ಹಿಟ್ ಎನಿಸಿಕೊಂಡಿದೆ. ಸಿನಿಮಾದ ಆನ್-ಸ್ಕ್ರೀನ್ ಕೆಮಿಸ್ಟ್ರಿಯು ಈಗ ಆಫ್-ಸ್ಕ್ರೀನ್ ಜೀವನಕ್ಕೂ ಹಬ್ಬಿದೆಯೇ ಎಂಬ ಪ್ರಶ್ನೆಯನ್ನು ನೆಟ್ಟಿಗರು ಕೇಳುತ್ತಿದ್ದಾರೆ.ವಿಜಯ್ ಸದ್ಯ ತಮ್ಮ ಕೊನೆಯ ಸಿನಿಮಾ ‘ದಳಪತಿ 69’ ಮತ್ತು ತಮ್ಮ ರಾಜಕೀಯ ಪಕ್ಷ ‘ಟಿವಿಕೆ’ (TVK) ಮೇಲೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಅವರ ವೈಯಕ್ತಿಕ ಜೀವನದ ಸುದ್ದಿ ರಾಜಕೀಯವಾಗಿಯೂ ಚರ್ಚೆಯಾಗುತ್ತಿದೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು