ನಾಗೌರ್: ದೇಗಾನಾದ ಚಿನ್ನದ ಮಾರುಕಟ್ಟೆಯೊಂದರಲ್ಲಿ ವಿಚಿತ್ರ, ಆದರೆ ಅಚ್ಚರಿಯ ಘಟನೆ ನಡೆದಿದೆ. ಅಂಗಡಿಯೊಳಗೆ ನುಗ್ಗಿದ ಪಾರಿವಾಳದೊಂದು 1 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ಕಚ್ಚಿಕೊಂಡು ಹಾರಿ ಹೋಗಿದ್ದು, ಸ್ಥಳೀಯರು ಅಚ್ಚರಿಗೊಂಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ದೇಗಾನಾದ ಬುಲಿಯನ್ ಮಾರುಕಟ್ಟೆಯ ಚಿನ್ನಾಭರಣ ಅಂಗಡಿಯ ಮಹಡಿಯಲ್ಲಿ, ಕುಶಲಕರ್ಮಿಗಳು ಚಿನ್ನದ ಆಭರಣಗಳನ್ನು ತಯಾರಿಸುತ್ತಿದ್ದರು. ಈ ವೇಳೆ ಪಾರಿವಾಳವು ನುಗ್ಗಿ, ಅಲ್ಲಿಯೇ ಇಟ್ಟಿರುವ ಹೊಸ ವಿನ್ಯಾಸದ ಚಿನ್ನದ ಸರವನ್ನು ಕಚ್ಚಿಕೊಂಡು ಹಾರಿಹೋಗಿದೆ.

ಇದನ್ನೂ ಓದಿ: ಅಮ್ಮನ ಮುಂದೆಯೇ ಗೆಳತಿ ಜತೆಗೆ ಸಿಕ್ಕಿಬಿದ್ದ ಮಗ! ಎಲ್ಲರ ಮುಂದೆ ತಾಯಿ ಮಾಡಿದ್ದೇನು ನೋಡಿ?
ಅಂಗಡಿಯ ಸಿಬ್ಬಂದಿ ಮತ್ತು ಮಾಲೀಕರು ಅದನ್ನು ಕಂಡು ಶಾಕ್‌ಗೆ ಒಳಗಾದರು. ಇದರ ಬೆನ್ನಲ್ಲೆ ಜನರು ಚಿನ್ನ ಕಚ್ಚಿ ಕೊಂಡು ಹೋದ ಕಾಗೆಯ ಚಲನವಲನದ ಮೇಲೆ ಕಣ್ಣಿಟ್ಟಿದ್ದಾರೆ.
ಈ ಸವಾಲಿನ ನಡುವೆ, ಪಾರಿವಾಳವು ಮಾರುಕಟ್ಟೆಯ ಕಟ್ಟಡದ ಮೇಲ್ಛಾವಣಿಯ ಮೇಲೆ ಕುಳಿತುಕೊಂಡಿದೆ. ಚಿನ್ನದ ಅಂಗಡಿ ಮಾಲೀಕನ ಅದೃಷ್ಟವೇನೋ ಕೆಲವು ನಿಮಿಷಗಳ ನಂತರ ಕಾಗೆಯ ಬಾಯಿಯಿಂದ ಚಿನ್ನ ಕೆಳಗೆ ಬೀದ್ದಿದೆ. ಕೂಡಲೇ ಅಂಗಡಿಯ ಸಿಬ್ಬಂದಿ ಅಲ್ಲಿಗೆ ಧಾವಿಸಿ ಸರವನ್ನು ಪಡೆದುಕೊಂಡರು.
ವಿಡಿಯೋ ಇಲ್ಲಿದೆ
View this post on Instagram
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

