ಯುದ್ಧದ ಬಿಕ್ಕಟ್ಟಿನ ನಡುವೆ ಮಂಗಳೂರು ಬಂದರಿಗೆ ತಲುಪಿದ ಮೊದಲ ಅನಿಲ ಹಡಗು! ಮುಚ್ಚಿದ್ದ ಹೋಟೆಲ್‌ಗಳಿಗೆ ಮರುಜೀವ

ಅಂತರಾಷ್ಟ್ರೀಯ ಯುದ್ಧದ ಹಿನ್ನೆಲೆಯಲ್ಲಿ ಅಡುಗೆ ಅನಿಲದ ತೀವ್ರ ಕೊರತೆ ಎದುರಿಸುತ್ತಿದ್ದ ಕರ್ನಾಟಕಕ್ಕೆ ದೊಡ್ಡ ಸಮಾಧಾನ ಸಿಕ್ಕಿದೆ. ಅಮೆರಿಕದ ಟೆಕ್ಸಾಸ್‌ನಿಂದ ಹೊರಟಿದ್ದ ‘ಪಿಕ್ಸಿಸ್ ಪಯನೀರ್’ (Pyxis Pioneer) ಹೆಸರಿನ ಬೃಹತ್ ಸರಕು ಹಡಗು ಭಾನುವಾರ ಮಂಗಳೂರು ಬಂದರನ್ನು ಯಶಸ್ವಿಯಾಗಿ ತಲುಪಿದೆ.

ಈ ಹಡಗು ಸುಮಾರು 16,000 ಮೆಟ್ರಿಕ್ ಟನ್ ಎಲ್‌ಪಿಜಿ (LPG) ಹೊತ್ತು ತಂದಿದೆ. ಯುದ್ಧ ಆರಂಭವಾದ ಬಳಿಕ ವಿದೇಶದಿಂದ ರಾಜ್ಯಕ್ಕೆ ಆಗಮಿಸಿದ ಮೊದಲ ಅನಿಲ ನೌಕೆ ಇದಾಗಿದೆ.ಎಲ್‌ಪಿಜಿ ಹಡಗು ಬರುವ ಮುನ್ನಾ ದಿನವೇ (ಶನಿವಾರ) ರಷ್ಯಾದಿಂದ ಚೀನಾಕ್ಕೆ ಹೊರಟಿದ್ದ ‘ಅಕ್ವಾ ಟೈಟಾನ್’ ಎಂಬ ಕಚ್ಚಾತೈಲ ಹೊತ್ತ ಹಡಗು ಮಂಗಳೂರು ತಲುಪಿತ್ತು. ಇದರಿಂದ ಎಂಆರ್‌ಪಿಎಲ್ (MRPL) ಸಂಸ್ಕರಣಾ ಘಟಕಕ್ಕೆ ತೈಲ ಪೂರೈಕೆ ಆರಂಭವಾಗಿದೆ.

Advertisement

ಇದನ್ನೂ ಓದಿ: ಪ್ರಯಾಣಿಕರ ಗಮನಕ್ಕೆ.. ಉಡುಪಿ, ಮಂಗಳೂರು, ಕಾರವಾರಕ್ಕೂ ಬರುತ್ತೆ ಈ ವಿಶೇಷ ರೈಲು

ಗ್ಯಾಸ್ ಸಿಲಿಂಡರ್‌ಗಳ ಕೊರತೆಯಿಂದಾಗಿ ರಾಜ್ಯದಾದ್ಯಂತ ಹೋಟೆಲ್ ಮತ್ತು ಕ್ಯಾಂಟೀನ್‌ಗಳು ಮುಚ್ಚುವ ಸ್ಥಿತಿಗೆ ತಲುಪಿದ್ದವು. ಈಗ ಅನಿಲದ ಪೂರೈಕೆ ಚುರುಕಾಗಲಿರುವುದರಿಂದ ವ್ಯಾಪಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಬಂದರಿನಲ್ಲಿ ಈಗಾಗಲೇ ಅನಿಲವನ್ನು ಇಳಿಸುವ ಪ್ರಕ್ರಿಯೆ ಆರಂಭವಾಗಿದ್ದು, ಶೀಘ್ರದಲ್ಲೇ ಮಾರುಕಟ್ಟೆಗೆ ಸಿಲಿಂಡರ್‌ಗಳ ಪೂರೈಕೆ ಮೊದಲಿನಂತೆ ಸಹಜ ಸ್ಥಿತಿಗೆ ಮರಳಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು