Breaking News

Svalbard : ಇದು ವಿಶ್ವದ ಅತ್ಯಂತ ಸುರಕ್ಷಿತ ಸ್ಥಳ, ಆದರೆ ಇಲ್ಲಿ ಜನಿಸುವಂತಿಲ್ಲ, ಅಂತ್ಯಸಂಸ್ಕಾರಕ್ಕೂ ನಿಷೇಧ

ಸ್ವಾಲ್ಬಾರ್ಡ್‌ : ಯೂರೋಪ್‌ನ ಉತ್ತರ ಭಾಗದಲ್ಲಿರುವ ಸ್ವಾಲ್ಬಾರ್ಡ್ (Svalbard) ಎಂಬ ಸಣ್ಣ ದ್ವೀಪ ಸಮೂಹವು ತನ್ನ ವಿಚಿತ್ರ ಕಾನೂನುಗಳು ಮತ್ತು ವಿಶಿಷ್ಟ ಜೀವನಶೈಲಿಯಿಂದ ಮತ್ತೆ ಸುದ್ದಿಯಾಗುತ್ತಿದೆ. ಇಲ್ಲಿ ಜನರು ವೀಸಾ ಇಲ್ಲದೆ ವಾಸಿಸಲು ಹಾಗೂ ಕೆಲಸ ಮಾಡಲು ಅವಕಾಶವಿದ್ದರೂ, ಜನನ ಮತ್ತು ಅಂತ್ಯಸಂಸ್ಕಾರಕ್ಕೆ ನಿಷೇಧ ವಿಧಿಸಲಾಗಿದೆ.

ಹೌದು ಕೇಳೋದಿಕ್ಕೆ ವಿಶೇಷ ಅನಿಸಿದ್ರೂ ಇದು ನಿಜ.‌ ಆರ್ಕ್ಟಿಕ್ ಮಹಾಸಾಗರದ ಮಧ್ಯೆ, ನಾರ್ವೆಯ ಮುಖ್ಯಭೂಮಿಯಿಂದ ಸುಮಾರು 930 ಕಿಲೋಮೀಟರ್ ಉತ್ತರದಲ್ಲಿರುವ ಈ ಪ್ರದೇಶದಲ್ಲಿ ಪ್ರಸ್ತುತ ಸುಮಾರು 2,400 ಮಂದಿ ವಾಸಿಸುತ್ತಿದ್ದಾರೆ. ತೀವ್ರ ಚಳಿಗಾಲದ ಕಾರಣ ಮೃತದೇಹಗಳು ಸುಲಭವಾಗಿ ಕುಗ್ಗದೇ ಉಳಿಯುತ್ತವೆ. ಇದರಿಂದ ಸೋಂಕು ಹರಡುವ ಅಪಾಯ ಇರುವುದರಿಂದ, ಇಲ್ಲಿ ಸಮಾಧಿ ಮಾಡಲು ಸರ್ಕಾರ ಅವಕಾಶ ನೀಡುವುದಿಲ್ಲ.

Advertisement

ಸ್ವಾಲ್ಬಾರ್ಡ್‌ನಲ್ಲಿ ಮಕ್ಕಳ ಜನನವೂ ನಡೆಯುವುದಿಲ್ಲ ;

ವೈದ್ಯಕೀಯ ಸೌಲಭ್ಯಗಳು ಸೀಮಿತವಾಗಿರುವ ಹಿನ್ನೆಲೆಯಲ್ಲಿ ಗಂಭೀರವಾಗಿ ಅಸ್ವಸ್ಥರಾಗಿರುವವರು ಹಾಗೂ ಗರ್ಭಿಣಿಯರನ್ನು ನಾರ್ವೆಯ ಒಸ್ಲೋ ಅಥವಾ ಟ್ರೊಂಸೋ ನಗರಗಳಿಗೆ ಕಳುಹಿಸಲಾಗುತ್ತದೆ. ಇದೇ ಕಾರಣದಿಂದ ಸ್ವಾಲ್ಬಾರ್ಡ್‌ನಲ್ಲಿ ಮಕ್ಕಳ ಜನನವೂ ನಡೆಯುವುದಿಲ್ಲ. ಇದಲ್ಲದೆ, ವೃದ್ಧಾಶ್ರಮಗಳ ಕೊರತೆಯಿಂದ ಕೆಲಸ ಮಾಡಲು ಅಸಮರ್ಥರಾದವರು ಮತ್ತು ನಿವೃತ್ತಿಯ ಹಂತ ತಲುಪಿದವರು ಈ ಪ್ರದೇಶವನ್ನು ತೊರೆದು ಹೋಗಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಶ್ವದ ಅತ್ಯಂತ ಸುರಕ್ಷಿತ ಪ್ರದೇಶ ;

ಸ್ವಾಲ್ಬಾರ್ಡ್ ಶೆಂಗೆನ್ ಒಪ್ಪಂದದ ಭಾಗವಲ್ಲದ ಕಾರಣ, ಇಲ್ಲಿ ವಾಸ ಮತ್ತು ಉದ್ಯೋಗಕ್ಕಾಗಿ ಪ್ರತ್ಯೇಕ ವೀಸಾ ಅಥವಾ ಪರವಾನಗಿ ಅಗತ್ಯವಿಲ್ಲ. ಪಾಸ್‌ಪೋರ್ಟ್ ಇದ್ದರೆ ಸಾಕು ಪ್ರವೇಶ ಸಾಧ್ಯ. ಆದರೆ, ಈ ಪ್ರದೇಶಕ್ಕೆ ನೇರ ವಿಮಾನ ಸೇವೆಗಳು ಒಸ್ಲೋ ಮತ್ತು ಟ್ರೊಂಸೋ ನಗರಗಳಿಂದ ಮಾತ್ರ ಲಭ್ಯವಿದ್ದು, ಶೆಂಗೆನ್ ರಾಷ್ಟ್ರಗಳ ಹೊರಗಿನ ನಾಗರಿಕರು ಮೊದಲು ನಾರ್ವೆಗೆ ಪ್ರವೇಶಿಸಲು ವೀಸಾ ಪಡೆಯಬೇಕಾಗುತ್ತದೆ. ಅಪರಾಧ ಪ್ರಮಾಣ ಅತ್ಯಂತ ಕಡಿಮೆ ಇರುವ ಸ್ವಾಲ್ಬಾರ್ಡ್ ಅನ್ನು ವಿಶ್ವದ ಅತ್ಯಂತ ಸುರಕ್ಷಿತ ಪ್ರದೇಶಗಳಲ್ಲೊಂದು ಎಂದು ಪರಿಗಣಿಸಲಾಗುತ್ತಿದೆ. ಆದರೆ ಕಠಿಣ ಹವಾಮಾನ, ಸೀಮಿತ ಸೌಲಭ್ಯಗಳು ಮತ್ತು ವಿಶೇಷ ನಿಯಮಗಳು ಇಲ್ಲಿನ ಜೀವನವನ್ನು ಸವಾಲಿನದ್ದಾಗಿಸಿವೆ.

ಇದನ್ನೂ ಓದಿ :Republic Day : ಗಣರಾಜ್ಯೋತ್ಸವ ಪ್ರಯುಕ್ತ ಈ ಮೊಬೈಲ್ ಗಳ ಮೇಲೆ ವಿಶೇಷ ರಿಯಾಯಿತಿ

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು