ಇಂದು ಫೆಬ್ರವರಿ 12, 2026, ಗುರುವಾರದಂದು ಮಕರ ರಾಶಿಯಲ್ಲಿ ಸೂರ್ಯ ಮತ್ತು ಮಂಗಳನ ಸಂಯೋಗದಿಂದ ‘ಮಂಗಳಾದಿತ್ಯ ಯೋಗ’ ಸೃಷ್ಟಿಯಾಗುತ್ತಿದೆ. ಇದರೊಂದಿಗೆ ಹರ್ಷಣ ಯೋಗ ಮತ್ತು ಸುನಾಫ ಯೋಗಗಳೂ ಇರುವುದರಿಂದ ಕೆಲವು ರಾಶಿಯವರಿಗೆ ಇಂದು ಅತ್ಯಂತ ಶುಭದಾಯಕವಾಗಿದೆ.
ಶುಭ ದಿನ: ಇಂದು ಗುರುವಾರವಾಗಿದ್ದರಿಂದ ರಾಘವೇಂದ್ರ ಸ್ವಾಮಿಗಳು ಮತ್ತು ಶಿರಡಿ ಸಾಯಿಬಾಬಾರ ಆರಾಧನೆಗೆ ಶ್ರೇಷ್ಠ ದಿನ.

ಸೂರ್ಯೋದಯ: ಬೆಳಿಗ್ಗೆ 6:47 | ಸೂರ್ಯಾಸ್ತ: ಸಂಜೆ 6:12
ತಿಥಿ: ದಶಮಿ (ಮಧ್ಯಾಹ್ನ 12:20ರವರೆಗೆ), ನಂತರ ಏಕಾದಶಿ.
ರಾಹುಕಾಲ: ಮಧ್ಯಾಹ್ನ 1:30 ರಿಂದ 3:00 ರವರೆಗೆ (ಈ ಸಮಯದಲ್ಲಿ ಶುಭ ಕಾರ್ಯಗಳನ್ನು ಮಾಡದಿರುವುದು ಉತ್ತಮ).
ಇದನ್ನೂ ಓದಿ: ಈ ವಸ್ತುಗಳನ್ನು ಯಾವುದೇ ಕಾರಣಕ್ಕೂ ಮನೆಗೆ ತರಬೇಡಿ!
ದ್ವಾದಶ ರಾಶಿಗಳ ಫಲಫಲ:
ಮೇಷ: ಕೆಲಸದಲ್ಲಿ ಜಾಗರೂಕರಾಗಿರಿ, ಅಪಘಾತದ ಸಂಭವವಿದೆ. ಕುಟುಂಬದ ಜವಾಬ್ದಾರಿ ಹೆಚ್ಚಲಿದೆ.
ವೃಷಭ: ಕಠಿಣ ಪರಿಸ್ಥಿತಿಯೂ ಸುಲಭವಾಗಲಿದೆ. ಮಕ್ಕಳಿಂದ ಶುಭ ಸುದ್ದಿ ಕೇಳುವಿರಿ. ಬಾಕಿ ಕೆಲಸ ಪೂರ್ಣಗೊಳ್ಳಲಿದೆ.
ಮಿಥುನ: ಗುರುರಾಯರ ವಿಶೇಷ ಅನುಗ್ರಹ ನಿಮ್ಮ ಮೇಲಿದೆ. ಆರ್ಥಿಕ ಲಾಭ ಮತ್ತು ವೃತ್ತಿಯಲ್ಲಿ ಪ್ರಗತಿ ಕಂಡುಬರಲಿದೆ.
ಕರ್ಕಾಟಕ: ಮನಸ್ಸು ಶಾಂತವಾಗಿರಲಿ. ಸಣ್ಣ ಸಣ್ಣ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಪ್ರೀತಿಪಾತ್ರರೊಂದಿಗೆ ಸಮಯ ಕಳೆಯುವಿರಿ.
ಸಿಂಹ: ಆತ್ಮವಿಶ್ವಾಸ ಹೆಚ್ಚಿರಲಿದೆ. ವ್ಯಾಪಾರದಲ್ಲಿ ಲಾಭದಾಯಕ ದಿನ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.
ಕನ್ಯಾ: ಖರ್ಚುಗಳ ಮೇಲೆ ನಿಯಂತ್ರಣವಿರಲಿ. ಹೊಸ ಹೂಡಿಕೆಗೆ ಇಂದು ಸೂಕ್ತ ಸಮಯವಲ್ಲ.
ತುಲಾ: ವೃತ್ತಿಜೀವನದಲ್ಲಿ ಮೆಚ್ಚುಗೆ ದೊರೆಯಲಿದೆ. ಧನ ಲಾಭದ ಯೋಗವಿದೆ. ಕುಟುಂಬದಲ್ಲಿ ಸುಖ ಶಾಂತಿ ಇರಲಿದೆ.
ವೃಶ್ಚಿಕ: ವಿದ್ಯಾಭ್ಯಾಸದಲ್ಲಿ ಪ್ರಗತಿ. ಹಳೆಯ ಗೆಳೆಯರನ್ನು ಭೇಟಿಯಾಗುವ ಸಾಧ್ಯತೆ ಇದೆ.
ಧನು: ಗುರುಬಲ ಚೆನ್ನಾಗಿದೆ. ಹೊಸ ಕಾರ್ಯ ಆರಂಭಿಸಲು ಶುಭ ದಿನ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ.
ಮಕರ; ಹಣದ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ದೊಡ್ಡ ಮೊತ್ತದ ಸಾಲ ನೀಡಬೇಡಿ. ಕೆಲಸದ ಒತ್ತಡ ಹೆಚ್ಚಿರಬಹುದು.
ಕುಂಭ: ಹೊಸ ಆಲೋಚನೆಗಳಿಗೆ ಮನ್ನಣೆ ಸಿಗಲಿದೆ. ಸ್ನೇಹಿತರಿಂದ ಸಹಾಯ ಹಸ್ತ ದೊರೆಯಲಿದೆ.
ಮೀನ: ಗುರುರಾಯರ ಕೃಪೆಯಿಂದ ಅದೃಷ್ಟ ಒಲಿಯಲಿದೆ. ಆಸ್ತಿ ಖರೀದಿ ಯೋಗವಿದೆ. ಮನಸ್ಸಿನ ಆಸೆ ಈಡೇರಲಿದೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

