ದಿನ ಭವಿಷ್ಯ: ದಶಮೀ ತಿಥಿಯಂದು ಯಾರಿಗೆ ಯಶಸ್ಸು? ಯಾರಿಗೆ ಎಚ್ಚರಿಕೆ ಅಗತ್ಯ?

ಶುಕ್ರವಾರವಾದ ಇಂದು ನಕ್ಷತ್ರಗಳ ಚಲನೆ ಹಾಗೂ ತಿಥಿಯ ಪ್ರಭಾವದಿಂದಾಗಿ ಹಲವು ರಾಶಿಗಳ ಜಾತಕರಿಗೆ ವೈವಿಧ್ಯಮಯ ಫಲಗಳು ಪ್ರಾಪ್ತಿಯಾಗಲಿವೆ. ಕೆಲವರಿಗೆ ವೃತ್ತಿಜೀವನದಲ್ಲಿ ಉನ್ನತ ಅಧಿಕಾರ ಸಿಗುವ ಸಾಧ್ಯತೆಯಿದ್ದರೆ, ಇನ್ನು ಕೆಲವರು ಅನಗತ್ಯ ಸವಾಲುಗಳನ್ನು ಎದುರಿಸಬೇಕಾಗಬಹುದು.

ಮೇಷ ರಾಶಿ (Aries):

ವೈವಾಹಿಕ ಜೀವನವು ಸುಖಮಯವಾಗಿ ಸಾಗಲಿದೆ. ಆದರೆ ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದಂತೆ ಮನಸ್ತಾಪಗಳು ಎದುರಾಗಬಹುದು. ಕಾರ್ಯಗಳಲ್ಲಿ ಹಿನ್ನಡೆಯಾಗಲಿದ್ದು, ಅಂದುಕೊಂಡ ಕೆಲಸಗಳು ಆರಂಭವಾಗದೆ ಇರಬಹುದು. ಇಂದಿನ ದಿನ ಕಲಹಕ್ಕಿಂತ ಮೌನವೇ ಲೇಸು. ನಿಮ್ಮ ವಿಶೇಷ ಆಸಕ್ತಿಯಿಂದ ಉದ್ಯೋಗ ಕ್ಷೇತ್ರದಲ್ಲಿ ಕೆಲವು ಧನಾತ್ಮಕ ಬದಲಾವಣೆಗಳು ಕಂಡುಬರಲಿವೆ.

ವೃಷಭ ರಾಶಿ (Taurus):

ನಿಮ್ಮ ಶ್ರಮಕ್ಕೆ ದೈವಾನುಕೂಲ ಸಿಗಲಿದೆ. ಮಾತಿನಿಂದ ಸಮಾಜದಲ್ಲಿ ಮೆಚ್ಚುಗೆ ಪಡೆಯುವಿರಿ. ಮಾನಸಿಕವಾಗಿ ಉಂಟಾಗುವ ನೋವನ್ನು ಶಮನ ಮಾಡಿಕೊಳ್ಳಲು ಸುದೀರ್ಘ ಪ್ರಯಾಣ ಮಾಡುವ ಸಾಧ್ಯತೆ ಇದೆ. ಸಹೋದ್ಯೋಗಿಗಳ ಜೊತೆ ವೈಮನಸ್ಯ ಉಂಟಾಗದಂತೆ ಎಚ್ಚರವಹಿಸಿ. ಅನಗತ್ಯ ವಾಗ್ವಾದ ಬೇಡ, ಹೊಂದಾಣಿಕೆಯಿಂದ ಸಮಸ್ಯೆ ಬಗೆಹರಿಸಿಕೊಳ್ಳಿ. ಉಪಾಯದಿಂದ ಕಾರ್ಯ ಸಾಧಿಸುವುದು ಉತ್ತಮ.

ಮಿಥುನ ರಾಶಿ (Gemini):

ಇಂದು ಅನಗತ್ಯ ಅಲೆದಾಟದಿಂದ ಸಿಟ್ಟು ಹಾಗೂ ಹತಾಶೆ ಉಂಟಾಗಬಹುದು. ಕೆಲಸ ಕಾರ್ಯಗಳು ನಿಧಾನವಾಗಿ ಸಾಗುವುದರಿಂದ ಬೇಸರ ಮೂಡಲಿದೆ. ಕೋಪಕ್ಕೆ ಒಳಗಾಗದೆ ಸಮಾಧಾನದಿಂದಿರಿ. ಉದ್ಯೋಗದ ಭವಿಷ್ಯಕ್ಕಾಗಿ ದೀರ್ಘಕಾಲೀನ ಯೋಜನೆ ರೂಪಿಸಲು ಇದು ಸೂಕ್ತ ಸಮಯ. ಉದ್ಯೋಗಿಗಳಿಗೆ ನೂತನ ಅವಕಾಶಗಳು ಸಿಗಲಿದ್ದು, ಮೌಲ್ಯಯುತ ವಸ್ತುವನ್ನು ಖರೀದಿಸುವ ಬಯಕೆ ಈಡೇರಲಿದೆ.

ಕರ್ಕಾಟಕ ರಾಶಿ (Cancer):

ಇಂದು ಮಕ್ಕಳಿಂದ ಶುಭ ವಾರ್ತೆಯನ್ನು ನಿರೀಕ್ಷಿಸಬಹುದು. ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸದಿರಿ. ಸ್ನೇಹಿತರ ನೆರವಿನಿಂದ ನೂತನ ಉದ್ಯಮ ಆರಂಭಿಸುವ ಸಾಧ್ಯತೆ ಇದೆ. ಆರ್ಥಿಕತೆಯನ್ನು ವೃದ್ಧಿಸಿಕೊಳ್ಳುವತ್ತ ಗಮನ ಹರಿಸಿ ಹಾಗೂ ದೀರ್ಘಕಾಲದ ಹೂಡಿಕೆಗೆ ಗಟ್ಟಿ ನಿರ್ಧಾರ ತಳೆಯಿರಿ. ರಾಜಕೀಯ ಕ್ಷೇತ್ರದಲ್ಲಿ ಕೆಲವು ಬದಲಾವಣೆಗಳಾಗಲಿವೆ.

ಸಿಂಹ ರಾಶಿ (Leo):

ಉದ್ಯೋಗದಲ್ಲಿ ಲಾಭದ ಪ್ರಮಾಣ ಹೆಚ್ಚಿಸಲು ಹೊಸ ಯೋಜನೆ ರೂಪಿಸುವಿರಿ. ಸಂಗಾತಿಯನ್ನು ಸಂತೋಷವಾಗಿಡುವಿರಿ. ವೈಯಕ್ತಿಕ ಪ್ರಚಾರದ ಅಗತ್ಯವಿಲ್ಲ, ಫಲ ತಾನಾಗಿಯೇ ಬರಲಿದೆ. ಕೆಲಸದ ಒತ್ತಡ ಕಡಿಮೆಯಾಗಿ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಬಂಧುಗಳ ಬಗ್ಗೆ ಮನಸ್ಸಿನಲ್ಲಿ ಪೂರ್ವಾಗ್ರಹ ಪೀಡಿತ ಅಭಿಪ್ರಾಯ ಇರದಿರುವುದು ಒಳಿತು.

ಕನ್ಯಾ ರಾಶಿ (Virgo):

ನಿಮ್ಮ ಕಾರ್ಯತಂತ್ರಗಳಲ್ಲಿ ಅಗತ್ಯ ಬದಲಾವಣೆ ಮಾಡಿಕೊಳ್ಳಬೇಕಾಗಬಹುದು. ಆಲಂಕಾರಿಕ ವಸ್ತುಗಳನ್ನು ಇಷ್ಟಪಟ್ಟು ಖರೀದಿಸುವಿರಿ. ನಿಮ್ಮ ನಿರ್ಧಾರವೇ ಅಂತಿಮ ಎನ್ನದೆ ಇತರರ ಅಭಿಪ್ರಾಯಗಳಿಗೂ ಬೆಲೆ ನೀಡಿ. ಹಣಕಾಸಿನ ವಿಚಾರದಲ್ಲಿ ಹೆಚ್ಚು ಯೋಚಿಸುವಿರಿ. ವ್ಯವಹಾರದಲ್ಲಿ ಹೊಸ ಅಧ್ಯಾಯ ಪ್ರಾರಂಭವಾಗಲಿದ್ದು, ಹೂಡಿಕೆ ವಿಸ್ತರಣೆಗೆ ಆತುರ ಬೇಡ.

ತುಲಾ ರಾಶಿ (Libra):

ಸಂಗಾತಿಯ ಪ್ರೀತಿ ಹಾಗೂ ನಿರ್ಧಾರಗಳನ್ನು ಒಪ್ಪಿಕೊಳ್ಳುವುದು ಅನಿವಾರ್ಯವಾಗಲಿದೆ. ನಿಮ್ಮ ಉಪಕಾರವನ್ನು ಸ್ಮರಿಸುವ ಜನರು ಸಿಗಲಿದ್ದಾರೆ. ಆರೋಗ್ಯ ವೆಚ್ಚಗಳನ್ನು ಸರಿದೂಗಿಸಲು ವಿಮೆಯ ಮೊರೆ ಹೋಗುವಿರಿ. ಕಾನೂನು ವಿರೋಧಿ ಚಟುವಟಿಕೆಗಳಿಂದ ದೂರವಿರಿ. ಕೆಲಸದಲ್ಲಿ ವಿಳಂಬವಾದರೂ ಆಪ್ತರೊಂದಿಗಿನ ಬಾಂಧವ್ಯ ಗಟ್ಟಿಯಾಗಲಿದೆ.

ವಶ್ಚಿಕ ರಾಶಿ (Scorpio):

ಬಹಳ ದಿನಗಳಿಂದ ಬಾಕಿಯಿದ್ದ ಕೆಲಸಗಳನ್ನು ವೇಗವಾಗಿ ಪೂರ್ಣಗೊಳಿಸುವಿರಿ. ನಿಮ್ಮಲ್ಲಿರುವುದನ್ನು ಇತರರಿಗೆ ಕೊಡುವ ಮನಸ್ಸು ಇರದು. ಅಧಿಕ ಮಾತು ನಿಮ್ಮ ಸ್ವಭಾವವನ್ನು ಎತ್ತಿ ತೋರಿಸಬಹುದು. ಸಣ್ಣಪುಟ್ಟ ದೇಹಪೀಡೆ ಕಾಡಬಹುದು. ಹೊಸ ತಂತ್ರಜ್ಞಾನ ಕಲಿಯಲು ಆಸಕ್ತಿ ತೋರುವಿರಿ. ಚಿಂತೆಯಲ್ಲಿದ್ದಾಗ ಹಣಕಾಸಿನ ಮೇಲಿನ ನಿಯಂತ್ರಣ ತಪ್ಪದಂತೆ ನೋಡಿಕೊಳ್ಳಿ.

ಧನು ರಾಶಿ (Sagittarius):

ಉದ್ಯೋಗ ಕ್ಷೇತ್ರದಲ್ಲಿ ಕೆಲಸ ಕಾರ್ಯಗಳು ಚುರುಕಿನಿಂದ ನಡೆಯಲಿವೆ. ಮನೆಯ ಸಮಾರಂಭಗಳಲ್ಲಿ ಭಾಗವಹಿಸಲು ಪ್ರಯಾಣ ಬೆಳೆಸುವಿರಿ. ಮಕ್ಕಳ ಪ್ರೀತಿ ಹಾಗೂ ಕುಟುಂಬದವರೊಂದಿಗೆ ಸಂತೋಷ ಹಂಚಿಕೊಳ್ಳುವಿರಿ. ಪ್ರೇಮ ಜೀವನ ಸುಖಮಯವಾಗಿರುತ್ತದೆ. ವೃತ್ತಿಪರ ಕೆಲಸಗಳಲ್ಲಿ ಮುನ್ನಡೆ ಸಾಧಿಸಲಿದ್ದೀರಿ.

ಮಕರ ರಾಶಿ (Capricorn):

ನಿಮ್ಮನ್ನು ನಿಂದಿಸಿದವರೇ ಇಂದು ನಿಮ್ಮ ಸಹಾಯ ಅಥವಾ ಸ್ನೇಹ ಬಯಸಿ ಬರಲಿದ್ದಾರೆ. ಉತ್ತಮ ಜೀವನಶೈಲಿಗಾಗಿ ಮಾಡಿದ ಶ್ರಮಕ್ಕೆ ಇಂದಿನ ದಿನ ಫಲ ಸಿಗಲಿದೆ. ಕೃಷಿಕರಿಗೆ ಅಥವಾ ಬೆಳೆಗಾರರಿಗೆ ನಷ್ಟದ ಚಿಂತೆ ಕಾಡಬಹುದು. ಕಚೇರಿಯಲ್ಲಿ ಉತ್ಸಾಹದಿಂದ ಕೆಲಸ ಮಾಡಿ ಇತರರಿಗೆ ಮಾದರಿಯಾಗುವಿರಿ. ಅಂದುಕೊಂಡಿದ್ದನ್ನು ಸಾಧಿಸುವಿರಿ.

ಕುಂಭ ರಾಶಿ (Aquarius):

ಮನಸ್ಸಿಗೆ ವಿರುದ್ಧವಾದ ವಾತಾವರಣವಿದ್ದರೂ ಅದನ್ನು ನಿರ್ಲಕ್ಷಿಸಿ ಮುನ್ನಡೆಯುವಿರಿ. ಮಕ್ಕಳೊಂದಿಗೆ ಕಾಲ ಕಳೆಯುವುದರಿಂದ ಖುಷಿ ಸಿಗಲಿದೆ. ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಯೋಗವಿದೆ. ಆಲಸ್ಯ ಹೆಚ್ಚಾಗಬಹುದು. ಕೆಲವು ಅಹಿತಕರ ವ್ಯಕ್ತಿಗಳ ಭೇಟಿಯಿಂದ ಅನಗತ್ಯ ತೊಂದರೆ ಎದುರಾಗಬಹುದು, ಜಾಗರೂಕರಾಗಿರಿ.

ಮೀನ ರಾಶಿ (Pisces):

ನಿಮ್ಮ ಹತ್ತಾರು ಕನಸುಗಳಲ್ಲಿ ಪ್ರಮುಖವಾದ ಒಂದು ಕನಸು ಸಾಕಾರಗೊಳ್ಳಲಿದೆ. ಜೀವನದಲ್ಲಿ ಸೌಕರ್ಯಗಳು ಹೆಚ್ಚಾಗಲಿವೆ. ಧಾರ್ಮಿಕ ಹಾಗೂ ಪವಿತ್ರ ಸ್ಥಳಕ್ಕೆ ಕುಟುಂಬದೊಂದಿಗೆ ಭೇಟಿ ನೀಡುವಿರಿ. ಆಪ್ತರಿಗೆ ಉಡುಗೊರೆ ನೀಡಲು ಸಿದ್ಧತೆ ನಡೆಸುವಿರಿ. ಶ್ರಮ ಹಾಗೂ ಪ್ರಯತ್ನ ಬಲದಿಂದ ಶುಭ ಕಾರ್ಯಗಳ ನಿರ್ಧಾರ ಕೈಗೂಡಲಿದೆ.

Leave a Reply

Your email address will not be published. Required fields are marked *