ಮೇಷ ರಾಶಿ: ಇಂದು ವೃತ್ತಿರಂಗದಲ್ಲಿ ಇದ್ದಕ್ಕಿದ್ದಂತೆ ಶುಭ ವಾರ್ತೆಗಳು ಕೇಳಿಬರಲಿವೆ. ನಿಮ್ಮ ದಕ್ಷತೆಗೆ ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ ದೊರೆಯುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಸಾಧಾರಣ ಪ್ರಗತಿ ಇರಲಿದೆ. ಕೌಟುಂಬಿಕವಾಗಿ ನೆಮ್ಮದಿಯ ವಾತಾವರಣ ಇರಲಿದ್ದು, ಸಂಗಾತಿಯಿಂದ ಪೂರ್ಣ ಬೆಂಬಲ ಸಿಗಲಿದೆ. ಆತುರದ ನಿರ್ಧಾರಗಳನ್ನು ತಪ್ಪಿಸಿ.
ವೃಷಭ ರಾಶಿ: ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಧನಾತ್ಮಕ ಬದಲಾವಣೆಗಳನ್ನು ನಿರೀಕ್ಷಿಸಬಹುದು. ದೀರ್ಘಕಾಲದ ಹೂಡಿಕೆಗಳಿಗೆ ಇಂದು ಸೂಕ್ತ ದಿನವಾಗಿದೆ. ಆದರೆ, ಆರ್ಥಿಕ ವಹಿವಾಟು ನಡೆಸುವಾಗ ಯಾರನ್ನೂ ಕುರುಡಾಗಿ ನಂಬಬೇಡಿ. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸುವುದು ಉತ್ತಮ, ಹೊರಗಿನ ಆಹಾರ ಸೇವನೆ ಬೇಡ.
ಮಿಥುನ ರಾಶಿ: ನಿಮ್ಮ ಬುದ್ಧಿವಂತಿಕೆ ಮತ್ತು ಸಂವಹನ ಕೌಶಲ್ಯದಿಂದ ಹೊಸ ಒಪ್ಪಂದಗಳನ್ನು ಪಡೆದುಕೊಳ್ಳುವಿರಿ. ಕಲಾ ರಂಗ ಹಾಗೂ ಐಟಿ ವಲಯದಲ್ಲಿರುವವರಿಗೆ ಅತ್ಯುತ್ತಮ ಅವಕಾಶಗಳು ಸಿಗಲಿವೆ. ಸ್ನೇಹಿತರೊಂದಿಗೆ ಪ್ರವಾಸ ಕೈಗೊಳ್ಳುವ ಯೋಜನೆ ರೂಪಿಸುವಿರಿ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿದೆ.
ಕರ್ಕಾಟಕ ರಾಶಿ: ವೃತ್ತಿಜೀವನದಲ್ಲಿ ದೊಡ್ಡ ಯಶಸ್ಸು ನಿಮ್ಮದಾಗಲಿದೆ. ಕಚೇರಿಯಲ್ಲಿ ಉನ್ನತ ಸ್ಥಾನ ಅಥವಾ ಹೊಸ ಜವಾಬ್ದಾರಿಗಳು ಹೆಗಲೇರಬಹುದು. ವಿದೇಶಿ ಸಂಪರ್ಕಗಳಿಂದ ಲಾಭವಾಗಲಿದೆ. ಕುಟುಂಬದ ಹಿರಿಯರ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದ್ದು, ಮನಸ್ಸಿಗೆ ನೆಮ್ಮದಿ ಸಿಗಲಿದೆ.
ಸಿಂಹ ರಾಶಿ: ಇಂದು ಆರ್ಥಿಕವಾಗಿ ಧನ ಲಾಭದ ಯೋಗವಿದೆ. ಬಾಕಿ ಉಳಿದಿದ್ದ ಹಣ ನಿಮ್ಮ ಕೈಸೇರಲಿದೆ. ಆದರೆ, ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳ ರಾಜಕೀಯಕ್ಕೆ ಕಿವಿಗೊಡಬೇಡಿ. ನಿಮ್ಮ ಕೆಲಸದ ಮೇಲೆ ಮಾತ್ರ ಗಮನವಿರಲಿ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ.
ಕನ್ಯಾ ರಾಶಿ: ಇಂದು ಕಠಿಣ ಪರಿಶ್ರಮಕ್ಕೆ ತಕ್ಕ ಉತ್ತಮ ಫಲ ಸಿಗಲಿದೆ. ಹೊಸ ಯೋಜನೆಗಳನ್ನು ಆರಂಭಿಸಲು ಹಿರಿಯರ ಮಾರ್ಗದರ್ಶನ ಪಡೆದುಕೊಳ್ಳಿ. ವೃತ್ತಿಜೀವನದಲ್ಲಿ ಸಣ್ಣ ಸಣ್ಣ ಬದಲಾವಣೆಗಳು ಎದುರಾಗಬಹುದು. ಆತುರದಲ್ಲಿ ಯಾವುದೇ ದಾಖಲೆಗಳಿಗೆ ಸಹಿ ಹಾಕಬೇಡಿ, ಜಾಗರೂಕತೆ ಇರಲಿ.
ತುಲಾ ರಾಶಿ: ನಿಮ್ಮ ಕ್ರಿಯಾಶೀಲತೆಗೆ ತಕ್ಕ ಮನ್ನಣೆ ದೊರೆಯಲಿದ್ದು, ಸಮಾಜದಲ್ಲಿ ಗೌರವ ವೃದ್ಧಿಸಲಿದೆ. ಉದ್ಯೋಗದಲ್ಲಿ ಹೊಸ ಆಫರ್‌ಗಳು ಬರುವ ಸಾಧ್ಯತೆ ಇದೆ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭಾಂಶ ಹೆಚ್ಚಾಗಲಿದೆ. ನೂತನ ವಸ್ತು ಅಥವಾ ವಾಹನ ಖರೀದಿ ಯೋಗವಿದೆ.
ವೃಶ್ಚಿಕ ರಾಶಿ: ಕೆಲಸದ ಒತ್ತಡ ಹೆಚ್ಚಾಗಿದ್ದರೂ ನಿಮ್ಮ ಕಾರ್ಯದಕ್ಷತೆಯಿಂದ ಎಲ್ಲವನ್ನೂ ಯಶಸ್ವಿಯಾಗಿ ನಿಭಾಯಿಸುವಿರಿ. ಕಚೇರಿಯಲ್ಲಿ ರಹಸ್ಯ ಶತ್ರುಗಳ ಬಗ್ಗೆ ಎಚ್ಚರವಿರಲಿ. ನಿಮ್ಮ ರಹಸ್ಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಸಹನೆ ಕಳೆದುಕೊಳ್ಳದೆ ಕಾರ್ಯನಿರ್ವಹಿಸಿ.
ಧನು ರಾಶಿ: ಇಂದು ನಾಯಕತ್ವದ ಗುಣಗಳು ಹೊರಹೊಮ್ಮಲಿವೆ. ಹೊಸ ಉದ್ಯಮ ಅಥವಾ ಸ್ಟಾರ್ಟ್‌ಅಪ್ ಆರಂಭಿಸಲು ಯೋಚಿಸುತ್ತಿದ್ದರೆ ಇಂದು ಅತ್ಯಂತ ಶುಭ ದಿನ. ಉದ್ಯೋಗಿಗಳಿಗೆ ಅಪೇಕ್ಷಿತ ವರ್ಗಾವಣೆ ಅಥವಾ ಹೊಸ ಹುದ್ದೆ ಸಿಗುವ ಯೋಗವಿದೆ. ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ ಸಿಗಲಿದೆ.
ಮಕರ ರಾಶಿ: ಉದ್ಯೋಗ ಕ್ಷೇತ್ರದಲ್ಲಿ ಹಠಾತ್ ಸವಾಲುಗಳು ಎದುರಾಗಬಹುದು, ಧೃತಿಗೆಡಬೇಡಿ. ಕೆಲಸದಲ್ಲಿ ಯಾವುದೇ ಶಾರ್ಟ್‌ಕಟ್ ಬಳಸಲು ಹೋಗಬೇಡಿ. ಸಹೋದ್ಯೋಗಿಗಳೊಂದಿಗೆ ವಾದ-ವಿವಾದ ಮಾಡದೆ, ಶಾಂತವಾಗಿ ಕಾರ್ಯ ನಿರ್ವಹಿಸುವುದು ಪ್ರಗತಿಗೆ ಪೂರಕವಾಗಿದೆ.
ಕುಂಭ ರಾಶಿ: ಮನಸ್ಸಿನಲ್ಲಿ ಕೆಲವು ಗೊಂದಲಗಳು ಉಂಟಾಗಬಹುದು. ಭ್ರಮೆಯ ಆಧಾರದ ಮೇಲೆ ಯಾವುದೇ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ, ವಿಶೇಷವಾಗಿ ಉದ್ಯೋಗ ಬದಲಿಸುವ ಆಲೋಚನೆ ಇಂದು ಬೇಡ. ಸ್ಥಿರತೆಯಿಂದ ಕಾರ್ಯನಿರ್ವಹಿಸಿದರೆ ದಿನದ ದ್ವಿತೀಯಾರ್ಧದಲ್ಲಿ ಯಶಸ್ಸು ನಿಮ್ಮದಾಗುತ್ತದೆ.
ಮೀನ ರಾಶಿ: ಜವಾಬ್ದಾರಿಗಳು ಮತ್ತು ಶ್ರಮ ಹೆಚ್ಚಾಗಲಿದೆ. ಶಿಸ್ತು ಮತ್ತು ಸಮಯ ಪಾಲನೆ ನಿಮಗೆ ಯಶಸ್ಸು ತರಲಿದೆ. ನಿಧಾನಗತಿಯಲ್ಲಾದರೂ ನಿಮ್ಮ ವೃತ್ತಿಜೀವನದಲ್ಲಿ ಸ್ಥಿರವಾದ ಪ್ರಗತಿ ಮತ್ತು ಆರ್ಥಿಕ ಭದ್ರತೆ ಕಂಡುಬರಲಿದೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ.


