ಇಂದು ಈ ರಾಶಿಯವರು ಹಠ ಹಿಡಿದು ಕೆಲಸಗಳನ್ನು ಪೂರ್ಣಗೊಳಿಸುವಿರಿ

ಇಂದಿನ ಪಂಚಾಂಗದ ಪ್ರಕಾರ ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ವಸಂತ ಋತುವಿನ ಚೈತ್ರ ಮಾಸದ ಶುಕ್ಲ ಪಕ್ಷದ ದಶಮೀ ತಿಥಿಯಾಗಿದೆ.

ಮೇಷ: ಇಂದು ನೀವು ಎದುರಾಗುವ ಸವಾಲುಗಳನ್ನು ಜಾಣ್ಮೆಯಿಂದ ನಿಭಾಯಿಸುವಿರಿ. ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಯಶಸ್ಸು ಸಿಗುವ ಸಾಧ್ಯತೆಯಿದೆ. ಮಕ್ಕಳೊಂದಿಗೆ ಸಮಯ ಕಳೆಯುವುದರಿಂದ ಸಂತೋಷ ಸಿಗಲಿದೆ.

Advertisement

ವೃಷಭ: ತಾಂತ್ರಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಇಂದು ಶುಭ ದಿನ. ಸರ್ಕಾರಿ ಕೆಲಸಗಳಿಗಾಗಿ ಅಲೆದಾಟವಿರಬಹುದು. ಸಂಗಾತಿಯ ಸೃಜನಶೀಲ ಕೆಲಸಗಳು ನಿಮಗೆ ಹೆಮ್ಮೆ ತರಲಿವೆ.

ಮಿಥುನ: ಆರ್ಥಿಕ ಹೂಡಿಕೆಯಿಂದ ಲಾಭವಾಗುವ ಯೋಗವಿದೆ. ದಾಂಪತ್ಯ ಜೀವನದಲ್ಲಿ ನೆಮ್ಮದಿ ಕಾಣುವಿರಿ. ಸ್ಥಗಿತಗೊಂಡಿದ್ದ ಕೆಲಸಗಳಿಗೆ ಚಾಲನೆ ನೀಡಲು ಇದು ಸಕಾಲ.

ಕರ್ಕಾಟಕ: ವ್ಯಾಪಾರದಲ್ಲಿ ಪ್ರಗತಿ ಕಂಡುಬರಲಿದೆ. ಆದರೆ ಉದ್ಯೋಗದಲ್ಲಿ ಸ್ವಲ್ಪ ನಿರಾಶೆಯ ಅನುಭವವಾಗಬಹುದು. ಪ್ರಮುಖ ದಾಖಲೆಗಳನ್ನು ನಿರ್ವಹಿಸುವಾಗ ಎಚ್ಚರಿಕೆ ಇರಲಿ.

ಸಿಂಹ: ಇಂದು ನೀವು ಭಾವನಾತ್ಮಕವಾಗಿ ಸೂಕ್ಷ್ಮವಾಗಿರುವಿರಿ. ಇತರರ ಮಾತುಗಳಿಂದ ನೋವಾಗುವ ಸಾಧ್ಯತೆಯಿದೆ. ದೂರದ ಪ್ರಯಾಣವನ್ನು ಇಂದು ಕೈಬಿಡುವುದು ಒಳಿತು.

ಕನ್ಯಾ: ಸಾಮಾಜಿಕ ಕೆಲಸಗಳಲ್ಲಿ ನಿಮ್ಮ ಸಕ್ರಿಯ ಪಾಲ್ಗೊಳ್ಳುವಿಕೆಗೆ ಮೆಚ್ಚುಗೆ ಸಿಗಲಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಮನಸ್ಸಿನ ಶಾಂತಿಗಾಗಿ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುವಿರಿ.

ತುಲಾ: ಅನಿರೀಕ್ಷಿತವಾಗಿ ಹಣಕಾಸಿನ ಲಾಭವಾಗುವ ಸಾಧ್ಯತೆಯಿದೆ. ವಿದೇಶಿ ಸಂಬಂಧಿತ ವ್ಯವಹಾರಗಳಿಂದ ಲಾಭ ಸಿಗಲಿದೆ. ಸ್ನೇಹಿತರಿಂದ ಸಹಾಯದ ನಿರೀಕ್ಷೆ ಮಾಡಬಹುದು.

ವೃಶ್ಚಿಕ: ಇಂದು ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿರಲಿದೆ. ಹಠ ಹಿಡಿದು ಕೆಲಸಗಳನ್ನು ಪೂರ್ಣಗೊಳಿಸುವಿರಿ. ಅದೃಷ್ಟ ನಿಮ್ಮ ಪರವಾಗಿದ್ದು, ಹೊಸ ಸವಾಲುಗಳನ್ನು ಸ್ವೀಕರಿಸುವಿರಿ.

ಧನು: ಕುಟುಂಬದ ಸದಸ್ಯರೊಂದಿಗೆ ಬಾಂಧವ್ಯ ಗಟ್ಟಿಯಾಗಲಿದೆ. ಕೆಲಸದ ಒತ್ತಡ ಹೆಚ್ಚಾದರೂ, ನಿಮ್ಮ ಶ್ರಮಕ್ಕೆ ತಕ್ಕ ಮನ್ನಣೆ ದೊರೆಯಲಿದೆ. ಆದಾಯದ ಮೂಲಗಳು ಹೆಚ್ಚಾಗಲಿವೆ.

ಮಕರ: ಕುಟುಂಬದವರಿಂದ ಆರ್ಥಿಕ ನೆರವು ಸಿಗಲಿದೆ. ಆದಾಯ ಮತ್ತು ಖರ್ಚಿನ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಮುಖ್ಯ. ಹಿರಿಯರ ಸಲಹೆಗಳನ್ನು ಪಾಲಿಸಿ.

ಕುಂಭ: ಆರೋಗ್ಯದ ಕಡೆ ಗಮನಹರಿಸಿ, ಕೆಲಸದ ಒತ್ತಡ ಹೆಚ್ಚಾದರೂ, ನಿಮ್ಮ ಶ್ರಮಕ್ಕೆ ತಕ್ಕ ಮನ್ನಣೆ ದೊರೆಯಲಿದೆ.

ಮೀನ: ಒಟ್ಟಾರೆಯಾಗಿ ದಿನವು ಮಿಶ್ರಫಲದಿಂದ ಕೂಡಿರುತ್ತದೆ. ಆರೋಗ್ಯದ ಕಡೆ ಗಮನಹರಿಸಿ ಮತ್ತು ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಆತುರಪಡಬೇಡಿ.

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು