ಟೋಲ್ ಕಳ್ಳಾಟಕ್ಕೆ ಬೀಳಲಿದೆ ಬ್ರೇಕ್: ಇನ್ಮುಂದೆ ಟೋಲ್ ಪಾವತಿಸದೆ ಹೋದ್ರೆ ಬೀಳುತ್ತೆ ಡಬಲ್ ದಂಡ!

ಬೆಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಪಾವತಿಸದೆ ತಪ್ಪಿಸಿಕೊಳ್ಳುವ ವಾಹನ ಸವಾರರ ವಿರುದ್ಧ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಫಾಸ್ಟ್ಯಾಗ್ (FASTag) ಇದ್ದರೂ ಅಥವಾ ಇಲ್ಲದಿದ್ದರೂ ನಿಯಮ ಉಲ್ಲಂಘಿಸುವವರಿಗೆ ಈಗಿರುವ ದಂಡದ ಪ್ರಮಾಣವನ್ನು ದುಪ್ಪಟ್ಟುಗೊಳಿಸಲು ನಿರ್ಧರಿಸಲಾಗಿದೆ.ಟೋಲ್ ಗೇಟ್‌ಗಳಲ್ಲಿ ಶುಲ್ಕ ಪಾವತಿಸದೆ ಬ್ಯಾರಿಕೇಡ್‌ಗಳನ್ನು ನೂಕಿಕೊಂಡು ಹೋಗುವುದು ಅಥವಾ ಅಕ್ರಮವಾಗಿ ಸಂಚರಿಸುವ ವಾಹನಗಳಿಗೆ ನಿಗದಿತ ಟೋಲ್ ದರದ ಎರಡು ಪಟ್ಟು ದಂಡ ವಿಧಿಸಲಾಗುತ್ತದೆ.

ಫಾಸ್ಟ್ಯಾಗ್ ಇಲ್ಲದ ವಾಹನಗಳು ಫಾಸ್ಟ್ಯಾಗ್ ಲೇನ್ ಪ್ರವೇಶಿಸಿದರೆ ಈಗಾಗಲೇ ದ್ವಿಗುಣ ದಂಡ ವಿಧಿಸಲಾಗುತ್ತಿದೆ. ಆದರೆ, ಈಗ ಟೋಲ್ ತಪ್ಪಿಸುವ ಪ್ರಯತ್ನ ಮಾಡುವವರಿಗೂ ಈ ನಿಯಮ ಅನ್ವಯವಾಗಲಿದೆ.ಹೆದ್ದಾರಿಗಳಲ್ಲಿ ಅಳವಡಿಸಲಾಗಿರುವ ಸುಧಾರಿತ ಸಿಸಿಟಿವಿ ಕ್ಯಾಮೆರಾಗಳು ಮತ್ತು ಎಎನ್‌ಪಿಆರ್ (ANPR – Automatic Number Plate Recognition) ತಂತ್ರಜ್ಞಾನದ ಮೂಲಕ ಇಂತಹ ವಾಹನಗಳನ್ನು ಪತ್ತೆಹಚ್ಚಿ ನೇರವಾಗಿ ಮಾಲೀಕರ ಮೊಬೈಲ್‌ಗೆ ನೋಟಿಸ್ ಕಳುಹಿಸಲಾಗುತ್ತದೆ.

Advertisement

ಇದನ್ನೂ ಓದಿ: ಕಾರ್ಕಳದಲ್ಲಿ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ, ರಿಕ್ಷಾ ಚಾಲಕ ಅರೆಸ್ಟ್

ಯಾರಿಗೆ ಈ ನಿಯಮ ಅನ್ವಯ?:

ಟೋಲ್ ನೀಡದೆ ಅಕ್ರಮ ದಾರಿಗಳ ಮೂಲಕ ನುಗ್ಗುವವರು.

ಫಾಸ್ಟ್ಯಾಗ್‌ನಲ್ಲಿ ಹಣವಿಲ್ಲದಿದ್ದರೂ ಲೇನ್ ಪ್ರವೇಶಿಸಿ ಗಲಾಟೆ ಮಾಡುವವರು.

ಸರ್ಕಾರದ ವಿನಾಯಿತಿ ಇಲ್ಲದಿದ್ದರೂ ‘ಸ್ಥಳೀಯ’ ಎಂಬ ನೆಪವೊಡ್ಡಿ ಶುಲ್ಕ ಪಾವತಿಸದವರು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು