ಇತ್ತೀಚಿನ ದಿನಗಳಲ್ಲಿ ಡೇಟಿಂಗ್ ಜಗತ್ತಿನಲ್ಲಿ ಹೊಸ ಹೊಸ ಪದಗಳು ಕೇಳಿಬರುತ್ತಿವೆ. ಅದರಲ್ಲಿ 2026ರ ಸಾಲಿನಲ್ಲಿ ಹೆಚ್ಚು ಚರ್ಚೆಯಾಗುತ್ತಿರುವ ಪದವೆಂದರೆ ‘ಟೋಲಿಯಾಮರಿ’. ಇದು ಕೇಳಲು ಆಕರ್ಷಕವಾಗಿದ್ದರೂ, ಇದರ ಹಿಂದಿನ ಸತ್ಯ ಮಾತ್ರ ಕಹಿ ಎನ್ನುತ್ತಾರೆ ತಜ್ಞರು.
ಏನಿದು ಟೋಲಿಯಾಮರಿ?

ಇದು ಪರಸ್ಪರ ಒಪ್ಪಿಗೆಯಿಂದ ನಡೆಯುವ ಮುಕ್ತ ಸಂಬಂಧ. ಇಲ್ಲಿ ಸಂಗಾತಿಗಳ ನಡುವೆ ಪಾರದರ್ಶಕತೆ ಮತ್ತು ಗೌರವ ಇರುತ್ತದೆ.
ಸರಳವಾಗಿ ಹೇಳುವುದಾದರೆ, ಸಂಗಾತಿಯು ಮತ್ತೊಬ್ಬರ ಜೊತೆ ಸಂಬಂಧ ಹೊಂದಿರುವುದು ತಿಳಿದಿದ್ದರೂ, ಅದನ್ನು ಅನಿವಾರ್ಯವಾಗಿ ಅಥವಾ ಅಸಹಾಯಕತೆಯಿಂದ ಸಹಿಸಿಕೊಳ್ಳುವುದೇ ‘ಟೋಲಿಯಾಮರಿ’. ಇಲ್ಲಿ ಪ್ರೀತಿಗಿಂತ ಹೆಚ್ಚಾಗಿ ‘ಸಹನೆ’ (Tolerance) ಇರುತ್ತದೆ. ಅಂದರೆ, ಒಬ್ಬ ವ್ಯಕ್ತಿ ತನ್ನ ಸಂಗಾತಿಯ ಅಕ್ರಮ ಸಂಬಂಧವನ್ನು ತಿಳಿದೂ ಕಣ್ಣು ಮುಚ್ಚಿ ಕುಳಿತುಕೊಳ್ಳುವುದು.
ಪಾಲಿಮಾಮರಿ (Polyamory) ಮತ್ತು ಟೋಲಿಯಾಮರಿ ನಡುವಿನ ವ್ಯತ್ಯಾಸ
ಪಾಲಿಮಾಮರಿ: ಇದು ಪರಸ್ಪರ ಒಪ್ಪಿಗೆಯಿಂದ ನಡೆಯುವ ಮುಕ್ತ ಸಂಬಂಧ. ಇಲ್ಲಿ ಸಂಗಾತಿಗಳ ನಡುವೆ ಪಾರದರ್ಶಕತೆ ಮತ್ತು ಗೌರವ ಇರುತ್ತದೆ.
ಟೋಲಿಯಾಮರಿ: ಇದು ವಂಚನೆಗೆ ಸಮನಾದದ್ದು. ಇಲ್ಲಿ ಒಬ್ಬರು ಮೋಸ ಮಾಡುತ್ತಿದ್ದರೆ, ಇನ್ನೊಬ್ಬರು ಅನಿವಾರ್ಯವಾಗಿ ನೋವನ್ನು ನುಂಗಿಕೊಂಡು ಇರುತ್ತಾರೆ. ಇದು ಸಂಬಂಧದ ಮೂಲ ತಳಹದಿಯಾದ ‘ನಂಬಿಕೆ’ಯನ್ನು ನಾಶಪಡಿಸುತ್ತದೆ.
ಇದನ್ನೂ ಓದಿ: ದೇಶದ ಹಲವೆಡೆ ಉಷ್ಣತೆಯ ಏರಿಕೆ: ಹೀಟ್‌ವೇವ್ ಅಪಾಯದ ಬಗ್ಗೆ ವೈದ್ಯರ ಎಚ್ಚರಿಕೆ, ಇವುಗಳನ್ನು ತಪ್ಪದೆ ಪಾಲಿಸಿ
ತಜ್ಞರ ಎಚ್ಚರಿಕೆ
ಈ ಪದವು ಸಂಬಂಧವನ್ನು ಆಧುನಿಕವಾಗಿ ತೋರಿಸಲು ಬಳಸುವ ಬಣ್ಣದ ಮಾತಷ್ಟೇ. ಇದು ಸಂಬಂಧದಲ್ಲಿರುವ ವ್ಯಕ್ತಿಯ ಮಾನಸಿಕ ನೆಮ್ಮದಿಯನ್ನು ಕಸಿದುಕೊಳ್ಳುತ್ತದೆ ಮತ್ತು ಅಕ್ರಮ ಸಂಬಂಧಗಳನ್ನು ವೈಭವೀಕರಿಸುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

