ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪವರ್ ಹಿಟ್ಟಿಂಗ್ನ ಅದ್ಭುತ ಪ್ರದರ್ಶನ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸುತ್ತಿದೆ. ಸ್ಪಿನ್ ಹಾಗೂ ಪೇಸ್ ಎರಡನ್ನೂ ಸಮಾನವಾಗಿ ಎದುರಿಸುತ್ತಿರುವ ಬ್ಯಾಟರ್ಗಳು ಮೈದಾನದಲ್ಲಿ ಸಿಕ್ಸರ್ ಮಳೆ ಸುರಿಸುತ್ತಿದ್ದಾರೆ. ಹಾಗಾದರೆ, ಫೆಬ್ರವರಿ 16 ರ ವರೆಗೆ ಅತಿ ಹೆಚ್ಚು ಸಿಕ್ಸರ್ಗಳನ್ನು ಬಾರಿಸಿದ ಟಾಪ್ 5 ಆಟಗಾರರ ವಿವರ ಇಲ್ಲಿದೆ.
ಸಾಹಿಬ್ಜಾದಾ ಫರ್ಹಾನ್ (ಪಾಕಿಸ್ತಾನ) – 11 ಸಿಕ್ಸರ್
ಪಾಕಿಸ್ತಾನ ಓಪನರ್ ಸಾಹಿಬ್ಜಾದಾ ಫರ್ಹಾನ್ 220 ರನ್ಗಳನ್ನು 73.33 ಸರಾಸರಿಯಲ್ಲಿ ಗಳಿಸಿದ್ದಾರೆ. ನಾಲ್ಕು ಪಂದ್ಯಗಳಲ್ಲಿ 21 ಬೌಂಡರಿ ಹಾಗೂ 11 ಸಿಕ್ಸರ್ಗಳನ್ನು ಸಿಡಿಸಿ ಒಂದು ಶತಕ ಮತ್ತು ಎರಡು ಅರ್ಧಶತಕಗಳನ್ನು ದಾಖಲಿಸಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ನಲ್ಲಿ ಬೌಂಡರಿ ಸುರಿಮಳೆಗೈದ ಟಾಪ್ ಐದು ಬ್ಯಾಟರ್ಗಳು; ಭಾರತದ ಏಕೈಕ ಬ್ಯಾಟರ್ ಯಾರು?
ಇಶಾನ್ ಕಿಶನ್ (ಭಾರತ) – 11 ಸಿಕ್ಸರ್
ಭಾರತದ ಆರಂಭಿಕ ಆಟಗಾರ ಇಶಾನ್ ಕಿಶನ್ ನಾಲ್ಕು ಪಂದ್ಯಗಳಲ್ಲಿ 176 ರನ್ಗಳನ್ನು 44.0 ಸರಾಸರಿಯಲ್ಲಿ ಗಳಿಸಿದ್ದಾರೆ. 11 ಸಿಕ್ಸರ್ ಮತ್ತು 19 ಬೌಂಡರಿಗಳೊಂದಿಗೆ 200 ಕ್ಕೂ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಪಾಕಿಸ್ತಾನ ವಿರುದ್ಧದ ಭರ್ಜರಿ ಗೆಲುವಿನಲ್ಲಿ ಇವರ ಪಾತ್ರ ಪ್ರಮುಖವಾಗಿತ್ತು.
️ಶಿಮ್ರಾನ್ ಹೆಟ್ಮೆಯರ್ (ವೆಸ್ಟ್ ಇಂಡೀಸ್) – 10 ಸಿಕ್ಸರ್
ಶಿಮ್ರೋನ್ ಹೇಟ್ಮೈಯರ್ ಮೂರು ಪಂದ್ಯಗಳಲ್ಲಿ 133 ರನ್ಗಳನ್ನು 166 ಕ್ಕೂ ಅಧಿಕ ಸ್ಟ್ರೈಕ್ ರೇಟ್ನಲ್ಲಿ ಗಳಿಸಿದ್ದಾರೆ. 66.50 ಸರಾಸರಿಯೊಂದಿಗೆ 10 ಸಿಕ್ಸರ್ ಸಿಡಿಸಿದ್ದಾರೆ.
ಇದನ್ನೂ ಓದಿ: T20 Worldcup: ಬ್ಯಾಟರ್ಗಳ ಅಬ್ಬರ, ಭಾರತಕ್ಕೆ ಸತತ ನಾಲ್ಕನೇ ಜಯ
️ವಿಲ್ ಜ್ಯಾಕ್ಸ್ (ಇಂಗ್ಲೆಂಡ್) – 9 ಸಿಕ್ಸರ್
ಇಂಗ್ಲೆಂಡ್ ಆಲ್ರೌಂಡರ್ ವಿಲ್ ಜ್ಯಾಕ್ಸ್ ನಾಲ್ಕು ಪಂದ್ಯಗಳಲ್ಲಿ 110 ರನ್ಗಳನ್ನು 110.0 ಸರಾಸರಿಯಲ್ಲಿ ಕಲೆಹಾಕಿದ್ದಾರೆ. 207.54 ಸ್ಟ್ರೈಕ್ ರೇಟ್ನೊಂದಿಗೆ 9 ಸಿಕ್ಸರ್ ಹಾಗೂ 5 ಬೌಂಡರಿಗಳನ್ನು ಸಿಡಿಸಿದ್ದಾರೆ. ಅಜೇಯ 53 ರನ್ಗಳ ಅರ್ಧಶತಕವೂ ಇವರ ಖಾತೆಯಲ್ಲಿದೆ.
️ಸೊಹೈಬ್ ಖಾನ್ (ಯುಎಇ) – 9 ಸಿಕ್ಸರ್
ಯುಎಇ ಮಧ್ಯಮ ಕ್ರಮಾಂಕದ ಬ್ಯಾಟರ್ ಸೋಹೈಬ್ ಖಾನ್ ನಾಲ್ಕು ಪಂದ್ಯಗಳಲ್ಲಿ 132 ರನ್ಗಳನ್ನು ಕಲೆಹಾಕಿದ್ದಾರೆ. 33.0 ಸರಾಸರಿ ಮತ್ತು 145.05 ಸ್ಟ್ರೈಕ್ ರೇಟ್ ಹೊಂದಿರುವ ಅವರು 9 ಸಿಕ್ಸರ್ ಮತ್ತು 10 ಬೌಂಡರಿಗಳನ್ನು ಬಾರಿಸಿದ್ದಾರೆ. ಟೂರ್ನಿಯಲ್ಲಿ ಎರಡು ಅರ್ಧಶತಕಗಳನ್ನೂ ಗಳಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

