ಸುಳ್ಯ: ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ಸುಳ್ಯ ಸಮೀಪ ನಡೆದಿದೆ.
ಸುಳ್ಯ ಬೆಳ್ಳಾರೆ ಚೊಕ್ಕಾಡಿ ರಸ್ತೆಯ ಬೇಂಗಮಲೆಯಲ್ಲಿ ಸೋಮವಾರ ಸಂಜೆ ಮರವೊಂದು ಚಲಿಸುತ್ತಿರುವ ಕಾರಿನ ಮೇಲೆ ಬಿದ್ದು ಕಾರು ಸಂಪೂರ್ಣ ಜಖಂಗೊಂಡು ಪ್ರಯಾಣಿಕರು ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ: ದಾವಣಗೆರೆ: ಆನ್‌ಲೈನ್ ಗೇಮಿಂಗ್ ಸಾಲ ತೀರಿಸಲು ವೃದ್ಧೆಯ ಕೊಲೆ; ಆರೋಪಿ ಅಭಿಷೇಕ್ ಬಂಧನ!
ಸುಳ್ಯದ ಉಮ್ಮರ್ ಎಂಬವರ ಸ್ವಿಫ್ಟ್ ಡಿಸೈರ್ ಕಾರಲ್ಲಿ ಸುಳ್ಯ ಸ್ಟೇಟ್ ಬ್ಯಾಂಕ್ ಮೇನೇಜರ್ ಉತ್ಸವ್ ಚಕ್ರವರ್ತಿ ಹಾಗೂ ಇನ್ನೊಬ್ಬರು ಫೀಲ್ಡ್ ಸ್ಟಾಫ್ ಸಾಲ ವಸೂಲಾತಿಗಾಗಿ ಬಾಡಿಗೆ ಕಾರಲ್ಲಿ ಪಂಜ ಕಡೆಗೆ ಹೋಗಿ ಬೆಳ್ಳಾರೆಯಿಂದ ಕಡೆಯಿಂದ ಸುಳ್ಯ ಕಡೆಗೆ ಹಿಂತಿರುಗಿ ಬರುತ್ತಿದ್ದರು.
ಬೇಂಗಮಲೆಯಲ್ಲಿ ರಸ್ತೆಬದಿಯಲ್ಲಿದ್ದ ದೊಡ್ಡ ಚೇರೆ ಮರ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದಿತು. ಕಾರು ನುಜ್ಜುಗುಜ್ಜಾಗಿದೆ. ಕಾರಲ್ಲಿದ್ದ ಪ್ರಯಾಣಿಕರಿಗೆ ಅಲ್ಪಸ್ವಲ್ಪ ಗಾಯಗಳಾಗಿವೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

