ಪುತ್ತೂರು: ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಆಡಳಿತ ಮಂಡಳಿಗೆ ನಡೆದ ಚೊಚ್ಚಲ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟ ರಿಟರ್ನಿಂಗ್ ಅಧಿಕಾರಿ ತ್ರಿವೇಣಿ ರಾವ್ ಹಾಗೂ ಸಹಾಯಕರಾಗಿ ಸಹಕರಿಸಿದ ನಾಗೇಂದ್ರ ಅವರನ್ನು ಇಂದು ಸನ್ಮಾನಿಸಿ ಗೌರವಿಸಲಾಯಿತು.
ಸಹಕಾರಿ ಸಂಘದ ಮುಖ್ಯ ಕಚೇರಿಯಲ್ಲಿ ನಡೆದ ಪದಗ್ರಹಣ ಸಮಾಂಭ ಕಾರ್ಯಕ್ರಮದಲ್ಲಿ ಅಧ್ಯಕ್ಷ ಸಹಕಾರ ರತ್ನ ಎಸ್.ಆರ್.ಸತೀಶ್ಚಂದ್ರ, ಉಪಾಧ್ಯಕ್ಷ ಉಮೇಶ್ ಪ್ರಭು ಕೆ. ಸನ್ಮಾನಿಸಿದರು.

ಇದನ್ನೂ ಓದಿ: ಶ್ರೀ ಸರಸ್ವತಿ ಸೌಹಾರ್ದ ಸಂಘದ ಅಧ್ಯಕ್ಷರಾಗಿ ಸಹಕಾರ ರತ್ನ ಸತೀಶ್ಚಂದ್ರ, ಉಪಾಧ್ಯಕ್ಷರಾಗಿ ಉಮೇಶ್ ಪ್ರಭು ಪುನರಾಯ್ಕೆ

ಈ ವೇಳೆ ನೂತನ ನಿರ್ದೇಶಕರಾದ ಹರೀಶ್ ಬೋರ್ಕರ್ ಕೆ., ರಾಜಗೋಪಾಲ ಬಿ., ದೇವಕಿ ನಾಯಕ್ ವಾಗ್ಲೆ ಸಂಟ್ಯಾರ್, ರವೀಶ ಪಿ. ಪೊಸವಳಿಕೆ, ವಸಂತ ಶಂಕರ್ ಬಿ., ವೇದವ್ಯಾಸ ಕೆ., ಚಂದ್ರಶೇಖರ ಭಟ್ ಮುಂಡುಗಾರು, ಸಂಜೀವ ನಾಯಕ್ ಕೆ., ದಯಾನಂದ ನಾಯಕ್ ಕೆ., ರಂಜಿತಾ ಆರ್. ಪ್ರಭು, ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಸಂತ ನಾಯಕ್ ಎ, ಉಪಪ್ರಧಾನ ವ್ಯವಸ್ಥಾಪಕಿ ಭವಾನಿ ಪ್ರಭು, ಸಹಾಯಕ ಪ್ರಧಾನ ವ್ಯವಸ್ಥಾಪಕ ಮತ್ತು ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಗೋಪಾಲಕೃಷ್ಣ ನಾಯಕ್ ಟಿ, ವಿಭಾಗಿಯ ವ್ಯವಸ್ಥಾಪಕ ರವಿಚಂದ್ರ ನಾಯಕ್, ಹಿರಿಯ ವ್ಯವಸ್ಥಾಪಕಿ ಶಾಲಿನಿ ಎಂ, ಪ್ರಧಾನ ಕಚೇರಿಯ ವ್ಯವಸ್ಥಾಪಕ ಮಂಜುನಾಥ ನಾಯಕ್ ಉಪಸ್ಥಿತರಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

