ನವದೆಹಲಿ: ವಿಧಾನಸಭೆ ಚುನಾವಣೆ ಎದುರು ನೋಡುತ್ತಿರುವ ಅಸ್ಸಾಂ, ಪುದುಚೇರಿ, ಕೇರಳ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿಗೆ ಪ್ರಸಕ್ತ ಸಾಲಿನ ಕೇಂದ್ರ ಬಜೆಟ್‌ನಲ್ಲಿ (Union Budget 2026) ಬಂಪರ್ ಕೊಡುಗೆಗಳನ್ನು ಘೋಷಿಸಲಾಗಿದೆ. ಒಡಿಶಾ, ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಮಿನರಲ್ ರಿಸರ್ವ್ ಪಾರ್ಕ್ಗಳನ್ನು ಸ್ಥಾಪಿಸುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಭಾನುವಾರ ಬಜೆಟ್‌ನಲ್ಲಿ ಘೋಷಿಸಿದ್ದಾರೆ.
ವಾರಣಾಸಿಯಿಂದ ಸಿಲಿಗುರಿಗೆ ರೈಲು ಕಾರಿಡಾರ್ ಘೋಷಣೆ ಮಾಡಲಾದರೆ, ಕೇರಳ ಮತ್ತು ತಮಿಳುನಾಡಿಗೆ ಅರ್ಥ್ ಕಾರಿಡಾರ್ ಘೋಷಿಸಲಾಗಿದೆ. ರೇರ್ ಅರ್ಥ್ ಖನಿಜಗಳ ವಿಚಾರದಲ್ಲಿ ಚೀನಾ ಮೇಲಿನ ಅವಲಂಬನೆ ತಪ್ಪಿಸಲು ಕೇರಳ, ಒಡಿಶಾ, ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಕಾರಿಡಾರ್ಗಳ ಸ್ಥಾಪನೆ ಘೋಷಣೆ ಮಾಡಲಾಗಿದೆ. ಎರಡನೇ ಮತ್ತು ಮೂರನೇ ಶ್ರೇಣಿಯ ನಗರಗಳನ್ನು ಪ್ರಮುಖ ನಗರ ಕೇಂದ್ರಗಳಿಗೆ ಸಂಪರ್ಕಿಸುವ ಸಲುವಾಗಿ ಏಳು ಹೈಸ್ಪೀಡ್ ರೈಲು ಕಾರಿಡಾರ್‌ಗಳನ್ನು ಘೋಷಿಸಲಾಗಿದೆ.

ಇದನ್ನೂ ಓದಿ: ಗುಜರಾತ್ ರಿಪಬ್ಲಿಕ್ ಡೇ ಟ್ಯಾಬ್ಲೋಗೆ ಜನಪ್ರಿಯ ಆಯ್ಕೆ ಪ್ರಶಸ್ತಿ
ಹೈದರಾಬಾದ್-ಬೆಂಗಳೂರು, ಬೆಂಗಳೂರು-ಚೆನ್ನೈ, ಪುಣೆ-ಮುಂಬೈ, ದೆಹಲಿ-ವಾರಣಾಸಿ, ಪುಣೆ-ಹೈದರಾಬಾದ್, ಹೈದರಾಬಾದ್-ಚೆನ್ನೈ ಮತ್ತು ವಾರಣಾಸಿ-ಸಿಲಿಗುರಿ ಮಾರ್ಗಗಳಲ್ಲಿ ಹೈಸ್ಪೀಡ್ ರೈಲು ಕಾರಿಡಾರ್‌ಗಳನ್ನು ಪ್ರಸ್ತಾಪಿಸಲಾಗಿದೆ. ಈ ಕಾರಿಡಾರ್‌ಗಳು ಪಶ್ಚಿಮ, ದಕ್ಷಿಣ, ಉತ್ತರ ಮತ್ತು ಪೂರ್ವ ಪ್ರದೇಶಗಳನ್ನು ಸಂಪರ್ಕಿಸಲಿವೆ. ತಂತ್ರಜ್ಞಾನ ಕೇಂದ್ರಗಳು, ಯಾತ್ರಾ ನಗರಗಳು, ಕೈಗಾರಿಕಾ ಕೇಂದ್ರಗಳು ಮತ್ತು ಅಭಿವೃದ್ಧಿಹೊಂದುತ್ತಿರುವ ನಗರ ಸಮೂಹಗಳ ನಡುವೆ ವೇಗವಾಗಿ ಸಂಪರ್ಕಿಸಲು ಇದು ಅನುಕೂಲವಾಗಲಿದೆ.
ಐಸಿಎಐ ಮತ್ತು ಐಸಿಎಸ್‌ಐನಂತಹ ವೃತ್ತಿಪರ ಸಂಸ್ಥೆಗಳಿಗೆ ನೆರವಾಗಲು ಪೂರ್ವ ಭಾರತದಲ್ಲಿ ಡಿಸೈನಿಂಗ್ ಇನ್ಸ್ಟಿಟ್ಯೂಟ್ ಆರಂಭಿಸುವ ಬಗ್ಗೆ ಬಜೆಟ್‌ನಲ್ಲಿ ಘೋಷಿಸಲಾಗಿದ್ದು, ಖಾಸಗಿ ಸಹಯೋಗದೊಂದಿಗೆ 5 ವೈದ್ಯಕೀಯ ಕೇಂದ್ರಗಳನ್ನು ರಚಿಸಲಾಗುವುದು ಎಂದಿದ್ದಾರೆ. ವೈದ್ಯಕೀಯ ಪ್ರವಾಸೋದ್ಯಮಕ್ಕೆ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲಾಗುವುದು ಎಂದ ವಿತ್ತಸಚಿವೆ, ಭಾರತದಲ್ಲಿ ಮೂರು ಹೊಸ ಅಖಿಲ ಭಾರತ ಆಯುರ್ವೇದ ಸಂಸ್ಥೆಗಳನ್ನು ಘೋಷಿಸಿದರು. ಉನ್ನತ ಶಿಕ್ಷಣ ಪಡೆಯಲು ಇಚ್ಛಿಸುವ ಮಹಿಳೆಯರ ಅನುಕೂಲಕ್ಕಾಗಿ ಪ್ರತಿ ಜಿಲ್ಲೆಯಲ್ಲೂ ಮಹಿಳಾ ಹಾಸ್ಟೆಲ್‌ಗಳನ್ನು ಘೋಷಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

