ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಕಂಬಳಗಳಲ್ಲಿ ಒಂದಾದ ಉಪ್ಪಿನಂಗಡಿಯ ವಿಜಯ-ವಿಕ್ರಮ ಜೋಡುಕರೆ ಕಂಬಳ ಸಮಿತಿ ಆಶ್ರಯದ 40ನೇ ವರ್ಷದ ಹೊನಲು ಬೆಳಕಿನ ‘ಉಬಾರ್ ಕಂಬಳೋತ್ಸವ’ವು ಮಾರ್ಚ್ 28ರಂದು ಕೂಟೇಲು ನೇತ್ರಾವತಿ ನದಿ ಕಿನಾರೆಯಲ್ಲಿ ಅದ್ಧೂರಿಯಾಗಿ ಜರುಗಲಿದೆ.ಮಾ. 28ರಂದು ಬೆಳಗ್ಗೆ 9.31ಕ್ಕೆ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಯಕ್ ಅವರು ಕಂಬಳಕ್ಕೆ ಚಾಲನೆ ನೀಡಲಿದ್ದಾರೆ.
ಪದ್ಮವಿಭೂಷಣ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ ಹಾಗೂ ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ಈ ಕ್ರೀಡಾಕೂಟ ನಡೆಯಲಿದೆ. ಈ ಬಾರಿ 150ಕ್ಕೂ ಹೆಚ್ಚು ಜೋಡಿ ಕೋಣಗಳು ಭಾಗವಹಿಸುವ ನಿರೀಕ್ಷೆಯಿದ್ದು, ಕರಾವಳಿಯ ವೀರ ಕ್ರೀಡೆಯ ಜಿದ್ದಾಜಿದ್ದಿನ ಪೈಪೋಟಿ ನಡೆಯಲಿದೆ.

ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸಭಾಪತಿ ಯು.ಟಿ. ಖಾದರ್, ಸಚಿವರಾದ ಸತೀಶ್ ಜಾರಕಿಹೊಳಿ, ದಿನೇಶ್ ಗುಂಡೂರಾವ್ ಮತ್ತು ಸಂಸದ ಬ್ರಿಜೇಶ್ ಚೌಟ ಪಾಲ್ಗೊಳ್ಳಲಿದ್ದಾರೆ.ಉದ್ಯಮ ಮತ್ತು ಕಂಬಳ ಕ್ಷೇತ್ರದಲ್ಲಿ ಸಾಧನೆ ಮಾಡಿದ ಎನ್.ಕೆ. ಆನಂದ್, ಸದಾಶಿವ ಸಾಮಾಗಿ ಮತ್ತು ಸುರೇಶ್ ಕೃಷ್ಣಯ್ಯ ಆಚಾರ್ಯ ಅವರಿಗೆ ಗೌರವ ಸಮರ್ಪಣೆ ಮಾಡಲಾಗುವುದು. ಕಬಡ್ಡಿ ಆಟಗಾರ ಅಧೀಶ್ ಶೆಟ್ಟಿ ಅವರನ್ನು ಅಭಿನಂದಿಸಲಾಗುವುದು.
ಇದನ್ನೂ ಓದಿ: ಬದಿಯಡ್ಕ: ನಿಯಂತ್ರಣ ತಪ್ಪಿ 12 ಅಡಿ ಆಳದ ಹೊಂಡಕ್ಕೆ ಬಿದ್ದ ಓಮ್ನಿ ವ್ಯಾನ್! ಚಾಲಕ ಸತ್ಯನಾರಾಯಣ ಭಟ್ ಅಪಾಯದಿಂದ ಪಾರು
ಸ್ಯಾಂಡಲ್‌ವುಡ್ ನಟರಾದ ವಶಿಷ್ಠ ಸಿಂಹ, ಅರವಿಂದ ಬೋಳಾರ್, ಸ್ವರಾಜ್ ಶೆಟ್ಟಿ ಸೇರಿದಂತೆ ಹಲವು ಕಲಾವಿದರು ಕಂಬಳಕ್ಕೆ ವಿಶೇಷ ಆಕರ್ಷಣೆ ನೀಡಲಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

