Breaking News

ಗೋದಾನ್‌ ಸಿನಿಮಾಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ ಉತ್ತರಾಖಂಡ ಸಿಎಂ

Uttarakhand CM Pushkar Singh Dhami announces tax exemption for Godaan movie

ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಕೃಷಿ ಸಂಪ್ರದಾಯ, ಗ್ರಾಮೀಣ ಜೀವನ ಮತ್ತು ದನಗಳ ಪ್ರಾಮುಖ್ಯತೆಯನ್ನು ಆಧರಿಸಿದ ಗೋದಾನ್ ಚಿತ್ರಕ್ಕೆ ರಾಜ್ಯದಲ್ಲಿ ತೆರಿಗೆಯಿಂದ ವಿನಾಯಿತಿ ನೀಡುವುದಾಗಿ ಘೋಷಿಸಿದ್ದಾರೆ.

ಮನೋಜ್ ಜೋಶಿ, ಉಪಾಸನಾ ಸಿಂಗ್, ರಾಜೇಶ್ ಜೈಸ್ ಹಾಗೂ ಸಾಹಿಲ್ ಆನಂದ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವನ್ನು ವಿವೇಕ್ ಕುಮಾರ್ ಚೌಧರಿ ಮತ್ತು ಅಮೀತ್ ಪ್ರಜಾಪತಿ ನಿರ್ದೇಶಿಸಿದ್ದಾರೆ. ಗೋದಾನ್ ಚಿತ್ರ ಫೆಬ್ರವರಿ 6 ರಂದು ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.

Advertisement

ಈ ಕುರಿತು ಮಾತನಾಡಿದ ಮುಖ್ಯಮಂತ್ರಿ ಧಾಮಿ, ಗೋವು ಕೇವಲ ಧರ್ಮ ಅಥವಾ ನಂಬಿಕೆಯ ವಿಷಯವಲ್ಲ, ಅದು ಭಾರತೀಯ ಸಂಸ್ಕೃತಿ, ಸಮಾಜ ಹಾಗೂ ಗ್ರಾಮೀಣ ಆರ್ಥಿಕತೆಯ ಅವಿಭಾಜ್ಯ ಅಂಗವಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ರಕ್ಕಸಪುರದೋಳ್ ಪ್ರೀಮಿಯರ್ ಶೋಗೆ ಜನರ ಮೆಚ್ಚುಗೆ

ಗೋದಾನ್‌ನಂತಹ ಚಲನಚಿತ್ರಗಳು ಸಮಾಜದಲ್ಲಿ ಸಕಾರಾತ್ಮಕ ಚಿಂತನೆ ಮತ್ತು ಸಂವೇದನೆಯನ್ನು ಬೆಳೆಸುತ್ತವೆ. ಇಂತಹ ಅರ್ಥಪೂರ್ಣ ಹಾಗೂ ಮೌಲ್ಯಾಧಾರಿತ ಚಿತ್ರಗಳನ್ನು ಸರ್ಕಾರ ಪ್ರೋತ್ಸಾಹಿಸಬೇಕು ಎಂಬುದೇ ತಮ್ಮ ಉದ್ದೇಶ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.

ಈ ನಿರ್ಧಾರದಿಂದ ಚಿತ್ರೋದ್ಯಮಕ್ಕೆ ಉತ್ತೇಜನ ದೊರೆಯುವುದರ ಜೊತೆಗೆ, ಗ್ರಾಮೀಣ ಸಂಸ್ಕೃತಿ ಮತ್ತು ಕೃಷಿ ಪರಂಪರೆಯ ಮಹತ್ವವನ್ನು ಜನರಿಗೆ ತಲುಪಿಸುವಲ್ಲಿ ಸಹಕಾರಿಯಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು