IPL: ವೈಭವ್ ಸೂರ್ಯವಂಶಿ ಸಿಡಿಲಾಟ; ಎಸ್‌ಆರ್‌ಎಚ್ ಮಣಿಸಿದ ರಾಜಸ್ಥಾನ ರಾಯಲ್ಸ್

ಪಿಸಿಎ ನ್ಯೂ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಕ್ವಾಲಿಫೈಯರ್-1 ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರಾಜಸ್ಥಾನ ರಾಯಲ್ಸ್ ಭರ್ಜರಿ ಗೆಲುವು ಸಾಧಿಸಿತು. ಈ ಜಯದೊಂದಿಗೆ ರಾಜಸ್ಥಾನ ತಂಡವು ಕ್ವಾಲಿಫೈಯರ್-2ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋತಿರುವ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್, ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 243 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ತಂಡದ ಪರ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಕೇವಲ 15 ವರ್ಷದ ವೈಭವ್ ಸೂರ್ಯವಂಶಿ, 29 ಎಸೆತಗಳಲ್ಲಿ 5 ಬೌಂಡರಿ ಹಾಗೂ 12 ಸಿಕ್ಸರ್‌ಗಳ ನೆರವಿನಿಂದ 97 ರನ್‌ಗಳ ಅಬ್ಬರದ ಇನ್ನಿಂಗ್ಸ್ ಆಡಿದರು.

ಧ್ರುವ್ ಜುರೆಲ್ 50 ರನ್ ಗಳಿಸಿ ಉತ್ತಮ ಬೆಂಬಲ ನೀಡಿದರೆ, ಯಶಸ್ವಿ ಜೈಸ್ವಾಲ್ 29, ರಿಯಾನ್ ಪರಾಗ್ 26, ಡೊನೋವನ್ ಫೆರೇರಾ 12 (ರನ್ ಔಟ್), ದಸುನ್ ಶನಕ 5, ರವೀಂದ್ರ ಜಡೇಜಾ 12 (ಅಜೇಯ), ಜೋಫ್ರಾ ಆರ್ಚರ್ 4, ನಾಂದ್ರೆ ಬರ್ಗರ್ 1 (ರನ್ ಔಟ್) ಹಾಗೂ ಸುಶಾಂತ್ ಮಿಶ್ರಾ 1 (ಅಜೇಯ) ರನ್ ಗಳಿಸಿದರು.

ಇದನ್ನೂ ಓದಿ:  IPL: ರಜತ್ ಪಟಿದಾರ್ ಸ್ಫೋಟಕ ಆಟ: ಗುಜರಾತ್ ಮಣಿಸಿ ಫೈನಲ್ ಪ್ರವೇಶಿಸಿದ ಆರ್‌ಸಿಬಿ

ಹೈದರಾಬಾದ್ ಪರ ಪ್ರಫುಲ್ ಹಿಂಗೆ 3 ವಿಕೆಟ್ ಪಡೆದರೆ, ನಿತೀಶ್ ಕುಮಾರ್ ರೆಡ್ಡಿ, ಈಶಾನ್ ಮಲಿಂಗ ಹಾಗೂ ಶಿವಾಂಗ್ ಕುಮಾರ್ ತಲಾ 1 ವಿಕೆಟ್ ಕಬಳಿಸಿದರು.

244 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಸನ್‌ರೈಸರ್ಸ್ ಹೈದರಾಬಾದ್, 19.2 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 196 ರನ್‌ಗಳಿಗೆ ಆಲೌಟ್ ಆಯಿತು.

ತಂಡದ ಪರ ಇಶಾನ್ ಕಿಶನ್ 33, ನಿತೀಶ್ ಕುಮಾರ್ ರೆಡ್ಡಿ 38, ಸಲೀಲ್ ಅರೋರಾ 35 ಹಾಗೂ ಶಿವಾಂಗ್ ಕುಮಾರ್ 27 ರನ್ ಗಳಿಸಿ ಹೋರಾಟ ನಡೆಸಿದರು. ಟ್ರಾವಿಸ್ ಹೆಡ್ 17, ಹೆನ್ರಿಕ್ ಕ್ಲಾಸೆನ್ 18, ಸ್ಮರಣ್ ರವಿಚಂದ್ರನ್ 1, ಪ್ಯಾಟ್ ಕಮಿನ್ಸ್ 1, ಈಶಾನ್ ಮಲಿಂಗ 5 ಹಾಗೂ ಸಕೀಬ್ ಹುಸೇನ್ 5 (ಅಜೇಯ) ರನ್ ಗಳಿಸಿದರು. ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಶೂನ್ಯಕ್ಕೆ ಔಟಾದರು.

ರಾಜಸ್ಥಾನ ಪರ ಜೋಫ್ರಾ ಆರ್ಚರ್ 3 ವಿಕೆಟ್ ಪಡೆದು ಮಿಂಚಿದರೆ, ನಾಂದ್ರೆ ಬರ್ಗರ್, ಸುಶಾಂತ್ ಮಿಶ್ರಾ ಹಾಗೂ ರವೀಂದ್ರ ಜಡೇಜಾ ತಲಾ 2 ವಿಕೆಟ್ ಕಬಳಿಸಿದರು. ಯಶ್ ಪುಂಜಾ 1 ವಿಕೆಟ್ ಪಡೆದರು.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *