Breaking News

ಕಂ ಗೆಟ್‌ ಮಿ: ಟ್ರಂಪ್‌ಗೆ ಸವಾಲು ಹಾಕಿದ್ದೇ ವೆನೆಜುವೆಲಾದ ಅಧ್ಯಕ್ಷರಿಗೆ ಮುಳುವಾಯ್ತ?

Venezuelan President Nicolas Maduro challenges Trump before arrest

ಕೈಗೆ ಕೋಲು ಕೊಟ್ಟು ಹೊಡಿಸಿಕೊಳ್ಳುವುದು ಅಂದರೆ ಇದುವೆನಾ? “ಮಿರಾಫ್ಲೋರ್ಸ್‌ಗೆ ಬಂದು ನನ್ನನ್ನು ಕರೆದುಕೊಂಡು ಹೋಗಿ, ಬನ್ನಿ, ಕಾಯುತ್ತಿದ್ದೇನೆ” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ವೆನೆಜುವೆಲಾದ ಅಧ್ಯಕ್ಷ ನಿಕೋಲಸ್‌ ಮಡುರೊ ಅವರು ಇತ್ತೀಚೆಗೆ ಬಹಿರಂಗವಾಗಿ ಸವಾಲು ಹಾಕಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಟ್ರಂಪ್, ಸವಾಲು ಸ್ವೀಕರಿಸಿದಂತೆ ಕಾಣುತ್ತದೆ. ಹೀಗಾಗಿ ಶನಿವಾರ ಏರ್‌ಸ್ಟ್ರೈಕ್‌ ನಡೆಸಿ ಬೆಡ್‌ರೂಮ್‌ಗೆ ನುಗ್ಗಿ ನಿಕೋಲಸ್‌ ಮಡುರೊ ಅವರನ್ನು ಬಂಧಿಸಿ ನ್ಯೂಯಾರ್ಕ್‌ಗೆ ಕರೆದೊಯ್ದಿದ್ದಾರೆ. ಇದೀಗ ಮಡುರೊ ಸವಾಲು ಹಾಕಿದ್ದ ವಿಡಿಯೋವನ್ನು ಮುಂದಿಟ್ಟುಕೊಂಡು ಶ್ವೇತಭವನ ಅಪಹಾಸ್ಯ ಮಾಡಿದೆ.

ಆಗಸ್ಟ್‌ ತಿಂಗಳಲ್ಲಿ ನಿಕೋಲಸ್‌ ಮಡುರೊ, “ನನ್ನನ್ನು ಕರೆದುಕೊಂಡು ಹೋಗಿ. ನಾನು ಅವನಿಗಾಗಿ ಮಿರಾಫ್ಲೋರ್ಸ್‌ನಲ್ಲಿ (ಅಧ್ಯಕ್ಷರ ಅರಮನೆ) ಕಾಯುತ್ತೇನೆ. ತಡ ಮಾಡಬೇಡ, ಹೇಡಿ” ಎಂದು ಉದ್ರಿಕ್ತ ಭಾಷಣ ಮಾಡಿದ್ದರು. ಆದರೆ, ಇದನ್ನು ಬಹಳ ಗಂಭೀರವಾಗಿ ಪರಿಗಣಿಸಿದ ಟ್ರಂಪ್‌ ಸವಾಲನ್ನು ಸ್ವೀಕರಿಸಿ ಮಡುರೊ ಬಂಧಿಸಲು ವಾಯು ಸೇನೆಗೆ ಸೂಚಿಸಿದಂತೆ ಕಾಣುತ್ತಿದೆ. ಜ.3 ರಂದು ರಾತ್ರಿ ಅಮೆರಿಕ ವಾಯು ಸೇನೆ ವೆನೆಜುವೆಲಾದ ಮೇಲೆ ಏರ್‌ಸ್ಟ್ರೈಕ್‌ ನಡೆಸಿದೆ. ಅಷ್ಟಕ್ಕೂ ಸುಮ್ಮನಾಗ ಸೇನೆ, ಮಡುರೊ ಅವರ ಮಿರಾಫ್ಲೋರ್ಸ್‌ಗೆ ಪ್ರವೇಶಿಸಿ ಬೆಡ್‌ರೂಮ್‌ ಒಳಗೆ ನುಗ್ಗಿ  ಮಡುರೊ ಮತ್ತು ಅವರ ಪತ್ನಿಯನ್ನು ಬಂಧಿಸಿ ನ್ಯೂಯಾರ್ಕ್‌ಗೆ ಕರೆದೊಯ್ದಿದ್ದಾರೆ. ಅಪರೇಷನ್‌ ಅ‌ಬ್ಸೊಲ್ಯೂಟ್‌ ರೆಸೊಲ್ವ್ ಅಡಿ ಈ ಕಾರ್ಯಾಚರಣೆ ನಡೆಸಲಾಗಿದೆ.

Advertisement

ಮಾಧ್ಯಮ ವರದಿಗಳ ಪ್ರಕಾರ, ಆಗಸ್ಟ್‌ನಿಂದ ಅಮೆರಿಕದ ಗುಪ್ತಚರ ಏಜೆಂಟ್‌ಗಳು ಮಡುರೊ ಅವರ ಪ್ರತಿಯೊಂದು ಚಲನವಲನಗಳನ್ನು ರಹಸ್ಯವಾಗಿ ಗಮನಿಸುತ್ತಿದ್ದರು. “ಅವರು ಎಲ್ಲಿ ವಾಸಿಸುತ್ತಿದ್ದರು, ಎಲ್ಲಿ ಪ್ರಯಾಣಿಸುತ್ತಾರೆ, ಏನು ತಿಂದರು, ಏನು ಧರಿಸಿದ್ದರು, ಅವರ ಸಾಕುಪ್ರಾಣಿಗಳು ಯಾವುವು” ಎಂದೆಲ್ಲಾ ಮಾಹಿತಿಗಳನ್ನು ಕಲೆ ಹಾಕಲಾಗಿತ್ತು ಎಂದು ಜಂಟಿ ಮುಖ್ಯಸ್ಥರ ಅಧ್ಯಕ್ಷ ಜನರಲ್ ಡಾನ್ ಕೇನ್ ಹೇಳಿದ್ದಾರೆ.

ಇದನ್ನೂ ಓದಿ: ಬೆಡ್‌ರೂಂಗೆ ನುಗ್ಗಿ ವೆನೆಜುವೆಲಾ ಅಧ್ಯಕ್ಷರನ್ನು ಬಂಧಿಸಿದ ಅಮೆರಿಕ ಸೇನೆ

ತಿಂಗಳುಗಳ ನಿಖರವಾದ ಯೋಜನೆ ಮತ್ತು ಪೂರ್ವಾಭ್ಯಾಸಗಳ ನಂತರ ಈ ಕಾರ್ಯಾಚರಣೆ ಮಾಡಲಾಯಿತು. ಅಮೆರಿಕದ ಪಡೆಗಳು ಮಡುರೊ ತಂಗಿದ್ದ ಮನೆಯಂತೆಯೇ ಪ್ರತಿಕೃತಿ ಮನೆಯನ್ನು ನಿರ್ಮಿಸಲಾಗಿತ್ತು. ಕಾರ್ಯಾಚರಣೆಯನ್ನು ನೇರ ಪ್ರಸಾರದಲ್ಲಿ ವೀಕ್ಷಿಸಿದ್ದಾಗಿ ಟ್ರಂಪ್‌ ಹೇಳಿದ್ದಾರೆ.

ಈ ನಡುವೆ ಶ್ವೇತಭವನ 61 ಸೆಕುಂಡುಗಳ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಇದರಲ್ಲಿ ವೆನೆಜುವೆಲಾ ದಾಳಿಗಳ ಕುರಿತು ಟ್ರಂಪ್ ನಡೆಸಿದ ಪತ್ರಿಕಾಗೋಷ್ಠಿಯ ದೃಶ್ಯಗಳೂ ಇದ್ದವು. ವಿಡಿಯೋದಲ್ಲಿ ಮಡುರೊ ಅಮೆರಿಕವನ್ನು ಹೀಯಾಳಿಸುತ್ತಿರುವ ದೃಶ್ಯ ಮತ್ತು ವೆನೆಜುವೆಲಾದ ನಾಯಕ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಸೆರೆಹಿಡಿಯಲು ನಡೆದ ದಾಳಿಯ ದೃಶ್ಯಾವಳಿಗಳನ್ನು ತೋರಿಸುವ ಮೂಲಕ ಅಪಹಾಸ್ಯ ಮಾಡಿದೆ.

ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು