ಚೆನ್ನೈ: ಕಾಲಿವುಡ್ನ ಮಾದರಿ ದಂಪತಿ ಎಂದೇ ಹೆಸರುವಾಸಿಯಾಗಿದ್ದ ವಿಜಯ್ ಮತ್ತು ಸಂಗೀತಾ ಅವರ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಕಳೆದ ಕೆಲವು ಪ್ರಮುಖ ಕಾರ್ಯಕ್ರಮಗಳಲ್ಲಿ ಸಂಗೀತಾ ಅವರು ಕಾಣಿಸಿಕೊಳ್ಳದಿರುವುದು ಈ ವದಂತಿಗೆ ಪುಷ್ಟಿ ನೀಡಿದೆ. ವಿಜಯ್ ಅವರ ಸಿನಿಮಾಗಳ ಆಡಿಯೋ ಲಾಂಚ್ ಮತ್ತು ಅವರ ಹೊಸ ರಾಜಕೀಯ ಪಕ್ಷ ‘ತಮಿಳಗ ವೆಟ್ರಿ ಕಳಗಂ’ (TVK) ಕಾರ್ಯಕ್ರಮಗಳಲ್ಲಿ ಸಂಗೀತಾ ಎಲ್ಲಿಯೂ ಕಾಣಿಸಿಕೊಂಡಿಲ್ಲ.
ಇತ್ತೀಚೆಗೆ ವಿಜಯ್ ಅವರ ವಿಕಿಪೀಡಿಯಾ ಪುಟದಲ್ಲಿ ‘ವೈವಾಹಿಕ ಸ್ಥಿತಿ’ ಬದಲಾಗಿರುವುದು ಅಭಿಮಾನಿಗಳ ಕಣ್ಣಿಗೆ ಬಿದ್ದಿದೆ.ಸಂಗೀತಾ ಅವರು ತಮ್ಮ ಮಕ್ಕಳೊಂದಿಗೆ ಲಂಡನ್ನಲ್ಲಿ ನೆಲೆಸಿದ್ದಾರೆ ಎನ್ನಲಾಗುತ್ತಿದ್ದು, ವಿಜಯ್ ಭಾರತದಲ್ಲಿ ಒಬ್ಬರೇ ಇರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಇದನ್ನೂ ಓದಿ: ಬಿರಿಯಾನಿ ಅಂಗಡಿಯ ಫ್ರೀಝರ್ನಲ್ಲಿ ಯುವಕನ ಶವ ಪತ್ತೆ!
ವರದಿಗಳ ಪ್ರಕಾರ ದಳಪತಿ ವಿಜಯ್ ಅವರ ಒಟ್ಟು ಆಸ್ತಿ ಸರಿಸುಮಾರು 600 ರಿಂದ 700 ಕೋಟಿ ರೂಪಾಯಿಗಳು. ಒಂದು ವೇಳೆ ಕಾನೂನಾತ್ಮಕವಾಗಿ ವಿಚ್ಛೇದನ ಸಂಭವಿಸಿದರೆ,ಭಾರತೀಯ ಕಾನೂನಿನ ಪ್ರಕಾರ, ಪತ್ನಿಯ ಜೀವನಶೈಲಿ ಮತ್ತು ಪತಿಯ ಆದಾಯವನ್ನು ಆಧರಿಸಿ ಜೀವನಾಂಶ ನಿರ್ಧರಿಸಲಾಗುತ್ತದೆ. ವಿಜಯ್ ಅವರ ಆಸ್ತಿಯಲ್ಲಿ ಸಂಗೀತಾ ಅವರಿಗೆ ದೊಡ್ಡ ಮೊತ್ತದ ಹಣ ಅಥವಾ ಆಸ್ತಿಯ ಪಾಲು ಸಿಗುವ ಸಾಧ್ಯತೆಯಿದೆ. ಇಬ್ಬರು ಮಕ್ಕಳ ಭವಿಷ್ಯಕ್ಕಾಗಿ ಆಸ್ತಿಯಲ್ಲಿ ಪ್ರತ್ಯೇಕ ಪಾಲು ಮೀಸಲಿಡಬೇಕಾಗುತ್ತದೆ.ಸೆಲೆಬ್ರಿಟಿಗಳ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಕೋರ್ಟ್ ಹೊರಗೆ (Out of Court Settlement) ನೂರಾರು ಕೋಟಿಗಳ ಒಪ್ಪಂದ ನಡೆಯುವ ಸಾಧ್ಯತೆ ಹೆಚ್ಚಿರುತ್ತದೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

