Viral Video: ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪ್ರತಿದಿನ ಸಾವಿರಾರು ಟ್ರೆಂಡಿಂಗ್ ವೀಡಿಯೊಗಳನ್ನು ಹಂಚಿಕೊಳ್ಳಲಾಗುತ್ತದೆ. ಕೆಲವು ವೀಡಿಯೊಗಳು ತಕ್ಷಣವೇ ವೈರಲ್ ಆಗುತ್ತವೆ. ಇಂತಹ ವೈರಲ್ ವಿಡಿಯೋಗಳಲ್ಲಿ ಕೆಲವು ತಮಾಷೆಯಾದ್ದಾಗಿದ್ದರೆ ಇನ್ನು ಕೆಲವು ಆಘಾತಕಾರಿ. ನಂಬಲು ಕಷ್ಟಕರವಾದ ವೀಡಿಯೊಗಳಾಗಿವೆ.
ಇದೀಗ, ನಿಮ್ಮನ್ನು ದುಃಖಿಸುವ ವೀಡಿಯೊವೊಂದು ಕಾಣಿಸಿಕೊಂಡಿದೆ. ಈ ವೀಡಿಯೋವು ಎಲ್ಲರನ್ನು ಬೆಚ್ಚಿಬೀಳಿಸುವ ಸ್ಥಿತಿಯಲ್ಲಿ ವಯಸ್ಸಾದ ಮಹಿಳೆಯನ್ನು ತೋರಿಸುತ್ತದೆ. ಇದಲ್ಲದೆ, ಅನೇಕ ಜನರು ಅವಳಿಗೆ ಸಹಾಯ ಮಾಡಲು ಸಹ ಸಿದ್ಧರಾಗಿದ್ದಾರೆ.

ಪಶ್ಚಿಮ ಬಂಗಾಳದ ಈ 70 ವರ್ಷದ ಮಹಿಳೆಯ ಹೆಸರು ದೀಪಾಲಿ ಘೋಷ್. 30 ವರ್ಷಗಳ ಹಿಂದೆ ಅವರು ತನ್ನ ಪತಿಯನ್ನು ಕಳೆದುಕೊಂಡಿದ್ದಾರೆ. ಒಬ್ಬಂಟಿಯಾಗಿರುವ ಅವರು ಹೊಟ್ಟೆಪಾಡಿಗಾಗಿ ಸಣ್ಣ ಕ್ಯಾಂಟೀನ್ ಇಟ್ಟುಕೊಂಡಟು ದಾಲ್-ರೈಸ್ ಮಾರಾಟ ಮಾಡುತ್ತಿದ್ದಾರೆ. ಸಣ್ಣನಿಲ್ಲಿಗೆ ದಿನಕ್ಕೆ ಕೇವಲ ಐದು ಗ್ರಾಹಕರು ಮಾತ್ರ ಬರುತ್ತಾರೆ. ಈ ಗ್ರಾಹಕರಿಗೆ ಅವರು ದಾಲ್-ರೈಸ್ ಮತ್ತು ತರಕಾರಿಗಳಂತಹ ಸರಳ ಊಟವನ್ನು ತಯಾರಿಸಿ ಬಡಿಸುತ್ತಾರೆ.
ಇದನ್ನೂ ಓದಿ: ಅಂಗಡಿಗೆ ನುಗ್ಗಿ ಚಿನ್ನ ಕದ್ದು ಹಾರಿಹೋದ ಕಾಗೆ! ಮುಂದೆನಾಯ್ತು?
ಸದ್ಯ ವೃದ್ಧೆ ತೀವ್ರ ಸಂಕಷ್ಟದಲ್ಲಿರುವುದರಿಂದ ಪರಿಸ್ಥಿತಿ ಭೀಕರವಾಗಿದೆ. ಕ್ಯಾಂಟಿನೇ ವೃದ್ಧೆಯ ಮನೆಯಾಗಿದ್ದು, ಅದರಲ್ಲೇ ನೆಲೆಸುತ್ತಾರೆ. ಇತ್ತೀಚೆಗೆ ಈ ಹೊಟೇಲ್ ಪ್ರಭಾವಿ ವ್ಯಕ್ತಿಯೊಬ್ಬರ ಕಣ್ಣಿಗೆ ಬಿದ್ದಿದ್ದು, ಸಹಾಯಕ್ಕಾಗಿ ಮುಂದೆ ಬಂದಿದ್ದಾರೆ. ಆದರೆ, ವೃದ್ಧಾಶ್ರಮಕ್ಕೆ ಹೋಗಲು ಒಲ್ಲೆ ಎನ್ನುತ್ತಿದ್ದಾರೆ.
View this post on Instagram
ಈ ವಿಡಿಯೋ ನೋಡಿದ ನಂತರ ನೀವು ನಿಜಕ್ಕೂ ಭಾವುಕರಾಗಿರಬೇಕು. ಈ ವಿಡಿಯೋವನ್ನು ‘Storiesbyaradhana’ ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಭಾವನಾತ್ಮಕ ವಿಡಿಯೋವನ್ನು ಇಲ್ಲಿಯವರೆಗೆ ೮ ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ ಮತ್ತು ಲಕ್ಷಾಂತರ ಜನರು ಲೈಕ್ ಮಾಡಿದ್ದಾರೆ.
ಬಳಕೆದಾರರೊಬ್ಬರು ಪ್ರತಿಕ್ರಿಯಿಸಿ, “ನಾವು ಈ ಸಣ್ಣ ಅಂಗಡಿಗೆ ಒಂದು ಹೊಸ ರೂಪ ನೀಡುತ್ತೇವೆ. ತಮ್ಮ ಅಂಗಡಿಯನ್ನು ಉಳಿಸಿಕೊಳ್ಳಲು ಕನಿಷ್ಠ ಸಂಖ್ಯೆಯ ಗ್ರಾಹಕರನ್ನು ಹೊಂದುವಂತೆ ಅದನ್ನು ಯಶಸ್ವಿಗೊಳಿಸಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ” ಎಂದಿದ್ದಾರೆ. ೭೦ನೇ ವಯಸ್ಸಿನಲ್ಲಿ ದುಡಿದು ಜೀವನ ಸಾಗಿಸುತ್ತಿರುವ ಈ ವೃದ್ಧೆಯ ಜೀವನ ಸ್ಪೂರ್ತಿದಾಯಕ ಎಂದು ಮತ್ತೊಬ್ಬರು ಹೇಳಿದ್ದಾರೆ. ಇನ್ನೂ ಕೆಲವರು ಧನ ಸಹಾಯ ನೀಡಲು ಮುಂದಾಗಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

