Breaking News

Viral Video: ದೈನಂದಿನ ಜೀವನದಲ್ಲಿ ಹಸುವಿನ ಮೂತ್ರ ಬಳಕೆ! ಇದು ಭಾರತದಲ್ಲಿ ಅಲ್ಲ

Viral Video Tourist woman washes face with cow urine in South Sudan

ಭಾರತದಲ್ಲಿ ಹಸುವಿನ ಸಗಣಿ, ಮೂತ್ರದ ವಿಚಾರದಲ್ಲಿ ಚರ್ಚೆಗಳು ನಡೆಯುತ್ತಲೇ ಇರುತ್ತದೆ. ಹಸುವಿನ ಮೂತ್ರದ ಉಪಯೋಗದ ವಿಚಾರ ಬಂದಾಗ ಟೀಕೆ ಮಾಡುವವರ ಸಂಖ್ಯೆ ಹೆಚ್ಚೇ ಇದೆ. ಆದರೆ, ವಿದೇಶದಲ್ಲೂ ಹಸುವಿನ ಮೂತ್ರವನ್ನು ದೈನಂದಿನ ಜೀವನದಲ್ಲಿ ಬಳಕೆ ಮಾಡುತ್ತಾರೆ ಎಂಬ ವಿಚಾರ ನಿಮಗೆ ತಿಳಿದಿದೆಯೇ?

ತನ್ನ ವಿಶಿಷ್ಟ ಮತ್ತು ಪ್ರಾಚೀನ ಸಂಪ್ರದಾಯಗಳಿಗೆ ಹೆಸರುವಾಸಿಯಾಗಿರುವ ದಕ್ಷಿಣ ಸುಡಾನ್‌ ದೇಶವು ವಿಶ್ವದ ಅತಿ ಕಡಿಮೆ ಭೇಟಿ ನೀಡುವ ದೇಶಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಮುಂಡಾರಿ ಬುಡಕಟ್ಟು ಜನಾಂಗದವರು ವಾಸಿಸುವ ಈ ಪ್ರದೇಶದ ಪದ್ಧತಿಗಳು ಬಹಳ ವಿಚಿತ್ರವಾಗಿದ್ದು, ದೈನಂದಿನ ಜೀವನದಲ್ಲಿ ಹಸುವಿನ ಮೂತ್ರವನ್ನು ಬಳಸುತ್ತಾರೆ. ನೈಸರ್ಗಿಕ ನಂಜುನಿರೋಧಕ, ಕೀಟ ನಿವಾರಕವಾಗಿ ಹಸುವಿನ ಮೂತ್ರವನ್ನು ಬಳಕೆ ಮಾಡುತ್ತಾರೆ. ಅಲ್ಲದೆ, ಚರ್ಮದ ಆರೋಗ್ಯಕ್ಕೂ ಉತ್ತಮ ಎನ್ನಲಾಗುತ್ತಿದೆ.

Advertisement

ಇತ್ತೀಚೆಗೆ, ಒಬ್ಬ ಪ್ರವಾಸಿ ಮಹಿಳೆಯೊಬ್ಬರು ಈ ಬುಡಕಟ್ಟು ಜನರು ವಾಸಿಸುವ ಪ್ರದೇಶಕ್ಕೆ ಭೇಟಿ ನೀಡಿದಾಗ ಅವರು ಅಲ್ಲಿನ ಪದ್ಧತಿಗಳನ್ನು ನೋಡಿ ಅಚ್ಚರಿಗೊಂಡರು. ಅಲ್ಲದೆ, ಸ್ವತಃ ಅವರು ಹಸುವಿನ ಮೂತ್ರದಿಂದ ಕೈ ಮತ್ತು ಮುಖ ತೊಳೆಯುತ್ತಿರುವ ವಿಡಿಯೋ ವೈರಲ್‌ ಆಗಿದೆ.

ಈ ವಿಡಿಯೋವನ್ನು gizastruthtravel ಎಂಬ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ, ಗೋಮೂತ್ರವು ಸೊಳ್ಳೆಗಳಿಂದ ಹರಡುವ ರೋಗಗಳಿಂದ ರಕ್ಷಿಸುತ್ತದೆ ಎಂದು ವಿವರಿಸಲಾಗಿದೆ. ಸ್ಥಳೀಯ ಬುಡಕಟ್ಟು ಜನಾಂಗದವರಿಗೆ, ಗೋಮೂತ್ರದಲ್ಲಿ ಸ್ನಾನ ಮಾಡುವುದು ಕೇವಲ ಒಂದು ಆಚರಣೆಯಲ್ಲ, ಆದರೆ ಬಿಸಿ ಮತ್ತು ಕೀಟಗಳಿಂದ ತುಂಬಿರುವ ವಾತಾವರಣದಲ್ಲಿ ಸುರಕ್ಷಿತವಾಗಿ ಮತ್ತು ಆರಾಮದಾಯಕವಾಗಿರಲು ಒಂದು ಮಾರ್ಗವಾಗಿದೆ. ಹೊರಗಿನವರಿಗೆ ಇದು ವಿಚಿತ್ರವೆನಿಸಬಹುದು, ಆದರೆ ಈ ಅಭ್ಯಾಸವು ತಲೆಮಾರುಗಳಿಂದ ಅವರ ಸಂಸ್ಕೃತಿಯ ಭಾಗವಾಗಿದೆ ಎಂದು ಬರೆಯಲಾಗಿದೆ.

ದಕ್ಷಿಣ ಸುಡಾನ್‌ನಲ್ಲಿ ಸೂಯ ಮನುಷ್ಯರ ನೆತ್ತಿ ಸುಡುವಷ್ಟು ಪ್ರಕಾಶವಾಗಿರುತ್ತಾನೆ. ಇದರ ಜೊತೆಗೆ ಇಕ್ಕಿ ಕೀಟಗಳ ಕಾಟವೂ ಹೆಚ್ಚಿದೆ. ಇದರಿಂದ ರಕ್ಷಿಸಲು ಈ ಬುಡಕಟ್ಟು ಜನಾಂಗದವರು ಹಸುವಿನ ಮೂತ್ರವನ್ನು ರೋಗನಿರೋಧಕ, ಕೀಟನಾಶಕವಾಗಿ ಬಳಕೆ ಮಾಡುತ್ತಾರೆ.

ಈ ವಿಡಿಯೋ ವೈರಲ್‌ ಆಗಿದ್ದಲ್ಲದೆ, ಅನೇಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.  “ಅದು ಭಾರತದಾಗಿದ್ದರೆ, ನಮ್ಮಲ್ಲಿ ಹೆಚ್ಚಿನವರು ನಿರಂತರವಾಗಿ ಹಿಂದೂಗಳನ್ನು ಶಪಿಸುತ್ತಿದ್ದರು” ಎಂದು ಬಳಕೆದಾರರೊಬ್ಬರು ಕಾಮೆಂಟ್‌ ಮಾಡಿದ್ದಾರೆ. “ಓ ದೇವರೇ! ನಾನು ಚಿಕ್ಕವನಿದ್ದಾಗ, ನನ್ನ ಮೊರೊಕನ್ ಅಜ್ಜಿ ಇದನ್ನು ಚರ್ಮದ ದದ್ದುಗಳು, ಮೊಡವೆಗಳು ಮತ್ತು ಇತರ ಚರ್ಮದ ಸಮಸ್ಯೆಗಳಿಗೆ ಬಳಸಲಾಗುತ್ತಿತ್ತು ಎಂದು ಹೇಳಿದ್ದರು” ಎಂದು ಮತ್ತೊಬ್ಬರು ತಿಳಿಸಿದ್ದಾರೆ.

News Source : Social media

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು