ವೈರಸ್ : ಹವಾಯಿ ಆರೋಗ್ಯ ಇಲಾಖೆ (DOH) ಒಹು ದ್ವೀಪದಲ್ಲಿ ಜಿಕಾ ವೈರಸ್ ಸೋಂಕಿನ ಒಂದು ಪ್ರಕರಣ ಪತ್ತೆಯಾಗಿದೆ. ಇದು 2026ರಲ್ಲಿ ರಾಜ್ಯದಲ್ಲಿ ವರದಿಯಾದ ಮೊದಲ ಜಿಕಾ ಪ್ರಕರಣವಾಗಿದೆ. ಆರೋಗ್ಯ ಅಧಿಕಾರಿಗಳ ಪ್ರಕಾರ, ಸೋಂಕಿತ ವ್ಯಕ್ತಿಗೆ ಜಿಕಾ ವೈರಸ್ ಹರಡುವ ಪ್ರದೇಶಕ್ಕೆ ಪ್ರಯಾಣ ಮಾಡಿದ ಸಂದರ್ಭದಲ್ಲಿ ಸೋಂಕು ತಗುಲಿರುವ ಸಾಧ್ಯತೆ ಇದೆ. ಹವಾಯಿಯಲ್ಲಿ ಕೊನೆಯ ಪ್ರಯಾಣ ಸಂಬಂಧಿತ ಜಿಕಾ ಪ್ರಕರಣಗಳು 2015ರಿಂದ 2019ರ ಅವಧಿಯಲ್ಲಿ ಹೆಚ್ಚು ವರದಿಯಾಗಿದ್ದವು. ಜಾಗತಿಕವಾಗಿ ವೈರಸ್ ಹರಡಿದ್ದ 2017ರಲ್ಲಿ ಗರಿಷ್ಠವಾಗಿ 25 ಪ್ರಕರಣಗಳು ದಾಖಲಾಗಿದ್ದವು. ಇದುವರೆಗೆ ಹವಾಯಿಯಲ್ಲಿ ಸ್ಥಳೀಯವಾಗಿ ಹರಡಿದ ಜಿಕಾ ಪ್ರಕರಣಗಳು ವರದಿಯಾಗಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಸೊಳ್ಳೆ ಮೂಲಕ ಹರಡುವ ಸೋಂಕು ;
ಜಿಕಾ ವೈರಸ್ ಮುಖ್ಯವಾಗಿ ಸೋಂಕಿತ ಸೊಳ್ಳೆಯ ಕಡಿತದಿಂದ ಹರಡುತ್ತದೆ. ಡೆಂಗ್ಯೂ ವೈರಸ್‌ನಂತೆ, ಜಿಕಾ ಹರಡುವ ಸಾಮರ್ಥ್ಯವಿರುವ ಸೊಳ್ಳೆ ಜಾತಿಗಳು ಹವಾಯಿಯಲ್ಲಿ ಇದ್ದರೂ, ವೈರಸ್ ಸ್ವತಃ ಸ್ಥಳೀಯವಾಗಿ ಇನ್ನೂ ನೆಲೆಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರಗಳ ಪ್ರಕಾರ, ಜಿಕಾ ವೈರಸ್ ಲೈಂಗಿಕ ಸಂಪರ್ಕದ ಮೂಲಕವೂ ಹರಡಬಹುದು. ಗರ್ಭಿಣಿಯರಿಂದ ಗರ್ಭಸ್ಥ ಶಿಶುವಿಗೆ ಸೋಂಕು ಹರಿದರೆ, ಗರ್ಭಪಾತ, ಮರಣ ಜನನಅವಧಿಗೂ ಮುಂಚಿತ ಹೆರಿಗೆ ಸೇರಿದಂತೆ ಗಂಭೀರ ಜನ್ಮ ದೋಷಗಳು ಉಂಟಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಜಿಕಾ ವೈರಸ್‌ನ ಸಾಮಾನ್ಯ ಲಕ್ಷಣಗಳಲ್ಲಿ ಜ್ವರ, ಚರ್ಮದ ಮೇಲೆ ರಾಶ್, ತಲೆನೋವು, ಕಣ್ಣು ಕೆಂಪಾಗುವುದು, ಸಂಧಿ ಮತ್ತು ಸ್ನಾಯು ನೋವುಗಳು ಸೇರಿವೆ. ಆದರೆ ಅನೇಕ ಸೋಂಕಿತರಿಗೆ ಯಾವುದೇ ಲಕ್ಷಣಗಳು ಕಾಣಿಸದೇ ಅಥವಾ ಕೇವಲ ಸಣ್ಣ ಪ್ರಮಾಣದ ಅಸ್ವಸ್ಥತೆ ಮಾತ್ರ ಕಾಣಿಸಬಹುದು ಎಂದು ಹೇಳಲಾಗಿದೆ.
ಈ ವೈರಸ್ ಪೀಡಿತ ಪ್ರದೇಶಗಳಲ್ಲಿ ಜಾಗೃತಿ ಕಾರ್ಯಕ್ರಮಗಳು, ತಪಾಸಣೆ ಹಾಗೂ ಸೊಳ್ಳೆ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲು DOH ತಂಡಗಳನ್ನು ನಿಯೋಜಿಸಲಾಗಿದೆ. ಸೊಳ್ಳೆಗಳ ಸಂಖ್ಯೆಯನ್ನು ನಿಯಂತ್ರಿಸುವುದು ಈ ಎರಡೂ ರೋಗಗಳ ಹರಡುವಿಕೆಯನ್ನು ತಡೆಯಲು ಅತ್ಯಂತ ಮುಖ್ಯ, ಎಂದು ಆರೋಗ್ಯ ಇಲಾಖೆ ಹೇಳಿದೆ. ಆದರೆ ಒಹು ದ್ವೀಪದ ಯಾವ ಪ್ರದೇಶಗಳು ಪರಿಣಾಮಗೊಂಡಿವೆ ಎಂಬುದನ್ನು ಬಹಿರಂಗಪಡಿಸಿಲ್ಲ.
ಇದನ್ನೂ ಓದಿ : Bangalore : ಬೆಂಗಳೂರಿನಲ್ಲಿ ಕಾರು ಅಕ್ರಮ ಮಾರ್ಪಾಡು: ಕೇರಳದ ವಿದ್ಯಾರ್ಥಿಗೆ ರೂ.1.11 ಲಕ್ಷ ದಂಡ
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

