ವಾಯುದಾಳಿ: ಕೋಮಾಕ್ಕೆ ಜಾರಿದ ಇರಾನ್‌ ಸುಪ್ರೀಂ ಲೀಡರ್‌ ಮೋಜ್ತಾಬಾ ಖಮೇನಿ, ಎರಡೂ ಕಾಲುಗಳು ಕಟ್!

war mojtaba-khamenei-coma-airstrike-injured-iran-news

ತೇಹ್ರಾನ್: ಇರಾನ್‌ನ ಹೊಸ ಸುಪ್ರೀಂ ಲೀಡರ್ ಆಗಿ ನೇಮಕಗೊಂಡಿರುವ ಮೊಜ್ತಬಾ ಖಾಮೆನೇಯಿ ಅವರು ವಾಯು ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡು ಕೋಮಾಕ್ಕೆ ಜಾರಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಬ್ರಿಟಿಷ್ ಟ್ಯಾಬ್ಲಾಯ್ಡ್ ದಿ ಸನ್‌ ಪ್ರಕಟಿಸಿದ ವರದಿ ಪ್ರಕಾರ, 56 ವರ್ಷದ ಮೊಜ್ತಬಾ ಖಾಮೆನೇಯಿ ಅವರಿಗೆ ಭಾರೀ ಗಾಯಗಳಾಗಿದ್ದು, ಅವರ ಎರಡೂ ಕಾಲುಗಳನ್ನು ಕತ್ತರಿಸಲಾಗಿದೆ ಎಂಬ ಮಾಹಿತಿ ದೊರೆತಿದೆ. ಜೊತೆಗೆ ಅವರ ಹೊಟ್ಟೆ ಅಥವಾ ಯಕೃತ್ ಭಾಗಕ್ಕೂ ಗಂಭೀರ ಹಾನಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ತೇಹ್ರಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ

ಮೊಜ್ತಬಾ ಖಾಮೆನೇಯಿ ಅವರಿಗೆ ತೇಹ್ರಾನ್‌ನ ಸಿನಾ ಯುನಿವರ್ಸಿಟಿ ಆಸ್ಪತ್ರೆಯಲ್ಲಿ ಕಟ್ಟುನಿಟ್ಟಿನ ಭದ್ರತೆಯ ನಡುವೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ. ಆಸ್ಪತ್ರೆಯ ಒಂದು ವಿಶೇಷ ಘಟಕವನ್ನು ಸಂಪೂರ್ಣವಾಗಿ ಮುಚ್ಚಿ ಭದ್ರತಾ ಕೈಗೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.

Advertisement

ಹಿರಿಯ ಶಸ್ತ್ರಚಿಕಿತ್ಸಕರಿಂದ ಚಿಕಿತ್ಸೆ

ಇರಾನ್ ಆರೋಗ್ಯ ಸಚಿವ ಹಾಗೂ ಅನುಭವಿ ಟ್ರಾಮಾ ಸರ್ಜನ್ ಮೊಹಮ್ಮದ್ ರೇಜಾ ಜಫರ್‌ಘಂಡಿ ಅವರ ನೇತೃತ್ವದಲ್ಲಿ ವೈದ್ಯಕೀಯ ತಂಡ ಚಿಕಿತ್ಸೆ ನೀಡುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ಹೋರ್ಮುಜ್ ಜಲಸಂಧಿಯಲ್ಲಿ ಭಾರತೀಯ ಟ್ಯಾಂಕರ್‌ಗಳಿಗೆ ಸುರಕ್ಷಿತ ಸಾಗಾಟಕ್ಕೆ ಇರಾನ್ ಒಪ್ಪಿಗೆ, ಆದರೆ….

ಯುದ್ಧ ತಂತ್ರಕ್ಕೆ ನೇರ ನೇತೃತ್ವ ಇಲ್ಲ

ಫೆಬ್ರವರಿ 28ರಂದು ನಡೆದ ದಾಳಿಯಲ್ಲಿ ಈ ಘಟನೆ ಸಂಭವಿಸಿದ್ದೇ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಈಗಿನ ಪರಿಸ್ಥಿತಿಯಲ್ಲಿ ಮೊಜ್ತಬಾ ಖಾಮೆನೇಯಿ ಇರಾನ್‌ನ ಯುದ್ಧ ತಂತ್ರವನ್ನು ನೇರವಾಗಿ ಮುನ್ನಡೆಸುತ್ತಿಲ್ಲ ಎಂದು ವರದಿಗಳು ಸೂಚಿಸುತ್ತವೆ.

ರಾಜ್ಯ ಮಾಧ್ಯಮಗಳಿಂದ ಹೇಳಿಕೆ ಪ್ರಸಾರ

ಇರಾನ್ ಸರ್ಕಾರಿ ಟಿವಿ, ಮೊಜ್ತಬಾ ಖಾಮೆನೇಯಿ ಅಧಿಕಾರ ಸ್ವೀಕರಿಸಿದ ನಂತರದ ಮೊದಲ ಹೇಳಿಕೆಯನ್ನು ಪ್ರಸಾರ ಮಾಡಿದೆ. ಆದರೆ ಆ ಹೇಳಿಕೆಯನ್ನು ಅವರು ಸ್ವತಃ ನೀಡದೇ, ಸುದ್ದಿ ವಾಚಕನ ಮೂಲಕ ಓದಿ ಕೇಳಿಸಲಾಗಿದೆ.

ಆ ಹೇಳಿಕೆಯಲ್ಲಿ ಇರಾನ್ ಜನರ ರಕ್ತಕ್ಕೆ ಪ್ರತೀಕಾರ ತೀರಿಸಲಾಗುವುದು ಮತ್ತು ಹಾರ್ಮುಜ್ ಜಲಸಂಧಿ ಸೇರಿ ಪ್ರಾದೇಶಿಕ ಸಾಗಾಟ ಮಾರ್ಗಗಳ ಮೇಲೆ ದಾಳಿಗಳನ್ನು ಮುಂದುವರಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ನಾಯಕತ್ವದ ಬಗ್ಗೆ ಅನುಮಾನ

ಮೊಜ್ತಬಾ ಖಾಮೆನೇಯಿ ಅವರ ಆರೋಗ್ಯ ಸ್ಥಿತಿಯಿಂದಾಗಿ, ಇರಾನ್‌ನ ಯುದ್ಧ ಕ್ರಮಗಳು ನೇರ ನಾಯಕತ್ವದ ಆದೇಶವಿಲ್ಲದೇ ಮುಂದುವರಿಯುತ್ತಿರುವ ಸಾಧ್ಯತೆ ಇದೆ ಎಂಬುದನ್ನೂ ವರದಿ ಉಲ್ಲೇಖಿಸಿದೆ.

ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು