ಪುತ್ತೂರು: ಆಹಾರದ ಮಹತ್ವವನ್ನು ಸಾರುವ ಮತ್ತು ವ್ಯರ್ಥವಾಗುವ ಅನ್ನವನ್ನು ಉಳಿಸುವ ನಿಟ್ಟಿನಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ ಮತ್ತು ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ “ಸಾಮಾಜಿಕ ಜಾಗೃತಿ”ಯಡಿ ವಿಶೇಷ ಉಪನ್ಯಾಸ ಕಾರ್ಯಕ್ರಮವು ಶನಿವಾರ ಸಂಜೆ ನೆಹರು ನಗರದ ನಿವೇದಿತಾ ವಸತಿ ನಿಲಯದಲ್ಲಿ ಯಶಸ್ವಿಯಾಗಿ ಜರುಗಿತು.
ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್‌ನ ಟ್ರಸ್ಟಿ ಗೋವರ್ಧನ್ ಕುಮಾರ್ ಐ ಅವರು ದೀಪ ಪ್ರಜ್ವಲನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಇಂತಹ ಕಾರ್ಯಕ್ರಮಗಳ ಅಗತ್ಯತೆಯನ್ನು ಒತ್ತಿಹೇಳಿದರು. ವಿವೇಕಾನಂದ ವಸತಿನಿಲಯಗಳ ಅಧ್ಯಕ್ಷರಾದ ರಮೇಶ್ ಪ್ರಭು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.


ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸಂಪನ್ಮೂಲ ವ್ಯಕ್ತಿ ಲಕ್ಷ್ಮೀಕಾಂತ ಕೆದ್ಲಾಯ ಅವರು “ತಿನ್ನುವ ಹಕ್ಕಿದೆ ಬಿಸಾಡುವ ಹಕ್ಕು ನಮಗಿಲ್ಲ” ಎಂಬ ವಿಷಯದ ಕುರಿತು ಪ್ರಬಲವಾಗಿ ಮಾತನಾಡಿದರು.
ನಾವು ವ್ಯರ್ಥ ಮಾಡುವ ಆಹಾರವು ಹಸಿವಿನಿಂದ ಬಳಲುತ್ತಿರುವ ಇನ್ನೊಬ್ಬರ ಪಾಲಿನ ಅನ್ನವನ್ನು ಕಸಿದುಕೊಂಡಂತೆ. ಸಭೆ-ಸಮಾರಂಭಗಳಲ್ಲಿ ಪ್ರತಿಷ್ಠೆಗಾಗಿ ಆಹಾರವನ್ನು ವ್ಯರ್ಥ ಮಾಡಬಾರದು ಎಂದರು.
ಇದನ್ನೂ ಓದಿ: ಅಪರೂಪದಲ್ಲಿ ಅಪರೂಪ! 25 ವರ್ಷದ ಗರ್ಭಿಣಿ ಜನ್ಮ ನೀಡಿದ ಮಗುವಿನ ಕೆಜಿ ಎಷ್ಟು ಗೊತ್ತಾ?
‘ಅನ್ನವೇ ಬ್ರಹ್ಮ’ ಎಂಬ ಭಾರತೀಯ ಸಂಸ್ಕೃತಿಯ ಮಹತ್ವವನ್ನು ತಿಳಿಸುತ್ತಾ, ಸಾತ್ವಿಕ, ತಾಮಸಿಕ ಮತ್ತು ರಾಜಸಿಕ ಆಹಾರಗಳ ನಡುವಿನ ವ್ಯತ್ಯಾಸವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.

ಕುಮಾರಿ ಮಾನ್ಯ ಪ್ರಾರ್ಥಿಸಿ ಕುಮಾರಿ ದೀಪಿಕಾ ಸ್ವಾಗತಿಸಿದರು. ಕುಮಾರಿ ಅಹನಲಕ್ಷ್ಮೀ ವಂದನಾರ್ಪಣೆ ಮಾಡಿ, ಕುಮಾರಿ ಪ್ರೇರಣಾ ನಿರೂಪಿಸಿದರು. ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್‌ನ ಬಿಪಿನ್ ಚಂದ್ರ ಕಾರ್ಯಕ್ರಮ ಸಂಯೋಜಿಸಿದರು. ವೇಕಾನಂದ ವಸತಿನಿಲಯಗಳ ಸಂಯೋಜಕರಾದ ಗೋವಿಂದರಾಜು ಶರ್ಮ, ವಸತಿ ನಿಲಯದ ಮೇಲ್ವಿಚಾರಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

