ಮುಂಬೈ: ಬ್ಯಾಟರ್ಗಳ ಅಬ್ಬರದೊಂದಿಗೆ ಬೃಹತ್ ಮೊತ್ತ ಪೇರಿಸಿದ ವೆಸ್ಟ್ ಇಂಡೀಸ್ ತಂಡ ಜಿಂಬಾಬ್ವೆ ವಿರುದ್ಧ ಭರ್ಜರಿ ಜಯ ದಾಖಲಿಸಿದೆ.
ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಸೂಪರ್-8 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ವಿಂಡೀಸ್ ತಂಡ ಶಿಮ್ರನ್ ಹೆಟ್ಮಯರ್ 85, ರೋಮ್ವನ್ ಪಾವೆಲ್ 59, ಶೇನ್ ರುಥರ್ಫೋರ್ಡ್ 31, ರೊಮೆರೊಯೊ ಶಫರ್ಡ್ 21 ರನ್ಗಳ ಸಹಾಯದಿಂದ 6 ವಿಕೆಟ್ ನಷ್ಟಕ್ಕೆ 254 ಬೃಹತ್ ಮೊತ್ತ ಗಳಿಸಿತು. ಜಿಂಬಾಬ್ವೆ ಪರ ರಿಚರ್ಡ್ ಎಂಗಾವರ, ಬ್ಲೆಸ್ಸಿಂಗ್ ಮುಜರಬಾನಿ ತಲಾ 2, ಬ್ರಾಡ್ ಇವಾನ್ಸ್ ಮತ್ತು ಗ್ರೀಮ್ ಕ್ರೀಮರ್ ತಲಾ ಒಂದು ವಿಕೆಟ್ ಪಡೆದರು.

ಇದನ್ನೂ ಓದಿ: Shocking: ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ, ಪ್ರಯಾಣಿಕರು ಪಾರು
ಗುರಿ ಬೆನ್ನತ್ತಿದ ಜಿಂಬಾಬ್ವೆ ತಂಡ 17.4 ಓವರ್ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 147 ರನ್ ಗಳಿಸಿ 107 ರನ್ ಅಂತರದಿಂದ ಸೋಲು ಕಂಡಿತು. ತಂಡದ ಪರ ಬ್ರಾಡ್ ಇವಾನ್ಸ್ 43, ಡಿಯೋನ್ ಮೈಯಾರ್ಸ್ 28, ಸಿಕಂದರ ರಾಜಾ 27 ರನ್ ಗಳಿಸಿದರು. ವಿಂಡೀಸ್ ಪರ ಗುದಕೇಶ್ ಮೋತಿ 4, ಅಕೀಲ್ ಹೊಸೇನ್ 3, ಮ್ಯಾಥ್ಯು ಫೋರ್ಡ್ 2, ಜೇಸನ್ ಹೋಲ್ಡರ್ ಒಂದು ವಿಕೆಟ್ ಪಡೆದರು.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

