ಮುಂಬೈ: ಟಿ-20 ವಿಶ್ವಕಪ್ ಪಂದ್ಯಾಟದ ‘ಸಿ’ ಗುಂಪಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಇಂಗ್ಲೆಂಡ್ ತಂಡದ ವಿರುದ್ಧ 30 ರನ್‌ಗಳ ಜಯ ದಾಖಲಿಸಿದೆ.
ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡ ನಿಗದಿತ 20 ಓವರ್‌ಗಳಲ್ಲಿ 196 ರನ್ ಗಳಿಸಿತು.

ಇದನ್ನೂ ಓದಿ: Shocking: ಕಾಲೇಜಿನಲ್ಲಿ ಅಪ್ರಾಪ್ತನಿಗೆ ಚೂರಿ ಇರಿತ, ಆಸ್ಪತ್ರೆಗೆ ದಾಖಲು
ಶೇನ್ ರುಥರ್ಫೋರ್ಡ್ 42 ಎಸೆತಗಳಲ್ಲಿ 76, ರೋಸ್ಟನ್ ಚೇಸ್ 34, ಜಾಸನ್ ಹೋಲ್ಡರ್ 33, ಶಿಮ್ರನ್ ಹೆಟ್ಮಯರ್ 23 ರನ್ ಗಳಿಸಿದರು. ಇಂಗ್ಲೆಂಡ್ ಪರ ಜೆಮಿ ಓವರ್‌ಟನ್ ಮತ್ತು ಆದಿಲ್ ರಶೀದ್ ತಲಾ 2 ಮತ್ತು ಜೋಫ್ರ ಆರ್ಚರ್ ಮತ್ತು ಸ್ಯಾಮ್ ಕರಾನ್ ತಲಾ ಒಂದು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡ 19 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 166 ರನ್ ಗಳಿಸಿತು. ತಂಡದ ಪರ ಸ್ಯಾಮ್ ಕರಾನ್ ಅಜೇಯ 43, ಜಾಕೊಬ್ ಬೆಥೆಲ್ 33, ಫಿಲ್ ಸಾಲ್ಟ್ 30, ಜೋಸ್ ಬಟ್ಲರ್ 21 ರನ್ ಗಳಿಸಿದರು.
ವೆಸ್ಟ್ ಇಂಡೀಸ್ ಪರ ಗುದಕೇಶ್ ಮೋತಿ 3, ರೋಸ್ಟನ್ ಚೇಸ್ 2, ಅಕಿಲ್ ಹೊಸೇನ್, ರೊಮೇರಿಯೊ ಶಫರ್ಡ್ ಮತ್ತು ಶಮರ್ ಜೋಸಫ್ ತಲಾ ಒಂದು ವಿಕೆಟ್ ಪಡೆದರು. ಇದರೊಂದಿಗೆ ಆಡಿದ ಎರಡು ಪಂದ್ಯಗಳನ್ನು ಗೆದ್ದು ವೆಸ್ಟ್ ಇಂಡೀಸ್ ಟೇಬಲ್ ಟಾಪರ್ ಆಗಿದೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

