ಪೆರಂಟ್ ಮ್ಯಾನೇಜ್ಡ್ ಅಕೌಂಟ್: ಮಕ್ಕಳಿಗಾಗಿ ಬಂತು ವಾಟ್ಸಪ್‌‌ ಹೊಸ ಫೀಚರ್

whatsapp-parent-managed-accounts-feature-children-safety-kannada

ಬೆಂಗಳೂರು: ಅಪ್ರಾಪ್ತ ಮಕ್ಕಳ ಡಿಜಿಟಲ್ ಸುರಕ್ಷತೆಯನ್ನು ಹೆಚ್ಚಿಸಲು ಮೆಟಾ ಕಂಪನಿಗೆ ಸೇರಿದ ವಾಟ್ಸಾಪ್ ‘Parent-Managed Accounts’ ಎಂಬ ಹೊಸ ಫೀಚರ್ ಪರಿಚಯಿಸಿದೆ. ಈ ಫೀಚರ್ ಮುಖ್ಯವಾಗಿ 13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗಾಗಿ ವಿನ್ಯಾಸಗೊಳಿಸಲಾಗಿದ್ದು, ಪೋಷಕರು ತಮ್ಮ ಮಕ್ಕಳ ವಾಟ್ಸಾಪ್ ಚಟುವಟಿಕೆಗಳನ್ನು ಗಮನಿಸಿ ನಿಯಂತ್ರಿಸಲು ಅವಕಾಶ ನೀಡುತ್ತದೆ.

ವಾಟ್ಸಾಪ್ ಮೂಲಕ ಮಕ್ಕಳು ಆನ್‌ಲೈನ್ ತರಗತಿಗಳು ಮತ್ತು ಕುಟುಂಬದವರೊಂದಿಗೆ ಸಂಪರ್ಕದಲ್ಲಿರುವುದರಿಂದ, ಅಪರಿಚಿತರ ಸಂಪರ್ಕ ಮತ್ತು ಗೌಪ್ಯತೆಯ ಬಗ್ಗೆ ಪೋಷಕರು ಆತಂಕ ವ್ಯಕ್ತಪಡಿಸುತ್ತಿದ್ದರು. ಈ ಹೊಸ ವ್ಯವಸ್ಥೆಯ ಮೂಲಕ ಪೋಷಕರಿಗೆ ಮಕ್ಕಳ ಡಿಜಿಟಲ್ ಚಟುವಟಿಕೆಗಳ ಮೇಲೆ ಸಂಪೂರ್ಣ ನಿಯಂತ್ರಣ ನೀಡಲಾಗಿದೆ.

Advertisement

ಪೋಷಕರಿಗೆ ಸಂಪೂರ್ಣ ನಿಯಂತ್ರಣ

ಈ ಫೀಚರ್‌ನಲ್ಲಿ ಪೋಷಕರು ತಮ್ಮ ಮಕ್ಕಳು ಯಾರೊಂದಿಗೆ ಚಾಟ್ ಮಾಡಬಹುದು, ಯಾವ ಗ್ರೂಪ್‌ಗಳಿಗೆ ಸೇರ್ಪಡೆಯಾಗಬಹುದು ಎಂಬುದನ್ನು ನಿರ್ಧರಿಸಬಹುದು. ಅಪರಿಚಿತ ಸಂಖ್ಯೆಯಿಂದ ಬರುವ ಮೆಸೇಜ್ ರಿಕ್ವೆಸ್ಟ್‌ಗಳನ್ನು ಮಕ್ಕಳು ನೇರವಾಗಿ ನೋಡಲು ಸಾಧ್ಯವಿಲ್ಲ. ಅವು ಮೊದಲು ಪೋಷಕರಿಗೆ ಹೋಗಿ ಅವರ ಅನುಮತಿ ನಂತರ ಮಾತ್ರ ಚಾಟ್ ಆರಂಭವಾಗುತ್ತದೆ.

ಇದನ್ನೂ ಓದಿ: ಪ್ಲೇಸ್ಟೋರ್ ಟ್ರೆಂಡಿಂಗ್: ಚಾಟ್‌ಜಿಪಿಟಿ, ಫ್ಲಿಪ್‌ಕಾರ್ಟ್‌ಗಿಂತ ಹೆಚ್ಚು ಡೌನ್‌ಲೋಡ್ ಆದ ಎಲ್‌ಪಿಜಿ ʼವನ್ ಆ್ಯಪ್‌ʼ

ಮಕ್ಕಳು ಪ್ರೈವಸಿ ಸೆಟ್ಟಿಂಗ್‌ಗಳನ್ನು ಬದಲಾಯಿಸದಂತೆ ಮಾಡಲು ಆರು ಅಂಕೆಯ ‘Parent PIN’ ವ್ಯವಸ್ಥೆಯನ್ನೂ ವಾಟ್ಸಾಪ್ ಪರಿಚಯಿಸಿದೆ.

ಕೆಲವು ಫೀಚರ್‌ಗಳಿಗೆ ನಿರ್ಬಂಧ

ಮಕ್ಕಳಿಗೆ ಅನಗತ್ಯ ವಿಷಯಗಳು ತಲುಪದಂತೆ ಕೆಲವು ಸಾಮಾನ್ಯ ವಾಟ್ಸಾಪ್ ಫೀಚರ್‌ಗಳನ್ನು ನಿರ್ಬಂಧಿಸಲಾಗಿದೆ.

  1. WhatsApp Status: ಮಕ್ಕಳು ಸ್ಟೇಟಸ್ ಪೋಸ್ಟ್ ಮಾಡಲು ಅಥವಾ ನೋಡಲು ಸಾಧ್ಯವಿಲ್ಲ
  2. Channels: ಸಾರ್ವಜನಿಕ ಬ್ರಾಡ್ಕಾಸ್ಟ್ ಚಾನೆಲ್‌ಗಳಿಗೆ ಪ್ರವೇಶ ಇರುವುದಿಲ್ಲ
  3. Meta AI: 13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಳಕೆದಾರರಿಗೆ AI ಚಾಟ್‌ಬಾಟ್ ಲಭ್ಯವಿರುವುದಿಲ್ಲ

ಪೆರಂಟ್ ಮ್ಯಾನೇಜ್ಡ್ ಅಕೌಂಟ್ ಹೇಗೆ ಸಕ್ರಿಯಗೊಳಿಸಬೇಕು?

ಪೋಷಕರು ಈ ಕ್ರಮಗಳನ್ನು ಅನುಸರಿಸಿ ಫೀಚರ್ ಸಕ್ರಿಯಗೊಳಿಸಬಹುದು:

  • ಮಗುವಿನ ಫೋನ್‌ನಲ್ಲಿ ವಾಟ್ಸಾಪ್ ಇನ್‌ಸ್ಟಾಲ್ ಮಾಡಿ ಭಾಷೆ ಆಯ್ಕೆಮಾಡಿ
  • More Options ನಲ್ಲಿ “Create a Parent-Managed Account” ಆಯ್ಕೆ ಮಾಡಿ
  • ಮಗುವಿನ ಮೊಬೈಲ್ ನಂಬರ್ ಮತ್ತು ಜನ್ಮ ದಿನಾಂಕ ನಮೂದಿಸಿ
  • ಪೋಷಕರ ಫೋನ್‌ನಿಂದ QR ಕೋಡ್ ಸ್ಕ್ಯಾನ್ ಮಾಡಿ ಅಕೌಂಟ್ ಲಿಂಕ್ ಮಾಡಿ
  • ಪೋಷಕರು 18 ವರ್ಷ ಮೇಲ್ಪಟ್ಟವರಾಗಿರುವುದನ್ನು ದೃಢೀಕರಿಸಿ 6 ಅಂಕೆಯ Parent PIN ರಚಿಸಿ
  • ಆ ಪಿನ್ ಅನ್ನು ಮಗುವಿನ ಫೋನ್‌ನಲ್ಲಿ ನಮೂದಿಸಿ ಸೆಟಪ್ ಪೂರ್ಣಗೊಳಿಸಿ

ಡಿಜಿಟಲ್ ಸುರಕ್ಷತೆಗೆ ಮಹತ್ವದ ಹೆಜ್ಜೆ

ಇತ್ತೀಚೆಗೆ ಕರ್ನಾಟಕ ಮತ್ತು ಆಂಧ್ರಪ್ರದೇಶ ಸೇರಿದಂತೆ ಕೆಲವು ರಾಜ್ಯಗಳು 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ನಿರ್ಬಂಧ ವಿಚಾರವನ್ನು ಪರಿಗಣಿಸುತ್ತಿರುವ ಹಿನ್ನೆಲೆ ಮೆಟಾ ಈ ಹೊಸ ಫೀಚರ್ ಪರಿಚಯಿಸಿದೆ.

ನೇರ ನಿಷೇಧಕ್ಕಿಂತ ಪೋಷಕರ ಮೇಲ್ವಿಚಾರಣೆಯೊಂದಿಗೆ ಸುರಕ್ಷಿತ ಬಳಕೆ ಉತ್ತಮ ಪರಿಹಾರವಾಗಬಹುದು ಎಂಬ ಸಂದೇಶವನ್ನು ಈ ಫೀಚರ್ ನೀಡುತ್ತಿದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು