ನವಿ ಮುಂಬೈ: ಇಲ್ಲಿನ ಡಾ.ಡಿ.ವೈ.ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಆರ್‌ಸಿಬಿ ತಂಡ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಡೆಲ್ಲಿ, 20 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 166 ರನ್ ಬಾರಿಸಿತು. 167 ರನ್‌ಗಳ ಗುರಿ ಬೆನ್ನಟ್ಟಿದ ಆರ್‌ಸಿಬಿ, 10 ಬಾಲ್‌ಗಳು ಬಾಕಿ ಇರುವಾಗಲೇ (18.2 ಓವರ್) 169 ರನ್ ಬಾರಿಸಿ ಗೆಲುವಿನ ನಗೆ ಬೀರಿತು.

ಡೆಲ್ಲಿ ಪರ ಶಫಾಲಿ ವರ್ಮಾ 41 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸ್‌ಗಳನ್ನು ಸಿಡಿಸಿ 62 ರನ್ ಗಳಿಸಿದರು. ಉಳಿದಂತೆ, ಲಿಜೆಲ್ ಲೀ 4, ನಿಕಿ ಪ್ರಸಾದ್ 12, ಮಿನ್ನು ಮಣಿ 5, ಸ್ನೇಹ್ ರಾಣಾ 22, ಲೂಸಿ ಹ್ಯಾಮಿಲ್ಟನ್ 36, ನಲ್ಲಪುರರೆಡ್ಡಿ ಚರಣಿ 11, ನಂದಿನಿ ಶರ್ಮಾ 1 ರನ್ ಗಳಿಸಿದರೆ, ಲಾರಾ ವೋಲ್ವಾರ್ಡ್ ಮತ್ತು ಮರಿಜಾನ್ನೆ ಕಪ್ಪ್ ಶೂನ್ಯ ಸುತ್ತಿದರು.
ಇದನ್ನೂ ಓದಿ: WPL MI vs UPW: ಮುಂಬೈ ಇಂಡಿಯನ್ಸ್ ವಿರುದ್ಧ ವಾರಿಯರ್ಸ್‌ಗೆ ಗೆಲುವು
ಆರ್‌ಸಿಬಿ ಪರ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರಿದ ತಂಡದ ನಾಯಕಿ ಸ್ಮೃತಿ ಮಂಧಾನ 61 ಎಸೆತಗಳಲ್ಲಿ 13 ಬೌಂಡರಿ ಹಾಗೂ 3 ಸಿಕ್ಸರ್ ಸಿಡಿಸಿ 96 ರನ್ ಸಿಡಿಸಿದರು. ಶತಕ ಬಾರಿಸಲು 4 ರನ್‌ಗಳು ಅವಶ್ಯಕತೆ ಇರುವಾಗ ಮಾರಿಜಾನ್ನೆ ಕಪ್ಪ್ ಅವರ ಓವರ್‌ನಲ್ಲಿ ಶಫಾಲಿ ವರ್ಮಾ ಅವರಿಗೆ ಕ್ಯಾಚ್ ನೀಡಿದರು.
ಜಾರ್ಜಿಯಾ ವೋಲ್ ಅವರು 42 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸ್‌ಗಳನ್ನು ಬಾರಿಸಿ 54 ರನ್ ಬಾರಿಸಿದರು. ಇನ್ನುಳಿಂದತೆ ಗ್ರೇಸ್ ಹ್ಯಾರೀಸ್ 1, ರಿಚಾ ಫೋಷ್ 7 ರನ್ ಬಾರಿಸಿದರು.
ಆರ್‌ಸಿಬಿ ಪರ ಲಾರೆನ್ ಬೆಲ್, ಸಯಾಲಿ ಸತ್ವರೆ ತಲಾ 3 ವಿಕೆಟ್ ಕಬಳಿಸಿದರೆ, ಪ್ರೇಮಾ ರಾವತ್ 2, ನಡಿನ್ ಡಿ ಕ್ಲರ್ಕ್ 1 ವಿಕೆಟ್ ಪಡೆದರು. ಡೆಲ್ಲಿ ಪರ ಮಾರಿಜಾನ್ನೆ ಕಪ್ಪ್ ಮತ್ತು ನಂದಿನಿ ಶರ್ಮಾ ತಲಾ 1 ವಿಕೆಟ್ ಪಡೆದರು.
ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

